More

    ಶೂಟೌಟ್​ ಕೇಸ್​ ಬೆನ್ನಲ್ಲೇ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ದೆಹಲಿಯಲ್ಲಿ ಇನ್ಮುಂದೆ ಸಿಂಹಿಣಿಯರ ಘರ್ಜನೆ

    ನವದೆಹಲಿ: ಪೊಲೀಸ್​ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವ ನಿಟ್ಟಿನಲ್ಲಿ ದೆಹಲಿ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿರುವ ಪೊಲೀಸ್​ ಆಯುಕ್ತ ರಾಕೇಶ್​ ಆಸ್ಥಾನ ಅವರು ಡಿಸಿಪಿ (ಡೆಪ್ಯೂಟಿ ಕಮಿಷನರ್​) ಶ್ರೇಣಿ 11 ಹಿರಿಯ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.

    ವರ್ಗಾವಣೆಯ ಪರಿಣಾಮ ಇದೇ ಮೊದಲ ಬಾರಿಗೆ ದೆಹಲಿಯ 15 ಪೊಲೀಸ್​ ಜಿಲ್ಲೆಗಳಲ್ಲಿ 6ರಲ್ಲಿ ಮಹಿಳಾ ಡಿಸಿಪಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ದೆಹಲಿ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಪವನ್​ ಕುಮಾರ್​ ವರ್ಗಾವಣೆ ಆದೇಶಕ್ಕೆ ಸಹಿ ಹಾಕಿದ್ದು, ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅನುಮೋದಿಸಿದ್ದಾರೆ.

    ಆದೇಶದ ಪ್ರಕಾರ ಪ್ರಸ್ತುತ ಸೆವೆಂತ್​ ಬೆಟಾಲಿಯನ್​ನ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ 2010ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಬೆನಿತಾ ಮೇರಿ ಜೈಕರ್ ಅವರನ್ನು ದೆಹಲಿಯ ದಕ್ಷಿಣ ಜಿಲ್ಲೆಗೆ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿಸಿಪಿ ಹೆಡ್​ಕ್ವಾಟ್ರಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ವೇತಾ ಚೌಹಾಣ್​ (2010) ಅವರನ್ನು ಡಿಸಿಪಿ ಸೆಂಟ್ರಲ್​ಗೆ ವರ್ಗಾವಣೆ ಮಾಡಲಾಗಿದೆ. ಡಿಸಿಪಿ ಪಿಸಿಆರ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಶಾ ಪಾಂಡೆ (2010) ಅವರನ್ನು ಡಿಸಿಪಿ ಸೌತ್​ಈಸ್ಟ್​ಗೆ ವರ್ಗಾಯಿಸಲಾಗಿದೆ.

    ಉಳಿದ ಮೂವರು ಡಿಸಿಪಿಗಳಾದ ಉಶಾ ರಂಗನಾನಿ, ಪ್ರಿಯಾಂಕ ಕಶ್ಯಪ್​ ಮತ್ತು ಉರ್ವಿಜಾ ಗೋಯೆಲ್​ ಅವರನ್ನು ಕ್ರಮವಾಗಿ ನಾರ್ತ್​ವೆಸ್ಟ್​, ಈಸ್ಟ್​ ಮತ್ತು ವೆಸ್ಟ್​ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.

    ಡಿಸಿಪಿ ಸೆಂಟ್ರಲ್ ಜಿಲ್ಲೆಯ ಜಸ್ಮೀತ್ ಸಿಂಗ್, ಡಿಸಿಪಿ ಸೌತ್​ವೆಸ್ಟ್​ ಜಿಲ್ಲೆಯ ಇಂಗಿತ್ ಪ್ರತಾಪ್ ಸಿಂಗ್ ಮತ್ತು ಡಿಸಿಪಿ ಹೊರ ಉತ್ತರ ಜಿಲ್ಲೆಯ ರಾಜೀವ್ ರಂಜನ್ ವರ್ಗಾವಣೆಗೊಂಡಿದ್ದು, ವಿಶೇಷ ಸೆಲ್‌ನ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ. ಕೆಪಿಎಸ್ ಮಲ್ಹೋತ್ರಾ ಅವರನ್ನು ಸೈಬರ್ ಸೆಲ್‌ನ ಡಿಸಿಪಿಯಾಗಿ ನೇಮಿಸಲಾಗಿದೆ.

    ದೆಹಲಿಯ ರೋಹಿಣಿ ಏರಿಯಾದ ನ್ಯಾಯಾಲಯದಲ್ಲಿ ನಡೆದ ಗ್ಯಾಂಗ್​ವಾರ್​ನಲ್ಲಿ ಗ್ಯಾಂಗ್​ಸ್ಟರ್​ ಜೀತೆಂದರ್​ ಗೊಗಿ ಸೇರಿ ಮೂವರು ಮೃತಪಟ್ಟ ಬೆನ್ನಲ್ಲೇ ದೆಹಲಿ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಲಾಗಿದೆ. (ಏಜೆನ್ಸೀಸ್​)

    ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಇತ್ತ ಉದ್ಯೋಗವೂ ಇಲ್ಲ: ಸಾವಿಗೆ ಶರಣಾದ ಅಣ್ಣ-ತಮ್ಮ

    ಊರಲ್ಲಿ ಹಲವು ಗಂಡಸರ ಜತೆ ಸಂಬಂಧ: ಬುದ್ಧಿ ಕಲಿಯದ ಮಹಿಳೆಗೆ ಪತಿ ಮತ್ತು ಸ್ವಂತ ತಮ್ಮನಿಂದಲೇ ಸ್ಕೆಚ್..!​

    14 ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿದ ಪ್ರಕರಣ: ಉ. ಭಾರತ ಮೂಲದ ಐವರು ವಿದ್ಯಾರ್ಥಿಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts