More

    ಅಪ್ರಾಪ್ತನನ್ನು ಅಪಹರಿಸಿದ ಮಹಿಳೆ: ವಿಚಾರಣೆ ವೇಳೆ ಬಯಲಾಯ್ತು 15 ದಿನಗಳ ಕಾಮಪುರಾಣ!

    ಅಹಮದಾಬಾದ್​: ಹದಿನೇಳು ವರ್ಷದ ಹುಡುಗನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ 23 ವರ್ಷದ ಮಹಿಳೆಯನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಗುಜರಾತ್​ ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್​ ಮೂಲಗಳ ಪ್ರಕಾರ ಗುಜರಾತಿನ ಆನಂದ್​​ ಮೂಲದ 17 ವರ್ಷದ ಹುಡುಗ ಮೇ 25ರಿಂದ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಡಿ, ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ಕುಟುಂಬಸ್ಥರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ನಾಪತ್ತೆ ದೂರು ದಾಖಲಿಸಿದ್ದರು.

    ದೂರು ಸ್ವೀಕರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ದೂರು ನೀಡಿದ ಹದಿನೈದು ದಿನಗಳ ಬಳಿಕ ಸೂರತ್​ನಲ್ಲಿ ಹುಡುಗನನ್ನು ಪತ್ತೆಹಚ್ಚಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಗುಜರಾತ್​ನ ಆನಂದ್​ದಿಂದ ಸೂರತ್​ಗೆ ಮಹಿಳೆ ಕರೆದೊಯ್ದಿದ್ದಳು. ಇನ್ನು ವಿಚಾರಣೆ ವೇಳೆ ಹುಡುಗನ ಜತೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.

    ಸದ್ಯ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)

    ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೋಡಿ ಶಾಕ್​ ಆದ ಯುವಕ..!

    ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್​ ಆಗಲು ಸಂಚು ರೂಪಿಸಿದ್ದ ಟಿಕ್​ಟಾಕ್​ ಸ್ಟಾರ್ ಸಿಕ್ಕಿಬಿದ್ದಿದ್ದೇ ರೋಚಕ!

    ಒಂದೇ ಗ್ರಾಮದ 80 ಮಂದಿಯನ್ನು ಬೇಟೆಯಾಡಿ ತಿಂದಿದ್ದ ದೈತ್ಯ ಮೊಸಳೆ ಕೊನೆಗೂ ಸರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts