VIDEO: ಲುಧಿಯಾನಾ ಕೋರ್ಟ್‌ ಆವರಣದಲ್ಲಿ ಸ್ಫೋಟ: ಇಬ್ಬರ ಸಾವು- ಪಾರ್ಕಿಂಗ್‌ ಜಾಗ ಧ್ವಂಸ

ಲುಧಿಯಾನಾ (ಪಂಜಾಬ್‌): ಪಂಜಾಬ್​ನ ಲುಧಿಯಾನಾದ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಕೋರ್ಟ್​ನ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ವಾಹನಗಳ ಪಾರ್ಕಿಂಗ್‌ ಜಾಗ ಸಂಪೂರ್ಣ ಧ್ವಂಸಗೊಡಿದೆ. ಆರು ಮಹಡಿಗಳ ಕೋರ್ಟ್‌ ಕಟ್ಟಡ ಇದಾಗಿದೆ. ಎರಡನೇ ಮಹಡಿಯಲ್ಲಿರುವ ವಾಶ್​ ರೂಂನಲ್ಲಿ ಸ್ಫೋಟಗೊಂಡಿರುವುದಾಗಿ ತಿಳಿದುಬಂದಿದೆ. ಸ್ಫೋಟದಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ವಿಡಿಯೋ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಇದರಲ್ಲಿ ನೋಡಬಹುದಾಗಿದೆ. ಇದೊಂದು ಪ್ರಬಲ ಸ್ಫೋಟವಾಗಿದ್ದು, ಸ್ಫೋಟದ ರಭಸಕ್ಕೆ ಇಡೀ … Continue reading VIDEO: ಲುಧಿಯಾನಾ ಕೋರ್ಟ್‌ ಆವರಣದಲ್ಲಿ ಸ್ಫೋಟ: ಇಬ್ಬರ ಸಾವು- ಪಾರ್ಕಿಂಗ್‌ ಜಾಗ ಧ್ವಂಸ