More

    ಶಾಲೆಯ ಲಿಫ್ಟ್​ ಬಾಗಿಲುಗಳ​ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ

    ಮುಂಬೈ: ಶಾಲೆಯ ಲಿಫ್ಟ್​ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಒಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಉತ್ತರ ಮುಂಬೈನ ಉಪನಗರ ಮಲಾಡ್​ನ ಚಿಂಚೋಳಿ ಬಂಡರ್​ನಲ್ಲಿರುವ ಸೆಂಟ್​ ಮೇರಿಸ್​ ಇಂಗ್ಲಿಷ್​ ಹೈಸ್ಕೂಲ್​ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಜೆನೆಲ್​ ಫರ್ನಾಂಡೀಸ್​ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಗಂಟೆಗೆ ಶಾಲಾ ಕಟ್ಟಡದ 6ನೇ ಮಹಡಿಯಲ್ಲಿದ್ದ ಜೆನೆಲ್​, ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಲಿಫ್ಟ್​ಗಾಗಿ ಕಾಯುತ್ತಿದ್ದರು.

    ಲಿಫ್ಟ್​ ಬರುತ್ತಿದ್ದಂತೆ ಅದರೊಳಗೆ ಜೆನೆಲ್​ ಎಂಟ್ರಿಯಾಗುವಾಗ ಲಿಫ್ಟ್​ ಬಾಗಿಲು ಮುಚ್ಚಿವೆ. ಬಾಗಿಲಗಳ ನಡುವೆಯೇ ಜೆನೆಲ್​ ಸಿಲುಕಿದ್ದು, ಲಿಫ್ಟ್​ ಚಲಿಸುಲು ಆರಂಭಿಸಿದೆ. ಈ ವೇಳೆ ಜೆನೆಲ್​ ಅಲ್ಲಿಯೇ ಸಿಲುಕಿ ದುರಂತವಾಗಿ ಮೃತಪಟ್ಟಿದ್ದಾಳೆ ಎಂದು ವಲಯ 11ರ ಉಪ ಪೊಲೀಸ್​ ಆಯುಕ್ತ ವಿಶಾಲ್​ ಠಾಕೂರ್​ ತಿಳಿಸಿದ್ದಾರೆ.

    ಲಿಫ್ಟ್​ ಬಾಗಿಲಗಳ ನಡುವೆ ಜೆನೆಲ್​ ಸಿಲುಕಿರುವುದನ್ನು ನೋಡಿ ತಕ್ಷಣ ಸಿಬ್ಬಂದಿ ಓಡಿ ಬಂದು ಆಕೆಯನ್ನು ಲಿಫ್ಟ್​ನಿಂದ ಹೊರಗಳೆದಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆನೆಲ್​ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

    ಪ್ರಾಥಮಿಕ ತನಿಖೆಯ ಸಮಯದಲ್ಲಿ, ನಾವು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿದ್ದೇವೆ. ಇದರಲ್ಲಿ ಯಾವುದಾದರೂ ಸಂಶಯ ಬರುವಂತಹ ಘಟನೆ ನಡೆದಿದ್ದರೆ, ಅದರಂತೆ ಕಾರ್ಯನಿರ್ವಹಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. (ಏಜೆನ್ಸೀಸ್​)

    ವಿಶ್ವದ ಐಕ್ಯತೆ, ಸಾಮರಸ್ಯ, ಪ್ರಗತಿಗೆ ಧ್ವನಿಯಾಗಲಿ..

    ಸಣ್ಣ ಕೆರೆಗಳು ಗ್ರಾಪಂ ವ್ಯಾಪ್ತಿಗೆ: ಒತ್ತುವರಿ ತೆರವಿಗೆ ಕ್ರಮ, ಸಮಗ್ರ ಅಭಿವೃದ್ಧಿಗೆ ಯೋಜನೆ..

    ಶೋ ಟಾಪರ್ ಆದ ರೂಪೇಶ್ ಶೆಟ್ಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts