More

    ಮನಿ ಡಬ್ಲಿಂಗ್​ ದಂಧೆ: ಆರೋಪಿ ಬಂಧನವಾಗುತ್ತಿದ್ದಂತೆ ಪೊಲೀಸ್​ ಸಿಬ್ಬಂದಿ ಪರಾರಿ!

    ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮನಿ ಡಬ್ಲಿಂಗ್​ ದಂಧೆಗೆ ಪೊಲೀಸ್​ ಸಿಬ್ಬಂದಿ ಸಾಥ್​ ನೀಡಿರುವ ಆರೋಪ ಕೇಳಿಬಂದಿದ್ದು, ಆರೋಪಿ ಚಂದ್ರ ಎಂಬಾತನ ಬಂಧನದ ಬೆನ್ನಲ್ಲೇ ಪೊಲೀಸ್​ ಸಿಬ್ಬಂದಿ ಪರಾರಿ ಆಗಿರುವುದು ಅನುಮಾನ ಹುಟ್ಟುಹಾಕಿದೆ.

    ಆರೋಪಿ ಚಂದ್ರಶೇಖರ್ ಅಲಿಯಾಸ್ ಖೋಟಾನೋಟ್ ಚಂದ್ರನಿಗೆ ಚಿತ್ರದುರ್ಗದ ಇಮಾಮ್ ಎಂಬ ಪೊಲೀಸ್ ಸಿಬ್ಬಂದಿ ಸಾಥ್ ನೀಡಿರುವ ಆರೋಪವಿದೆ. ಅಲ್ಲದೆ, ಮತ್ತೊಂದಿಬ್ಬರು ಅಧಿಕಾರಿಗಳು ಕೂಡ ದಂಧೆಗೆ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ.

    ಇದೀಗ ಖೋಟಾನೋಟ್ ಚಂದ್ರು ಸಹಿತ 9 ಜನರ ಬಂಧನದ ಬೆನ್ನಲ್ಲೇ ಪೊಲೀಸ್​ ಸಿಬ್ಬಂದಿ ಪರಾರಿ ಆಗಿದ್ದಾರೆ. ನಗರಸಭಾ ಜೆಡಿಎಸ್ ಸದಸ್ಯ ಚಂದ್ರಶೇಖರ್ ಅಲಿಯಾಸ್ ಡಬ್ಲಿಂಗ್ ಚಂದ್ರು ಮೇಲೆ 25 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

    ಜನರಿಗೆ ಮೋಸ ಮಾಡುವ ಚಂದ್ರಶೇಖರ್​ಗೆ ಪೊಲೀಸ್​ ಸಿಬ್ಬಂದಿ ಮೀಡಿಯೇಟರ್ ಆಗಿದ್ದರು ಎನ್ನಲಾಗಿದೆ. ಯಾರಾದರೂ ಚಂದ್ರಶೇಖರ್​ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಹೋದ್ರೆ, ಸಿಬ್ಬಂದಿ ಇಮಾಮ್ ಅರ್ಧ ಹಣಕ್ಕೆ ಸಂಧಾನ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಇಮಾಮ್​ಗೆ ಸಿಪಿಐ ಒಬ್ಬರ ಸಾಥ್ ಕೂಡ ಇತ್ತು ಎನ್ನಲಾಗ್ತಿದೆ.

    ಸದ್ಯ ಇಮಾಮ್​ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಖೋಟಾನೋಟ್ ಚಂದ್ರು ಜೊತೆ ಇಮಾಮ್ ಪಾಲುದಾರಿಕೆಯನ್ನು ಪೊಲೀಸ್​ ವರಿಷ್ಠಾಧಿಕಾರಿ ಜಿ ರಾಧಿಕಾ ಒಪ್ಪಿಕೊಂಡಿದ್ದು, ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​!

    VIDEO: ಲುಧಿಯಾನಾ ಕೋರ್ಟ್‌ ಆವರಣದಲ್ಲಿ ಸ್ಫೋಟ: ಇಬ್ಬರ ಸಾವು- ಪಾರ್ಕಿಂಗ್‌ ಜಾಗ ಧ್ವಂಸ

    ಗ್ರಾಪಂ ಅಕ್ರಮಗಳ ವಿರುದ್ಧ ದೂರು ನೀಡಿದ RTI ಕಾರ್ಯಕರ್ತನ ಕೈಕಾಲು ಮುರಿದು ಮೊಳೆ ಹೊಡೆದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts