More

    ಕನ್ನಡ ಪ್ರೀತಿಗೆ ಸಲಾಂ! ಹೆಜ್ಜೆ ಹಾಕಿದ್ದು ತೆಲುಗು ಸಿನಿಮಾ ಹಾಡಿಗೆ ಆದ್ರೆ ವಾರ್ನರ್ ಗೆದ್ದಿದ್ದು ಕನ್ನಡಿಗರ ಹೃದಯ

    ಸಿಡ್ನಿ: ಆಸ್ಪ್ರೇಲಿಯಾ ಆಟಗಾರ ಡೇವಿಡ್​ ವಾರ್ನರ್​ಗೆ ನಮ್ಮ ಭಾರತ ಅಂದರೆ ಅಚ್ಚಮೆಚ್ಚು ಎಂಬುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಇಲ್ಲಿನ ಸಿನಿಮಾಗಳ ಬಗ್ಗೆ ವಾರ್ನರ್​ಗೆ ಅಗಾಧವಾದ ಪ್ರೀತಿ ಇದೆ. ಅದಕ್ಕೆ ಸಾಕ್ಷಿಯಾಗಿ ಅವರ ಇನ್​ಸ್ಟಾಗ್ರಾಂನಲ್ಲಿ ನಮ್ಮ ಭಾರತೀಯ ಹಾಡುಗಳಿಗೆ ಕುಟುಂಬದ ಜತೆ ಯಾವಾಗಲೂ ಹೆಜ್ಜೆ ಹಾಕುತ್ತಿರುತ್ತಾರೆ.

    ಬಿಡುವಿನ ಸಮಯದಲ್ಲಿ ಹೆಚ್ಚು ಕುಟುಂಬದ ಜತೆ ಸಮಯ ಕಳೆಯುವ ವಾರ್ನರ್​ ಪತ್ನಿ ಮತ್ತು ಮಕ್ಕಳೊಂದಿಗೆ ಸೇರಿ ಭಾರತೀಯ ಸಿನಿಮಾ ಹಾಡುಗಳಿಗೆ ಡ್ಯಾನ್ಸ್​ ಮಾಡಿ, ಆ ವಿಡಿಯೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹರಿಬಿಡುತ್ತಾರೆ. ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾಗಳೆಂದರೆ ವಾರ್ನರ್​ಗೆ ಒಲವು. ಇದೀಗ ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರದ “ಶ್ರೀವಲ್ಲಿ” ಹಾಡಿಗೆ ವಾರ್ನರ್​ ಸ್ಟೆಪ್​ ಹಾಕಿದ್ದಾರೆ.

    ತೆಲುಗು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರೂ ಕೂಡ ವಾರ್ನರ್​ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅದಕ್ಕೆ ಕಾರಣ ಅವರು ಡಾನ್ಸ್​ ಮಾಡಲು ಆಯ್ದುಕೊಂಡು ಹಾಡು ಕನ್ನಡ ಅವತರಣಿಕೆ. ಪುಷ್ಪ ಪ್ಯಾನ್​ ಇಂಡಿಯಾ ಸಿನಿಮಾ. ಮೂಲ ಭಾಷೆ ತೆಲುಗು ಆದರೂ, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಿದೆ.

    ವಾರ್ನರ್​ ತಾವು ಡಾನ್ಸ್​ ಮಾಡಲು “ನೋಟ ಬಂಗಾರವಾಯಿತೆ ಶ್ರೀವಲ್ಲಿ” ಎಂದು ಆರಂಭವಾಗುವ ಕನ್ನಡ ಅವತರಣಿಕೆ ಹಾಡನ್ನು ಆಯ್ಕೆ ಮಾಡಿಕೊಂಡಿರುವುದು ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಹೀಗಾಗಿ ಅನೇಕರು ಕಾಮೆಂಟ್​ ಮೂಲಕ ವಾರ್ನರ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಕೆಲವರು ವಾರ್ನರ್​ ಆರ್​ಸಿಬಿ ಬರಬಹುದು. ಇದು ಅದರ ಸೂಚನೆ ಆಗಿರಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ವಾರ್ನರ್​ ಅವರನ್ನು ಹೈದರಾಬಾದ್​ ತಂಡ ಇತ್ತೀಚೆಗಷ್ಟೇ ಕೈಬಿಟ್ಟಿದೆ.

    ಇನ್ನು ವಾರ್ನರ್​ ಹೆಜ್ಜೆ ಹಾಕಿರುವ ವಿಡಿಯೋ 13 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. ಇನ್ನು ಕನ್ನಡದ ಹಾಡಿಗೆ ವಾರ್ನರ್​ ವಿಡಿಯೋ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಗಳ ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಚೌಕಾ ಚಿತ್ರದ “ಅಪ್ಪ ಐ ಲವ್​ ಯು ಪಾ”​​ ಚಿತ್ರದ ಹಾಡನ್ನು ಬಳಸಿಕೊಂಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ವಿಡಿಯೋಗೆ 14 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿತ್ತು. ವಾರ್ನರ್​ ಕನ್ನಡ ಪ್ರೀತಿಗೆ ನಮ್ಮ ಕನ್ನಡಿಗರು ಬಹಳ ಫಿದಾ ಆಗಿದ್ದರು.

    ನಮ್ಮ ಭಾರತವನ್ನು ಸದಾ ಕಾಲ ನೆನೆಯುವ ವಾರ್ನರ್​ ಮೇಲೆ ಭಾರತೀಯರ ಪ್ರೀತಿ ಹೆಚ್ಚಾಗಿದೆ. ಭಾರತದಲ್ಲೇ ಹೆಚ್ಚು ಪ್ರೀತಿಸುವ ವಿದೇಶಿ ಕ್ರಿಕೆಟಿಗ ಎಂಬುದಕ್ಕೆ ಇದು ಕಾರಣವಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರ್ನರ್​ ಅವರು ಈ ಹಿಂದೆ ತೆಲುಗು ಚಿತ್ರದ ಬುಟ್ಟು ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದು ಬಹಳ ವೈರಲ್​ ಆಗಿತ್ತು. ಇಷ್ಟೇ ಇಲ್ಲ ಈ ರೀತಿಯ ಅನೇಕ ಭಾರತೀಯ ಹಾಡಿಗೆ ವಾರ್ನರ್​ ಕುಟುಂಬದ ಜತೆ ಹೆಜ್ಜೆ ಹಾಕಿರುವುದು ಭಾರತೀಯರ ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅವರ ಇನ್​ಸ್ಟಾಗ್ರಾಂ ಚೆಕ್​ ಮಾಡಿದರೆ ಬಹುತೇಕ ಭಾರತೀಯ ಸಿನಿಮಾ ಹಾಡುಗಳೇ ಕಾಣಸಿಗುತ್ತವೆ. (ಏಜೆನ್ಸೀಸ್​)

    ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್​ಗೆ ಕನ್ನಡಿಗರ ಸಲಾಂ

    ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​

    ಯೂಟ್ಯೂಬ್​ ವಿಡಿಯೋಗಳೆಲ್ಲ ನಿಜವೆಂದು ನಂಬಿದ್ರೆ ನಿಮಗೂ ಇದೇ ಗತಿ ಆಗ್ಬಹುದು ಹುಷಾರ್..!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts