More

    ಸಂಕ್ರಾಂತಿ ದುರಂತ: ಪ್ರಾಣಿ ಬದಲು ಮದ್ಯದ ಮತ್ತಿನಲ್ಲಿ ಮೇಕೆ ತಲೆ ಹಿಡಿದಿದ್ದ ವ್ಯಕ್ತಿಯನ್ನು ಬಲಿ ಕೊಟ್ಟ ಕುಡುಕ!

    ವಿಜಯವಾಡ: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪ್ರಾಣಿಯನ್ನು ಬಲಿ ಕೊಡುವ ಬದಲು ಮನುಷ್ಯನ ಕುತ್ತಿಗೆಯನ್ನು ಕುಯ್ದಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ (ಜ.16) ನಡೆದಿದೆ. ಸಂಕ್ರಾಂತಿ ಸಂಭ್ರದಮ ನಡುವೆ ಈ ಘಟನೆ ನಡೆದಿದೆ.

    ಚಲಪತಿ ಎಂಬಾತ ದೇವರಿಗೆ ಮೇಕೆಯನ್ನು ಬಲಿ ಕೊಡಲು ಮುಂದಾಗಿದ್ದ. ಆದರೆ, ತುಂಬಾ ಮದ್ಯ ಸೇವಿಸಿದ್ದರಿಂದ ಮೇಕೆಯನ್ನು ಹಿಡಿದುಕೊಂಡಿದ್ದ ಸುರೇಶ್​ ಎಂಬಾತನ ಕುತ್ತಿಗೆಯನ್ನು ಕುಯ್ದಿದ್ದಾನೆ.

    ಸ್ಥಳೀಯ ಎಲ್ಲಮ್ಮ ದೇವಸ್ಥಾನದಲ್ಲಿ ಪ್ರಾಣಿ ಬಲಿಯನ್ನು ಆಯೋಜಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸುರೇಶ್​ನನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

    ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಚಲಪತಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಕ್ಯೂನಲ್ಲಿ ನಿಂತು ದಿನಕ್ಕೆ 16 ಸಾವಿರ ರೂ. ಸಂಪಾದನೆ: ಈತನ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ನಟ ಧನುಷ್​-ಐಶ್ವರ್ಯಾ ಡಿವೋರ್ಸ್​ಗೆ ಕಾರಣವೇನು? ಸ್ಟಾರ್​ ದಂಪತಿ ಕೊಟ್ಟ ಸ್ಪಷ್ಟನೆ ಹೀಗಿದೆ…

    ಬುಕ್​ ಮಾಡಿದ್ದು ವಾಚ್​ ಆದ್ರೆ ಬಂದಿದ್ದು ಕಾಂಡೋಮ್​! ಮರುಕ್ಷಣದಲ್ಲೇ ಡೆಲಿವರಿ ಬಾಯ್​ಗೆ ಶಾಕ್​ ಕೊಟ್ಟ ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts