More

    ಶರದ್​ ಪವಾರ್​ ವಿರುದ್ಧದ ಫೇಸ್​​ಬುಕ್​ ಪೋಸ್ಟ್​: ಮರಾಠಿ ನಟಿಗೆ ಕೊನೆಗೂ ಸಿಕ್ತು ಜಾಮೀನು

    ಥಾಣೆ: ಎನ್​ಸಿಪಿ ನಾಯಕ ಶರದ್​ ಪವಾರ್​ ವಿರುದ್ಧ ಅವಹೇಳನಕಾರಿ ಪೋಸ್ಟ್​​ ಮಾಡಿ ಜೈಲು ಸೇರಿದ್ದ ಮರಾಠಿ ನಟಿ ಕೇತ್ಕಿ ಚಿತಲೆಗೆ ಕೊನೆಗೂ ಜಾಮೀನು ಮಂಜೂರಾಗಿದೆ.

    ಜಿಲ್ಲಾ ನ್ಯಾಯಾಧೀಶ ಎಚ್​.ಎಂ. ಪಟವರ್ಧನ್​​ ಅವರು, ಶುಕ್ರವಾರ 20,000 ರೂ.ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ.

    ಮೇ 14 ರಂದು ಕೇತ್ಕಿ ಚಿತಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೇ ಜೈಲಿನಿಂದ ಬಿಡುಗಡೆಯಾಗಿದ್ದು, ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಜೈ ಹಿಂದ್​, ಜೈ ಮಹಾರಾಷ್ಟ್ರ ಎಂಬಷ್ಟೇ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕ ಕಿಡಿಗೇಡಿತನ, ಮಾನಹಾನಿ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕಾಯ್ದೆಯಡಿಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು. 29 ವರ್ಷದ ನಟಿ ಪ್ರಸ್ತುತ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ 20 ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದಾರೆ.(ಏಜೆನ್ಸೀಸ್​)

    ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ

    ಎಚ್ಚೆತ್ತುಕೊಳ್ಳದ ಖಾಸಗಿ ಬಸ್​​: ಅಪಾಯ ಲೆಕ್ಕಿಸದೇ ಬಸ್​​ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts