More

    ಹೊಸ ಕಾರು ಖರೀದಿಸಿ ವಿರೋಧಿಗಳಿಗೆ ಮಾತಿನಲ್ಲೇ ಚಾಟಿ ಬೀಸಿದ ಬಿಗ್​ಬಾಸ್​ ಖ್ಯಾತಿಯ ನಟಿ ಧನುಶ್ರೀ..!

    ಬೆಂಗಳೂರು: ಟಿಕ್​ಟಾಕ್​ ವಿಡಿಯೋ ಮೂಲಕ ರಾತ್ರೋರಾತ್ರಿ ಫೇಮಸ್​ ಆಗಿ ಒಂದೇ ದಿನದಲ್ಲಿ ಲಕ್ಷಾಂತರ ಹಿಂಬಾಲಕರನ್ನು ಪಡೆದಿದ್ದ ಟಿಕ್​ಟಾಕ್​ ಸ್ಟಾರ್​​ ಧನುಶ್ರೀ ಈಗ ಕೇವಲ ಟಿಕ್​ಟಾಕ್​ ಸ್ಟಾರ್​ ಮಾತ್ರವಲ್ಲ, ಸಿನಿಮಾ ನಟಿಯು ಹೌದು. ಸಾಮಾಜಿಕ ಜಾಲತಾಣದಿಂದ ಬೆಳಕಿಗೆ ಬಂದ ಪ್ರತಿಭೆಗೆ ಬಿಗ್​ಬಾಸ್​ ಸೀಸನ್​ 8 ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿತು.

    ಇದೀಗ ಸಿನಿಮಾಗಳಲ್ಲಿನ ಬಿಜಿಯಾಗಿರುವ ಧನುಶ್ರೀ ತುಂಬಾ ಖುಷಿಯಾಗಿದ್ದಾರೆ. ಅವರ ಖುಷಿಗೆ ಇನ್ನೊಂದು ವಿಚಾರ ಕಾರಣವಾಗಿದೆ. ಅದೇನೆಂದರೆ ತಮ್ಮ ಬಹುದಿನಗಳ ಆಸೆಯಂತೆ ಧನುಶ್ರೀ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

    ಕಾರು ಖರೀದಿಸಿರುವ ಬಗ್ಗೆ ಬರೆದುಕೊಂಡಿರುವ ಧನುಶ್ರೀ, ಇದು ಶ್ರಮಕ್ಕೆ ಸಿಕ್ಕ ಪ್ರತಿಫಲ ಅಂತಾ ಹೇಳಿಕೊಂಡಿದ್ದಾರೆ. ಇದು ಸುಲಭದ ಕೆಲಸ ಎಂದು ಹೇಳುವ ಜನರಿಗೆ ನಾನಿದನ್ನು ಹೇಳುತ್ತಿದ್ದೇನೆ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಅಡೆತಡೆಗಳು ಮತ್ತು ಹೋರಾಟಗಳಿರುತ್ತವೆ. ಅದನ್ನು ಎಲ್ಲರೂ ನೋಡಲಾಗುವುದಿಲ್ಲ. ನಾನು ಮಾಡಿದ ಎಲ್ಲಾ ಕಠಿಣ ಪರಿಶ್ರಮಗಳು ಮತ್ತು ನಾನು ಅನುಭವಿಸಿದ ಹೋರಾಟಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಅನ್ನುವ ಮೂಲಕ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಧನುಶ್ರೀ ಚಾಟಿ ಬೀಸಿದ್ದಾರೆ. ಹಾಗೇ ಎಲ್ಲ ಸಮಯದಲ್ಲೂ ನನ್ನ ಜತೆಯಾಗಿ ನಿಂತು ಬೆಂಬಲ ನೀಡಿದವರಿಗೆ ಧನ್ಯವಾದ ಹೇಳುತ್ತೇನೆಂದು ಧನುಶ್ರೀ ಬರೆದುಕೊಂಡಿದ್ದಾರೆ.

    ಅಂದಹಾಗೆ ಧನುಶ್ರೀ ಅವರು ಬಿಗ್​ಬಾಸ್​ ಸೀಸನ್​ 8ರಲ್ಲಿ ಬಿಗ್​ ಮನೆಗೆ ಎಂಟ್ರಿ ಕೊಟ್ಟ ಮೊದಲನೇ ಸ್ಪರ್ಧಿಯೂ ಹೌದು ಹಾಗೇ ಮೊದಲಿಗರಾಗಿ ಮನೆಯಿಂದ ಎಲಿಮಿನೇಟ್​ ಆದ ಮೊದಲನೇ ಸ್ಪರ್ಧಿಯು ಹೌದು. ಧನುಶ್ರೀ ಬಿಗ್​ಬಾಸ್​ ಮನೆಯಲ್ಲಿ ಕೇವಲ ಒಂದೇ ವಾರ ಕಳೆದ್ರೂ ಕೂಡ ಬಹಳ ಖ್ಯಾತಿಯನ್ನು ಪಡೆದರು. ಅವರ ಮೇಕಪ್​ ವಿಚಾರ ಬಹಳ ಚರ್ಚೆಗೀಡಾಯಿತು ಮತ್ತು ಸಿಕ್ಕಾಪಟ್ಟೆ ಟ್ರೋಲ್​ ಕೂಡ ಆಯಿತು. ಸ್ನಾನಕ್ಕೆ ಹೋಗುವಾಗಲೂ ಮೇಕಪ್​ ಮಾಡಿಕೊಂಡು ಹೋಗಿದ್ದೇ ಸಾಮಾಜಿಕ ಜಾಲತಾಣಗಳನ್ನು ಧನುಶ್ರೀ ಅವರ ಟ್ರೋಲ್​ಗೆ ಕಾರಣವಾಯಿತು. ಅಲ್ಲದೆ, ಅವರ ಮೇಕಪ್​ ಇಲ್ಲದ ಫೋಟೋ ಕೂಡ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತು.

    ಬಿಗ್​ಬಾಸ್​ ಮನೆಗೆ ಹೋಗುವ ಮುನ್ನವೇ ಸಿನಿಮಾ ಒಂದರ ಆಫರ್​ ಪಡೆದಿದ್ದ ಧನುಶ್ರೀ ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಆ ಸಿನಿಮಾದಲ್ಲಿ ತೊಡಗಿಕೊಂಡು ಶೂಟಿಂಗ್​ ಮುಗಿಸಿಕೊಟ್ಟಿದ್ದಾರೆ. ಇನ್ನು ಕೆಲವು ಚಿತ್ರಗಳಲ್ಲಿ ಅವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

    ಒಳಉಡುಪಿನ ಬಗ್ಗೆ ಪ್ರಶ್ನಿಸಿದ ನೆಟ್ಟಿಗನಿಗೆ ನಟಿ ಅನಿಕಾ ಸುರೇಂದ್ರನ್​ ಕೊಟ್ಟ ಉತ್ತರ ಹೀಗಿದೆ…

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಬಾಲಾಗೆ ದೀಪಿಕಾ ನೆರವು; ಕಿಡ್ನಿ ಕಸಿಗೆ 15 ಲಕ್ಷ ರೂ. ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts