ಯೋಗಿಗೆ ಮತ್ತೆ ಯೋಗ!: ಉ.ಪ್ರ, ಉತ್ತರಾಖಂಡ, ಮಣಿಪುರಕ್ಕೆ ಕಮಲ; ಆಪ್​ಗೆ ಪಂಜಾಬ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಪಂಚರಾಜ್ಯಗಳ ಮತ ಸಮರಕ್ಕೆ ತೆರೆಬಿದ್ದ ಕೆಲವೇ ಕ್ಷಣಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಕುತೂಹಲ ಬಹಿರಂಗಗೊಂಡಿದೆ. ಬಹುತೇಕ ಸರ್ವೆಗಳು ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಆಪ್) ನಿಚ್ಚಳ ಬಹುಮತ ಎಂದು ಭವಿಷ್ಯ ನುಡಿದರೆ, ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟಗಳು ಸಮಬಲ ಸಾಧಿಸಿದರೂ ಕೂದಲೆಳೆಯ ಅಂತರದಲ್ಲಿ ಬಹುಮತದಿಂದ ವಂಚಿತವಾಗಬಹುದೆಂದು ಅಂದಾಜಿಸಿವೆ. ಉತ್ತರಕ್ಕೆ ಬಿಜೆಪಿಯೇ ಉತ್ತರ: ದೆಹಲಿ ಗದ್ದುಗೆಯ ಕೈಮರ ಎಂದೇ ಹೇಳಲಾಗುವ … Continue reading ಯೋಗಿಗೆ ಮತ್ತೆ ಯೋಗ!: ಉ.ಪ್ರ, ಉತ್ತರಾಖಂಡ, ಮಣಿಪುರಕ್ಕೆ ಕಮಲ; ಆಪ್​ಗೆ ಪಂಜಾಬ್