More

    ಭಾರತೀಯ ಹಾಕಿ ಆಟಗಾರನ ವಿರುದ್ಧ ಪೋಕ್ಸೋ ಕೇಸ್

    ಬೆಂಗಳೂರು: ವಾಲಿಬಾಲ್ ಆಟಗಾರ್ತಿಗೆ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ರಾಷ್ಟ್ರೀಯ ಹಾಕಿ ಆಟಗಾರ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿರುವ ವರುಣ್ ಕುಮಾರ್ (28) ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

    ತೆಲಂಗಾಣದ 22 ವರ್ಷದ ವಾಲಿಬಾಲ್ ಅಟಗಾರ್ತಿ ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016-17ನೇ ಸಾಲಿನಲ್ಲಿ ನ್ಯಾಷನಲ್ ಸೆಂಟರ್ ಆಫ್ ಎಕ್ಸೆಲೆನ್ಸಿ ಅಡಿಯಲ್ಲಿ ವಾಲಿಬಾಲ್ ತರಬೇತಿಗೆ 16 ವರ್ಷ ಇದ್ದಾಗ ಸಂತ್ರಸ್ತೆ ಆಯ್ಕೆಯಾಗಿ ಜ್ಞಾನಭಾರತಿ ಆವರಣದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಶಿಬಿರಕ್ಕೆ ಬಂದಿದ್ದರು.

    2018ರಲ್ಲಿ ಸಾಯ್ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಹಾಕಿ ಆಟಗಾರರ ತರಬೇತಿ ಶಿಬಿರದಲ್ಲಿದ್ದ ವರುಣ್ ಕುಮಾರ್, ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತೆಗೆ ಪರಿಚಯವಾಗಿದ್ದು, ಪರಸ್ಪರ ಚಾಟ್ ಮಾಡುತ್ತಿದ್ದರು. ಸ್ನೇಹಿತರ ಸಹಾಯದಿಂದ ಸಂತ್ರಸ್ತೆಯನ್ನು ಮನವೊಲಿಸಿ ಮದುವೆ ಆಗುವುದಾಗಿ ವರುಣ್ ಕುಮಾರ್, ಹೇಳಿದ್ದ. ನಿಮ್ಮ ಮನೆಯವರನ್ನು ನಾನೇ ಒಪ್ಪಿಸುತ್ತೇನೆ. ಅಲ್ಲಿಯವರೆಗೆ ಇಬ್ಬರು ಪ್ರೇಮಿಗಳಾಗಿ ಇರೋಣ ಎಂದು ಭರವಸೆ ನೀಡಿದ್ದ. ಇದಕ್ಕೆ ಸಂತ್ರಸ್ತೆ ಸಮ್ಮತಿ ಸೂಚಿಸಿದ್ದರು. 2019ರ ಜುಲೈನಲ್ಲಿ ವರುಣ್, ರಾತ್ರಿ ಊಟಕ್ಕೆಂದು ಜಯನಗರದ 4ನೇ ಬ್ಲಾಕ್‌ನ ಹೋಟೆಲ್‌ಗೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದ. ಊಟದ ನಂತರ ವರುಣ್, ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಆ ರಾತ್ರಿ ಅಲ್ಲಿಯೇ ಉಳಿದಿದ್ದರು. ಮದುವೆ ಆಗುವುದಾಗಿ ನಂಬಿಸಿ ಸಂತ್ರಸ್ತೆ ಜತೆಗೆ ಆರೋಪಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ.

    ಐದಾರು ವರ್ಷಗಳ ಕಾಲ ಸಂತ್ರಸ್ತೆ ಮತ್ತು ವರುಣ್ ಪರಸ್ಪರ ಪ್ರೀತಿಸಿದ್ದರು. ಕಳೆದ ವರ್ಷ ಸಂತ್ರಸ್ತೆ ತಂದೆ ಅಸುನೀಗಿದ್ದಾಗ ಅವರ ಮನೆಗೆ ಹೋಗಿ ವರುಣ್ ಸಾಂತ್ವನ ಹೇಳಿದ್ದ.ಆನಂತರ ಸಂತ್ರಸ್ತೆ ಸಂಪರ್ಕ ಕಡಿತ ಮಾಡಿ ಅಂತರ ಕಾಯ್ದುಕೊಳ್ಳುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಸಂತ್ರಸ್ತೆ ಮುಂದಾದಾಗ, ಕೆಲ ದಿನಗಳ ಕಾಲ ಮತ್ತೆ ಸ್ನೇಹ ಬೆಳೆಸಿದ್ದ. ಮದುವೆ ಆಗುವಂತೆ ಕೇಳಿದಾಗ, ವರುಣ್ ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ, ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಖಾಸಗಿ ಫೋಟೋ ವೈರಲ್ ಬೆದರಿಕೆ

    ತೊಂದರೆ ಕೊಟ್ಟರೇ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಸಂತ್ರಸ್ತೆಗೆ ವರುಣ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ದೂರಿನಲ್ಲಿ ಸಂತ್ರಸ್ತೆ ನೋವು ಹಂಚಿಕೊಂಡಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಅರ್ಜುನ ಪ್ರಶಸ್ತಿ ಪುರಷ್ಕೃತ:

    ಭಾರತೀಯ ಹಾಕಿ ಆಟಗಾರ ವರುಣ್ ಕುಮಾರ್, 2021ರಲ್ಲಿ ಅರ್ಜುನ ಪ್ರಶಸ್ತಿ ಪುರಷ್ಕೃತನಾಗಿದ್ದು, 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ ಹುದ್ದೆಗಿಟ್ಟಿಸಿಕೊಂಡಿದ್ದಾನೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದಲ್ಲಿ ಪ್ರತಿನಿಧಿಸಿದ್ದ. ಮುಂಬರುವ ಎ್ಐಎಚ್ ಪ್ರೊ ಲೀಗ್‌ಗಾಗಿ ಭುವನೇಶ್ವರದಲ್ಲಿ ತರಬೇತಿಯಲ್ಲಿ ವರುಣ್ ನಿರತನಾಗಿದ್ದಾನೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts