More

    ಅಶ್ಲೀಲ ಫೋಟೋ ಕಳುಹಿಸಿದವನ ಅಕೌಂಟ್​ ರಿಪೋರ್ಟ್​ ಮಾಡಿದ್ದಕ್ಕೆ ಖ್ಯಾತ ಗಾಯಕಿಗೆ ಶಾಕ್​ ಕೊಟ್ಟ Instagram!

    ಚೆನ್ನೈ: ಖ್ಯಾತ ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಚಿನ್ಮಯಿ ಮತ್ತು ರಾಹುಲ್​ ರವಿಂದ್ರನ್​ ದಂಪತಿಗೆ ಅವಳಿ ಮಕ್ಕಳಾಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿದ್ದು, ದೃಪ್ತ ಮತ್ತು ಶರ್ವಸ್ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ, ಮಕ್ಕಳ ಫೋಟೋವನ್ನು ಚಿನ್ಮಯಿ ಶೇರ್​ ಮಾಡಿಕೊಂಡಿದ್ದಾರೆ. ಇದಿಷ್ಟು ಸಿಹಿಯಾದರೆ, ಚಿನ್ಮಯಿ ಅವರು ಇದೀಗ ಕಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

    ಕೆಲವು ಸಮಯದಿಂದ ಅನೇಕ ಪುರುಷರು ತಮ್ಮ ಖಾಸಗಿ ಅಂಗಗಳ ‘ಕೊಳಕು’ ಚಿತ್ರಗಳನ್ನು ಗಾಯಕಿ ಚಿನ್ಮಯಿ ಅವರ ಇನ್​​ಸ್ಟಾಗ್ರಾಂ ಖಾತೆಗೆ ಕಳುಹಿಸುತ್ತಿದ್ದಾರೆ. ಈ ವಿಚಾರವನ್ನು ಅವರೇ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ. ಅಶ್ಲೀಲ ಫೋಟೋಗಳ ವಿರುದ್ಧ ಧ್ವನಿ ಎತ್ತುವ ಚಿನ್ಮಯಿ, ಫೋಟೋ ಕಳುಹಿಸುವ ಖಾತೆಗಳನ್ನು ರಿಪೋರ್ಟ್​ ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ರಿಪೋರ್ಟ್​ ಮಾಡಿದಾಗ ಇನ್​ಸ್ಟಾಗ್ರಾಂ, ಚಿನ್ಮಯಿ ಅವರ ಖಾತೆಯನ್ನೇ ಬ್ಲಾಕ್​ ಮಾಡಿರುವ ಸಂಗತಿಯನ್ನು ಚಿನ್ಮಯಿ ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಚಿನ್ಮಯಿ, ನನಗೆ ಖಾಸಗಿ ಅಂಗದ ಚಿತ್ರ ಕಳುಹಿಸಿದ ಪುರುಷರ ಇನ್​​ಸ್ಟಾಗ್ರಾಂ ಖಾತೆಗಳನ್ನು ರಿಪೋರ್ಟ್​ ಮಾಡಿದ್ದಕ್ಕೆ ಇನ್​ಸ್ಟಾಗ್ರಾಂ ನನ್ನ ಖಾತೆಯನ್ನೇ ತೆಗೆದುಹಾಕಿದೆ. ಸ್ವಲ್ಪ ಸಮಯದಿಂದ ನಾನು ವರದಿ ಮಾಡುತ್ತಿದ್ದೇನೆ ಆದರೆ, ನನ್ನ ಪ್ರವೇಶವನ್ನೇ ಇನ್​ಸ್ಟಾಗ್ರಾಂ ನಿರ್ಬಂಧಿಸಿದೆ ಎಂದು ಚಿನ್ಮಯಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಅವರು ಪ್ರತಿದಿನ ಎದುರಿಸುತ್ತಿರುವ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

    ಚಿನ್ಮಯಿ ಅವರು #MeToo ವಿರುದ್ಧ ಧ್ವನಿ ಎತ್ತುವ ಮೂಲಕ ಭಾರೀ ಸುದ್ದಿಯಾಗಿದ್ದಲ್ಲದೆ, ಖ್ಯಾತಿಯನ್ನು ಗಳಿಸಿಕೊಂಡರು. ಮಹಿಳೆಯರನ್ನು ಶೋಷಿಸುವ ಮತ್ತು ಯುವತಿಯರೊಂದಿಗೆ ಲೈಂಗಿಕವಾಗಿ ಅಸಭ್ಯವಾಗಿ ವರ್ತಿಸುವ ತಮಿಳು ಚಲನಚಿತ್ರೋದ್ಯಮದ ಅನೇಕ ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಿದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಚಿನ್ಮಯಿ ಅವರು ಅನಗತ್ಯ ಕಿರುಕುಳವನ್ನು ಎದುರಿಸುತ್ತಿದ್ದಾರೆ. (ಏಜೆನ್ಸೀಸ್​)

    ವಕೀಲಿ ವೃತ್ತಿ ಆರಂಭಿಸಿದ ಆರೇ ತಿಂಗಳಿಗೆ ದುರಂತ ಸಾವಿಗೀಡಾದ ಯುವತಿ: ಕಾರಣ ನಿಗೂಢ!

    ಶರದ್​ ಪವಾರ್​ ವಿರುದ್ಧದ ಫೇಸ್​​ಬುಕ್​ ಪೋಸ್ಟ್​: ಮರಾಠಿ ನಟಿಗೆ ಕೊನೆಗೂ ಸಿಕ್ತು ಜಾಮೀನು

    ಅಗ್ನಿಪಥ್ ವಿರೋಧಿಸುವ ನೆಪದಲ್ಲಿ ಕೆಲ ರಾಜಕೀಯ ಶಕ್ತಿಗಳು ಬೇಳೆ ಬೇಯಿಸಿಕೊಳ್ಳುತ್ತಿವೆ: ಬಿ.ವೈ.ರಾಘವೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts