More

    ದೆಹಲಿಯಲ್ಲಿ ಇಂದು ಕ್ಯಾಪಿಟಲ್ಸ್‌ಗೆ ಟೈಟಾನ್ಸ್ ಸವಾಲು

    ನವದೆಹಲಿ: ಟೂರ್ನಿಯಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಪ್ಲೇಆ್ ರೇಸ್‌ನಲ್ಲಿ ಅವಕಾಶ ವೃದ್ಧಿಸಿಕೊಳ್ಳುಲು ಉಭಯ ತಂಡಗಳಿಗೆ ಗೆಲುವು ಅನಿವಾರ‌್ಯ ಎನಿಸಿದೆ. ಶುಭಮಾನ್ ಗಿಲ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದು, ರಿಷಭ್ ಪಂತ್ ಬಳಗ ಹಾಲಿ ಆವೃತ್ತಿಯಲ್ಲಿ ತವರು ಅಭಿಮಾನಿಗಳ ಎದುರು ಕಂಬ್ಯಾಕ್‌ನ ತವಕದಲ್ಲಿದೆ.

    ಗುಜರಾತ್ ಟೈಟಾನ್ಸ್ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಪ್ರಯಾಸದ ಜಯ ಸಾಧಿಸಿದೆ. ಆದರೆ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆಯ ಹಿನ್ನಡೆ ಎದುರಿಸಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಜಯ, 4 ಸೋಲಿನೊಂದಿಗೆ 8 ಅಂಕ ಕಲೆಹಾಕಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 3 ಗೆಲುವು, 5 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಸನ್‌ರೈಸರ್ಸ್‌ ವಿರುದ್ಧ ಎಸಗಿದ ತಪ್ಪುಗಳನ್ನು ಸರಿಪಡಿಸಿಕೊಂಡು ತಂಡವನ್ನು ಯಶಸ್ಸಿನ ಹಾದಿಗೆ ತರುವ ಸವಾಲು ನಾಯಕ ರಿಷಭ್ ಪಂತ್ ಮುಂದಿದೆ.

    ಗಾಯದ ಜತೆಗೆ ಬೌಲಿಂಗ್ ಚಿಂತೆ ಸನ್‌ರೈಸರ್ಸ್‌ ಎದುರು 67 ರನ್‌ಗಳ ಸೋಲು ಅನುಭವಿಸಿರುವ ಡೆಲ್ಲಿ ರನ್‌ರೇಟ್ ಸಹ ಕುಸಿತ ಕಂಡಿದೆ. ರಿಷಭ್ ಪಂತ್ ಡೆಲ್ಲಿ ಪರ ಅತಿಹೆಚ್ಚು ರನ್‌ಗಳಿಸಿರುವ ಬ್ಯಾಟರ್ ಆಗಿದ್ದು, ವಾರ್ನರ್, ಪೃಥ್ವಿ ಷಾ ಉತ್ತಮ ಅಡಿಪಾಯ ಒದಗಿಸಬೇಕಿದೆ. ಆಟಗಾರರು ಗಾಯಕ್ಕೆ ತುತ್ತಾಗುತ್ತಿರುವುದು ಹನ್ನೊಂದರ ಬಳಗದ ಆಯ್ಕೆಯಲ್ಲಿ ಪದೇ ಪದೆ ಬದಲಾವಣೆಯ ಅನಿವಾರ‌್ಯತೆ ಸೃಷ್ಟಿಸಿದೆ. ಅನುಭವಿ ವೇಗಿ ಇಶಾಂತ್ ಶರ್ಮ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದು, ಗುಜರಾತ್ ಎದುರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಕುಲದೀಪ್ ಯಾದವ್ ಯಶಸ್ಸು ಸಾಧಿಸಿರುವ ಏಕೈಕ ಬೌಲರ್ ಎನಿಸಿದ್ದಾರೆ. ಆಡಿರುವ 5 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ.
    ಬ್ಯಾಟಿಂಗ್‌ನಲ್ಲಿ ಜೇಕ್ ್ರೇಸರ್ ಮೆಕ್ ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ

    ಆತ್ಮವಿಶ್ವಾಸದಲ್ಲಿ ಟೈಟಾನ್ಸ್ ದೆಹಲಿ ಕ್ರೀಡಾಂಗಣ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದು ಗುಜರಾತ್‌ಗೆ ಪ್ಲಸ್ ಪಾಯಿಂಟ್ ಎನಿಸಿದೆ. ರಶೀದ್ ಖಾನ್, ನೂರ್ ಅಹ್ಮದ್ ಹಾಗೂ ಸಾಯಿ ಕಿಶೋರ್ ಸ್ಪಿನ್ನರ್‌ಗಳ ಬಲವಿದೆ. ಆದರೆ ಟೂರ್ನಿಯಲ್ಲಿ ಆಟಗಾರರ ಅಸ್ಥಿರ ನಿರ್ವಹಣೆ ತಂಡಕ್ಕೆ ಮುಳುವಾಗಿದೆ. ಗಿಲ್ ಸಾಹ ಜೋಡಿ ಇದುವರೆಗೆ ಆರಂಭಿಕರಾಗಿ ಯಶಸ್ಸು ಸಾಧಿಸಿಲ್ಲ. ಸಾಯಿ ಸುದರ್ಶನ್ ಹೊರತುಪಡಿಸಿ ಇತರ ಆಟಗಾರರ ಕೊಡುಗೆಯಿಲ್ಲ. ಬೌಲಿಂಗ್‌ನಲ್ಲಿ ಮೋಹಿತ್ ಶರ್ಮ ಮೇಲೆ ಹೆಚ್ಚಿನ ಅವಲಂಬನೆ ಇದೆ.

    ಮಳೆ ಭೀತಿ
    ಡೆಲ್ಲಿ ಹಾಗೂ ಗುಜರಾತ್ ನಡುವಿನ ಪಂದ್ಯಕ್ಕೆ ಮಳೆ ಆಡ್ಡಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಂಗಳವಾರ ಉಭಯ ತಂಡಗಳ ಅಭ್ಯಾಸಕ್ಕೆ ಮಳೆ ಹಾಗೂ ಭಾರಿ ಗಾಳಿ ಅಡಚಣೆ ತಂದಿದೆ. ಪ್ಲೇಆ್ಗೇರಲು ಬಾಕಿ ಉಳಿದಿರುವ ಎಲ್ಲ ಲೀಗ್ ಪಂದ್ಯಗಳು 2 ತಂಡಗಳಿಗೆ ಮಹತ್ವದಾಗಿವೆ.

    ಮುಖಾಮುಖಿ: 4
    ಡೆಲ್ಲಿ: 2
    ಗುಜರಾತ್: 2
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts