More

    ಯೂನಿವರ್ಸ್ ಬಾಸ್ ಪದ ಬಳಕೆಗೆ ಐಸಿಸಿ ನಕಾರ: ವಿಂಡೀಸ್​ ದಾಂಡಿಗ ಕ್ರಿಸ್​ ಗೇಲ್ ಶಾಕಿಂಗ್​ ಹೇಳಿಕೆ!​​

    ಚಾಗುರಾಮಾಸ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಬಿರುಸಿನ ಪ್ರದರ್ಶನದ ಮೂಲಕ ಯೂನಿವರ್ಸ್​ ಬಾಸ್​ ಎಂಬುದನ್ನು ಕ್ರಿಸ್​ ಗೇಲ್​ ನಿರೂಪಿಸಿದ್ದಾರೆ. ಸೋಮವಾರ ಸೆಂಟ್​ ಲೂಸಿಯಾದ ಗ್ರಾಸ್​ ಐಸ್​ಲೆಟ್​ನ ಡರೇನ್​ ಸಮಿ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಧ ಶತಕದೊಂದಿಗೆ ಗೇಲ್​, ತಂಡಕ್ಕೆ ಗೆಲವು ತಂದುಕೊಟ್ಟರು.

    ಸ್ವಯಂ ಘೋಷಿತ ಯೂನಿವರ್ಸ್​​ ಬಾಸ್​ ಗೇಲ್​ ಕೇವಲ 38 ಎಸೆತಗಳಲ್ಲಿ 67 ರನ್​ಗಳಿಸಿದರು. ಅಲ್ಲದೆ, ಟಿ20 ಮಾದರಿ ಪಂದ್ಯಗಳಲ್ಲಿ 14 ಸಾವಿರ ರನ್​ ಕಲೆಹಾಕಿದ ವಿಶ್ವದ ಮೊಟ್ಟ ಮೊದಲ ಆಟಗಾರನೆಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

    ಕೇವಲ 14.5 ಓವರ್​ಗಳಲ್ಲೇ ಆಸಿಸ್​ ಪಡೆ ನೀಡಿದ್ದ 142 ಗುರಿಯನ್ನು ಸುಲಭವಾಗಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ ಪಡೆ 6 ವಿಕೆಟ್​ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ವಿಂಡೀಸ್​ ಪಡೆ ಸರಣಿ ಜಯಿಸಿದ್ದು, ವೈಟ್​ವಾಶ್​ ಮಾಡುವ ಗುರಿ ಇಟ್ಟುಕೊಂಡಿದೆ.

    ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಮಾತನಾಡಿದ ಗೇಲ್​, ಬ್ಯಾಟ್​ ಮೇಲೆ ಯೂನಿವರ್ಸ್​​ ಬಾಸ್​ ಎಂದು ಬರೆದುಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಯಾಕೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ನಾನು ಯೂನಿವರ್ಸ್​​ ಬಾಸ್ ಅನ್ನು ಬಳಸಬೇಕೆಂದು ಐಸಿಸಿ ಬಯಸುವುದಿಲ್ಲ. ಹೀಗಾಗಿ ನಾನು ಅದನ್ನು ಚಿಕ್ಕದಾಗಿ ದಿ ಬಾಸ್​ ಎಂದು ಬರೆದುಕೊಂಡಿದ್ದೇನೆ. ನಾನೇ ಬಾಸ್​ ಎಂದು ಗೇಲ್​ ತುಸು ನಕ್ಕರು.

    ‘ಯೂನಿವರ್ಸ್​ ಬಾಸ್’ ಪದದ ಮೇಲೆ ಐಸಿಸಿಗೆ ಹಕ್ಕುಸ್ವಾಮ್ಯವಿದೆಯೇ ಎಂದು ಕೇಳಿದಾಗ, “ನಿಜ ಹೇಳಬೇಕೆಂದರೆ ಹಕ್ಕುಸ್ವಾಮ್ಯವನ್ನು ನಾನು ಹೊಂದಿರಬೇಕಿತ್ತು, ಐಸಿಸಿ ಅಲ್ಲ, ತಾಂತ್ರಿಕವಾಗಿ ನಾನೇ ಬಾಸ್” ಅನ್ನುವ ಮೂಲಕ ಐಸಿಸಿಗೆ ಶಾಕ್​ ನೀಡಿದರು. ಗೇಲ್​ ಅವರ ಈ ಹೇಳಿಕೆಗಳು ಅವರ ಆತ್ಮವಿಶ್ವಾಸದ ಪ್ರಮಾಣವನ್ನು ಹೇಳುವಂತಿತ್ತು. (ಏಜೆನ್ಸೀಸ್​)

    ಒಲಿಂಪಿಕ್ಸ್ ಪದಕ ಬೇಟೆಗಾರರು; ಏರಿಳಿತದಲ್ಲಿ ಸಾಗಿ ಬಂದಿದೆ ಭಾರತದ ಪದಕ ಪಟ್ಟಿ..

    ಸೌರವ್ ಆಗ್ತಾರೆ ರಣಬೀರ್; ಕ್ರಿಕೆಟಿಗ ಗಂಗೂಲಿ ಬಯೋಪಿಕ್

    ಬಾಲಿವುಡ್​ನತ್ತ ಸಮಂತಾ ಅಕ್ಕಿನೇನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts