14 ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿದ ಪ್ರಕರಣ: ಉ. ಭಾರತ ಮೂಲದ ಐವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಆರ್​ಆರ್​ ನಗರ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಐವರು ಕೂಡ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು. ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಕಂಠಪೂರ್ತಿ ಕುಡಿದು ಕಾರುಗಳ ಗ್ಲಾಸ್​ಗಳನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್​ಆರ್​ ನಗರ ಠಾಣಾ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಐದು ಜನ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. … Continue reading 14 ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿದ ಪ್ರಕರಣ: ಉ. ಭಾರತ ಮೂಲದ ಐವರು ವಿದ್ಯಾರ್ಥಿಗಳ ಬಂಧನ