More

    ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!

    ದುಬೈ: ಪ್ರಖ್ಯಾತ ವ್ಲಾಗರ್​ ಮತ್ತು ಮಲಯಾಳಂ ಆಲ್ಬಂ ಸ್ಟಾರ್​ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಆಡಿಯೋ ಕ್ಲಿಪ್​ ಒಂದು ಸ್ಫೋಟಕ ತಿರುವು ನೀಡಿದೆ. ಮಾರ್ಚ್​ 1ರ ರಾತ್ರಿ ದುಬೈನ ತಮ್ಮ ಫ್ಲ್ಯಾಟ್​ನಲ್ಲಿ ರಿಫಾ ಶವವಾಗಿ ಪತ್ತೆಯಾಗಿದ್ದರೂ ಸಾವಿಗೂ ಮುನ್ನ ರಿಫಾ ತನ್ನ ಆಪ್ತರೊಬ್ಬರಿಗೆ ಕಳುಹಿಸಿರುವ ಆಡಿಯೋ ಸಂದೇಶ ಇಡೀ ಪ್ರಕರಣಕ್ಕೆ ಬೇರೆ ತಿರುವು ನೀಡಿದೆ.

    ರಿಫಾಳ ಆಡಿಯೋ ಸಂದೇಶದಲ್ಲಿ ರೂಮ್‌ಮೇಟ್‌ನ ವಿರುದ್ಧ ಆರೋಪಗಳಿವೆ. ಮೆಹನು ಅಸ್ತಿತ್ವದಲ್ಲಿದ್ದಾಳೆ ಎಂಬ ವಿಶ್ವಾಸದಿಂದ ನಾನು ಮಲಗುತ್ತೇನೆ. ನಿನ್ನೆ ಬುರ್ಜ್​ ಖಲೀಫಾಗೆ ಹೋಗಿ ತುಂಬಾ ದಣಿವಾಗಿದ್ದೇನೆ. ನಾನು ನಿದ್ರೆಗೆ ಜಾರಿದಾಗ ಈ ಸ್ನೇಹಿತ, ಜಮ್ಶಾದ್ ನನ್ನನ್ನು ಪ್ರಚೋದಿಸುತ್ತಾನೆ. ಫ್ಯಾನ್ ಆಫ್ ಆಗಿದೆ. ಏನನ್ನೋ ಆಡುತ್ತಿದ್ದಾರೆ. ಮೆಹನು ಇದ್ದಾನೆ ಎಂಬ ವಿಶ್ವಾಸದಲ್ಲಿ ನಾನು ಕೋಣೆಯಲ್ಲಿ ಮಲಗಿದ್ದೇನೆ. ಆದರೆ, ನಿದ್ರಿಸಲು ಈ ಜಮ್ಶಾದ್​ ಬಿಡುತ್ತಿಲ್ಲ ಎಂದು ರಿಫಾ ಹೇಳಿದ್ದಾರೆ.

    ಜಮ್ಶಾದ್ ಎಷ್ಟೇ ಮುಂಭಾಗದಲ್ಲಿದ್ದರೂ ಒಬ್ಬರೇ ಮಲಗಿದಾಗ ಯಾರಿಗಾದರೂ ಏನಾದರೂ ಅನಿಸಬಹುದು. ಮೆಹನು ಹೊಂದುವ ವಿಶ್ವಾಸದಲ್ಲಿ ನಾನು ಸುಳ್ಳು ಹೇಳುತ್ತೇನೆ. ಮೆಹನು ಹೋದಂತೆ ತೋರುತ್ತಿದೆ. ನಾನು ಸಾಕಷ್ಟು ಕೋಪಗೊಂಡಿದ್ದೆ. ನಿದ್ದೆ ಮಾಡದೆ ಬೆಳಗಾಗುವವರೆಗೂ ಕಾಯಬೇಕಾಯಿತು. ಯಾಕೆಂದರೆ ಜಮ್ಶಾದ್ ಹೀಗೆ ಪ್ರಚೋದಿಸುತ್ತಿದ್ದಾನೆ. ಯಾವಾಗ ಅಂತ ಗೊತ್ತಿಲ್ಲ. ಮೆಹನುವಿಗೆ ಈ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂಬುದು ರಿಫಾ ಆಡಿಯೋ ಸಂದೇಶದಲ್ಲಿದೆ.

    ಇದಕ್ಕೂ ಮುನ್ನ ರಿಫಾ ಸಾವಿನ ಹಿಂದೆ ಏನೋ ಅನ್ಯಾಯ ನಡೆದಿದೆ ಎಂದು ಆರೋಪಿಸಿರುವ ಕುಟುಂಬ ಬಹುಶಃ ಆಕೆ ಕೌಟುಂಬಿಕ ಕಲಹದ ಸಂತ್ರಸ್ತೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ರಿಫಾ ಪತಿ ಮತ್ತು ಆಕೆಯ ಅತ್ತೆ ಮನೆಯವರು ಆರೋಪವನ್ನು ಅಲ್ಲಗೆಳೆದಿದ್ದಾರೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಗಳನ್ನು ಉಲ್ಲೇಖಿಸಿ, ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ.

    ಇನ್ನು ರಿಫಾ ಮತ್ತು ಪತಿಯ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದು ಆಕೆಯ ಆಪ್ತರು ಹೇಳಿದ್ದಾರೆ. ಕುಟುಂಬದ ಆದಾಯ ಖರ್ಚು ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. ರಿಫಾ ಸಾವಿಗೆ ಪ್ರಚೋದನೆ ನೀಡಲಾಗಿದ್ದು, ಪತಿಯನ್ನು ಈ ಕ್ಷಣ ವಿಚಾರಣೆಗೆ ಒಳಪಡಿಸಬೇಕು ಎಂದು ರಿಫಾ ಆಪ್ತರು ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಅಂದಹಾಗೆ ರಿಫಾ, ಕೇರಳದ ಕೊಯಿಕ್ಕೋಡ್​ ನಗರದ ಬಲುಸ್ಸೆರಿ ಮೂಲದ ನಿವಾಸಿ. ದುಬೈನ ಜಫ್ಫಿಲಿಯಾದಲ್ಲಿರುವ ಫ್ಲ್ಯಾಟ್​ನಲ್ಲಿ ಮಾರ್ಚ್​ 1ರಂದು ಶವವಾಗಿ ಪತ್ತೆಯಾಗಿದ್ದರು. ತಮ್ಮ ಪತಿ ಮೆಹ್ನೋವ್​ ಮತ್ತು ಮಗಳ ಜತೆ ದುಬೈನಲ್ಲಿ ನೆಲೆಸಿದ್ದರು. ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ, ಪತಿಯ ಮನೆಯವರು ಆತ್ಮಹತ್ಯೆ ಎಂದರೆ, ರಿಫಾ ಪಾಲಕರು ಮತ್ತು ಆಪ್ತರು ಸಂಶಯ ವ್ಯಕ್ತಪಡಿಸಿದ್ದಾರೆ.

    ರಿಫಾ ಅವರು ಆಹಾರ ಮತ್ತು ಫ್ಯಾಶನ್​ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಕೇರಳದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ರಿಫಾ ಬಿಜಿಯಾಗಿರುತ್ತಿದ್ದರು. ಸಾವಿಗೂ ಕೆಲವು ಕ್ಷಣಗಳ ಹಿಂದೆಯೂ ಆಕೆ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ರಿಫಾ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

    ಯುಎಇಯ ಜನಪ್ರಿಯ ಹೋಟೆಲ್‌ನಲ್ಲಿ ರಿಫಾ ಮತ್ತು ಅವರ ಪತಿ ಆಹಾರವನ್ನು ತಿನ್ನುತ್ತಿರುವ ಅವರ ಕೊನೆಯ ವಿಡಿಯೋಗೆ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ರಿಫಾ ಕಳೆದುಕೊಂಡ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ.

    ತೈಲಾಘಾತದ ಹೊಡೆತ: ಕಚ್ಚಾತೈಲ, ಅಡುಗೆ ಎಣ್ಣೆ, ಚಿನ್ನ ದಾಖಲೆ ಜಿಗಿತ

    ಪಂಚಾಯ್ತಿ ಎಲೆಕ್ಷನ್ ವಿಘ್ನಕ್ಕೆ ಮೋಕ್ಷ?; ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಮೀಸಲಾತಿ ಕಾರ್ಯ

    ಯೋಗಿಗೆ ಮತ್ತೆ ಯೋಗ!: ಉ.ಪ್ರ, ಉತ್ತರಾಖಂಡ, ಮಣಿಪುರಕ್ಕೆ ಕಮಲ; ಆಪ್​ಗೆ ಪಂಜಾಬ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts