More

    ರಾಹುಲ್ ಗಾಂಧಿ ಗೆಲ್ಲುವುದೇ ಕಷ್ಟವಿದೆ

    ಚಿತ್ರದುರ್ಗ: ಪ್ರಸಕ್ತ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೆಲ್ಲುವುದೇ ಕಷ್ಟಕರವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

    ಉಮಾಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖರೊಂದಿಗೆ ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು.

    ರಾಹುಲ್ ಗಾಂಧಿ ಪ್ರಧಾನಿ ಆಗುವ ವಿಶ್ವಾಸ ಅವರ ಪಕ್ಷದ ನಾಯಕರಲ್ಲೇ ಇಲ್ಲ. ದೇಶದಲ್ಲಿ ಒಟ್ಟು ಎಷ್ಟು ಸೀಟು ಗೆಲ್ಲುತ್ತೇವೆಂಬ ಸ್ಪಷ್ಟತೆ ಕಾಂಗ್ರೆಸ್ಸಿಗರಲ್ಲಿ ಇಲ್ಲ. 40 ಸೀಟು ಗೆಲ್ಲುತ್ತೇವೋ ಇಲ್ಲವೋ ಎಂಬ ಆತಂಕ ಕೈ ಮುಖಂಡರನ್ನು ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಚಾಮರಾಜನಗರ, ಮೈಸೂರು ಗೆದ್ದರೆ ಸಿಎಂ ಕುರ್ಚಿ, ಬೆಂಗಳೂರು ಗ್ರಾಮಾಂತರ ಗೆದ್ದರೆ ಡಿಸಿಎಂ ಕುರ್ಚಿ ಉಳಿಯುತ್ತದೆಂದು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಹೊರತು ಪಕ್ಷ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಇಲ್ಲ ಎಂದರು.

    ದೇಶದಲ್ಲಿ ಭಾರತೀಯ ಜನತಾ ಪಕ್ಷ ಅತೀ ವಿಶ್ವಾಸದಲ್ಲಿದೆ. ಆಪ್ ಕೀ ಬಾರ್ ಮೋದಿ ಸರ್ಕಾರ ನಿಶ್ಚಿತ. ಬಹುಮತಕ್ಕೆ 283 ಸಾಕು. ಆದರೆ, ನಮ್ಮ ಗುರಿ 400 ಖಂಡಿತ ತಲುಪುತ್ತೇವೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ವಾರವಷ್ಟೇ ಉಳಿದಿದೆ. ಶಕ್ತಿ ಕೇಂದ್ರದ ಪ್ರಮುಖರು ಇನ್ನಷ್ಟು ಶಕ್ತಿಯುತವಾಗಿ ತಮ್ಮ ಬೂತ್‌ಗಳಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ನೇರ್ಲಗುಂಟೆ ತಿಪ್ಪೇಸ್ವಾಮಿ, ಎಂಎಲ್ಸಿ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಲಿಂಗಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts