More

    VIDEO| ಕಾರು ಚಾಲಕನಿಂದ ಅಪಾಯಕಾರಿ ಯೂಟರ್ನ್​: ವೈರಲ್​ ವಿಡಿಯೋದ ಅಸಲಿಯತ್ತು ಇಲ್ಲಿದೆ…

    ನವದೆಹಲಿ: ಮೈ ಜುಮ್​ ಅನ್ನುವ ರೀತಿ ಚಾಲಕನೊಬ್ಬ ಕಡಿದಾದ ಬೆಟ್ಟದ ರಸ್ತೆಯಲ್ಲಿ ಕಾರನ್ನು ಯೂಟರ್ನ್​ ತೆಗೆದುಕೊಳ್ಳುವ ವಿಡಿಯೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸ್ವಲ್ಪ ಮಿಸ್​ ಆದ್ರೆ ಇಹಲೋಕ ಪಯಣ ಗ್ಯಾರೆಂಟಿ ಎಂದು ವಿಡಿಯೋ ನೋಡಿದ ಬಹುತೇಕರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ವಿಡಿಯೋದ ಅಸಲಿಯತ್ತು ತಿಳಿದರೆ ನಿಮ್ಮ ಅಭಿಪ್ರಾಯ ಖಂಡಿತ ಬದಲಾಗುತ್ತದೆ.

    ವಿಡಿಯೋದಲ್ಲಿ ಏನಿದೆ?
    ನೀಲಿ ಬಣ್ಣದ ಕಾರು ಕಡಿದಾದ ಬೆಟ್ಟದ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುತ್ತದೆ. ಬೆಟ್ಟದ ರಸ್ತೆಯು ಮೊದಲೇ ತುಂಬಾ ಚಿಕ್ಕದಾಗಿದ್ದು ಕಾರಿನ ಹಿಂಭಾಗದಲ್ಲಿ ಪಾತಾಳ ಇರುವಂತೆ ನೋಡುಗರಿಗೆ ಗೋಚರವಾಗುತ್ತದೆ. ನಿಜಕ್ಕೂ ಈ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುವುದು ಅಸಾಧ್ಯ ಎಂದು ನೋಡುಗರಿಗೆ ಅನಿಸಿದರೂ ಚಾಲಕನ ಡ್ರೈವಿಂಗ್​ ಸ್ಕಿಲ್​ಗೆ ಫಿದಾ ಆಗಿದ್ದಾರೆ. ಕಡಿದಾದ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುವಲ್ಲಿ ಚಾಲಕ ಯಶಸ್ವಿಯಾಗುವುದು ವಿಡಿಯೋದಲ್ಲಿದೆ.

    ಈ ವಿಡಿಯೋ ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಇದುವರೆಗೂ 1.8 ಮಿಲಿಯನ್​ ವೀಕ್ಷಣೆ ಕಂಡಿದೆ. ಇನ್​ಸ್ಟಾಗ್ರಾಂನಲ್ಲೂ ಸಹ ಲಕ್ಷಾಂತರ ವೀಕ್ಷಣೆ ಕಂಡಿದೆ. ಈಗಲೂ ಕೂಡ ಜಾಲತಾಣದಲ್ಲಿ ಈ ವಿಡಿಯೋ ಕುರಿತ ಚರ್ಚೆ ಜೋರಾಗಿದೆ ಮತ್ತು ಸಾಕಷ್ಟು ನೆಟ್ಟಿಗರು ಚಾಲಕನ ಸ್ಕಿಲ್​ಗೆ ಫಿದಾ ಆಗಿ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.

    ಆದರೆ, ಈ ವಿಡಿಯೋ ಬಗ್ಗೆ ಹೆಚ್ಚು ತಿಳಿದಾಗ ಅದರ ಹಿಂದೆ ಇನ್ನೊಂದು ಸ್ಟೋರಿ ಇರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್​ನಲ್ಲೇ ಡ್ರೈವಿಂಗ್​ ಸ್ಕಿಲ್​ (DrivingSkill) ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ವಿಡಿಯೋದಲ್ಲಿ ಕಡಿದಾದ ರಸ್ತೆಯಲ್ಲಿ ಹೇಗೆ ಯೂಟರ್ನ್​ ತೆಗೆದುಕೊಳ್ಳಬೇಕೆಂದು ಪ್ರದರ್ಶನ ನೀಡುವ ಅದ್ಭುತ ಡ್ರೈವಿಂಗ್​ ಸ್ಕಿಲ್​ ಇರುವ ನಿಜ. ಸ್ವಲ್ಪ ಮಿಸ್​ ಆದರೆ ಪ್ರಾಣ ಹೋಗುತ್ತೆ ಎಂದು ಅಂದುಕೊಳ್ಳುವುದು ನಿಜ.

    ಆದರೆ, ಮೊತ್ತೊಂದು ಆಯಾಮದಲ್ಲಿ ವಿಡಿಯೋ ನೋಡಿದಾಗ ಅದರ ಸ್ಪಷ್ಟತೆ ಗೊತ್ತಾಗುತ್ತದೆ. ಮೊದಲು ಅಂದುಕೊಂಡಂತೆ ಕಾರಿನ ಹಿಂದೆ ಪಾತಾಳ ಇಲ್ಲ. ಕೆಳಗಡೆ ಮತ್ತೊಂದು ರಸ್ತೆ ಇರುವುದು ಇನ್ನೊಂದು ಆಯಾಮದ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸುತ್ತದೆ ಕಾಮೆಂಟ್​ ಮಾಡಿ. (ಏಜೆನ್ಸೀಸ್​)

    ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!

    ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ತೆಗೆದಿದ್ದ ಗುಂಡಿ ಮುಚ್ಚಿಸಿ ಅಮಾನವೀಯತೆ ಮೆರೆದ ಪೊಲೀಸರು

    ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಲು, ಜೀರ್ಣಶಕ್ತಿ ವೃದ್ಧಿಸಲು ಊರ್ಧ್ವ ಧನುರಾಸನ ಸಹಕಾರಿ

    ಬಿಜೆಪಿಯಲ್ಲಿ ಸಂಪುಟ ಸಂಚಲನ: ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ಗರಿಗೆದರಿದ ರಾಜಕೀಯ ಚಟುವಟಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts