More

    ಕಾರ್ಮಿಕರ ದಿನದಂದೇ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್​: LPG ಸಿಲಿಂಡರ್​ ಬೆಲೆಯಲ್ಲಿ 102.50 ರೂ. ಹೆಚ್ಚಳ

    ನವದೆಹಲಿ: ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,335.50 ರೂಪಾಯಿಗೆ ಏರಿಕೆಯಾಗಿದೆ.

    ಫೆಬ್ರವರಿ 1ರ ಬಜೆಟ್​ ದಿನದಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ 91.50 ರೂಪಾಯಿ ಇಳಿಕೆ ಕಂಡಿತ್ತು. ಈ ವೇಳೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರಿನ ಬೆಲೆ 1907 ರೂಪಾಯಿ ಇತ್ತು. ಇದಾದ ಬೆನ್ನಲ್ಲೇ ಮಾರ್ಚ್​ 1ರಂದು ಎಲ್​ಪಿಜಿ ಸಿಲಿಂಡರಿನ ಬೆಲೆ 105 ರೂ. ಏರಿಕೆ ಕಂಡು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿತ್ತು.

    ಏಪ್ರಿಲ್​ 1ರಂದು ಮತ್ತೆ ದರ ಏರಿಕೆಯಾಗಿತ್ತು. ಬರೋಬ್ಬರಿ 250 ರೂಪಾಯಿ ಏರಿಕೆಯಾಗಿ, 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,253 ರೂಪಾಯಿ ತಲುಪಿತ್ತು. ಇದೀಗ ಮೇ 1ರ ಕಾರ್ಮಿಕ ದಿನದಂದು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್​ನ ಬೆಲೆಯಲ್ಲಿ 102.50 ರೂಪಾಯಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,335.50 ರೂಪಾಯಿ ತಲುಪಿದೆ. ಈ ಮೂಲಕ ಗ್ರಾಹಕರ ಜೇಬು ಮತ್ತಷ್ಟು ಸುಡಲಿದೆ.

    ವಾಣಿಜ್ಯ ಬಳಕೆ ಸಿಲಿಂಡರ್​ ದರ ಏರಿಕೆಯಿಂದ ಹೋಟೆಲ್​ ತಿಂಡಿ ತಿನಿಸುಗಳ ಬೆಲೆ ಸಹಜವಾಗಿ ಏರಿಕೆಯಾಗಿದ್ದು, ಇದರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಇನ್ನು 5 ಕೆಜಿ ಸಿಲಿಂಡರ್​ನ ಬೆಲೆ 655 ರೂಪಾಯಿ ಆಗಿದೆ. (ಏಜೆನ್ಸೀಸ್​)

    ಮೇಡಂ ನೀವು ಮುಂದಿನ ಮಹಾರಾಷ್ಟ್ರ ಸಿಎಂ ಈ ರೀತಿ ಡ್ರೆಸ್​ ಹಾಕ್ಬೇಡಿ: ಕಂಗನಾರ ಹಾಟ್​ ಅವತಾರ ಕಂಡು ಬೇಸರ!

    PSI ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ!

    ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts