ಶರದ್​ ಪವಾರ್​ ವಿರುದ್ಧದ ಫೇಸ್​​ಬುಕ್​ ಪೋಸ್ಟ್​: ಮರಾಠಿ ನಟಿಗೆ ಕೊನೆಗೂ ಸಿಕ್ತು ಜಾಮೀನು

ಥಾಣೆ: ಎನ್​ಸಿಪಿ ನಾಯಕ ಶರದ್​ ಪವಾರ್​ ವಿರುದ್ಧ ಅವಹೇಳನಕಾರಿ ಪೋಸ್ಟ್​​ ಮಾಡಿ ಜೈಲು ಸೇರಿದ್ದ ಮರಾಠಿ ನಟಿ ಕೇತ್ಕಿ ಚಿತಲೆಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಜಿಲ್ಲಾ ನ್ಯಾಯಾಧೀಶ ಎಚ್​.ಎಂ. ಪಟವರ್ಧನ್​​ ಅವರು, ಶುಕ್ರವಾರ 20,000 ರೂ.ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಮೇ 14 ರಂದು ಕೇತ್ಕಿ ಚಿತಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೇ ಜೈಲಿನಿಂದ ಬಿಡುಗಡೆಯಾಗಿದ್ದು, ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಜೈ ಹಿಂದ್​, ಜೈ ಮಹಾರಾಷ್ಟ್ರ ಎಂಬಷ್ಟೇ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಕಿಡಿಗೇಡಿತನ, ಮಾನಹಾನಿ ಗುಂಪುಗಳ ನಡುವೆ … Continue reading ಶರದ್​ ಪವಾರ್​ ವಿರುದ್ಧದ ಫೇಸ್​​ಬುಕ್​ ಪೋಸ್ಟ್​: ಮರಾಠಿ ನಟಿಗೆ ಕೊನೆಗೂ ಸಿಕ್ತು ಜಾಮೀನು