More

    ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರ ರಿಪೋರ್ಟ್​ ಕಾರ್ಡ್​ ಹೀಗಿದೆ

    ನವದೆಹಲಿ: ಬಿಜೆಪಿ ಸಂಸದ (ರಾಜ್ಯಸಭಾ ಸದಸ್ಯ) ಸುಬ್ರಮಣಿಯನ್ ಸ್ವಾಮಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ತಮ್ಮದೇ ಕೇಂದ್ರ ಸರ್ಕಾರದ ಟೀಕಾ ಪ್ರಹಾರ ನಡೆಸಿದ್ದಾರೆ. ಆಡಳಿತದ ಎಲ್ಲ ವಿಷಯಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಜರಿದಿದ್ದಾರೆ.

    ಆರ್ಥಿಕತೆ, ಗಡಿ ರಕ್ಷಣೆ ಸೇರಿದಂತೆ ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಫ್ಘಾನಿಸ್ತಾನದಲ್ಲಿ ಉಂಟಾದ ಬಿಕ್ಕಟ್ಟನ್ನು ಕೂಡ ಸರ್ಕಾರ ಸರಿಯಾಗಿ ಎದುರಿಸಲಿಲ್ಲ ಎಂದು ಸುಬ್ರಮಣಿಯನ್​ ಸ್ವಾಮಿ, ತೀವ್ರ ವಿವಾದಕ್ಕೆ ಕಾರಣವಾದ ಪೆಗಾಸಸ್​ ಡೇಟಾ ಉಲ್ಲಂಘನೆಗೆ ಮೋದಿ ಸರ್ಕಾರವನ್ನು ದೂರಿದರು. ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕಾಶ್ಮೀರವು ‘ಕತ್ತಲೆ’ಯ ಸ್ಥಿತಿಯಲ್ಲಿದೆ ಎಂದು ಮೋದಿ ಸರ್ಕಾರದ ತಮ್ಮ ರಿಪೋರ್ಟ್​ ಕಾರ್ಡ್​ ಅನ್ನು ಟ್ವೀಟ್​ ಮಾಡಿದ್ದಾರೆ.

    ಬುಧವಾರವಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುಬ್ರಮಣಿಯನ್​ ಸ್ವಾಮಿ ಹೊಗಳಿದರು. ರಾಜಕೀಯ ದಿಗ್ಗಜರಾದ ಜಯಪ್ರಕಾಶ್​ ನಾರಾಯಣ, ಮೊರಾರ್ಜಿ ದೇಸಾಯಿ, ರಾಜೀವ್​​ ಗಾಂಧಿ, ಚಂದ್ರಶೇಖರ್​ ಮತ್ತು ಪಿ.ವಿ. ನರಸಿಂಹರಾವ್​ ಜತೆ ಮಮತಾ ಅವರನ್ನು ಹೋಲಿಸಿ ಮಾತನಾಡಿದ್ದರು. ಮಮತಾ ಅವರು ಮೂರು ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಈ ವೇಳೆ ಸುಬ್ರಮಣಿಯನ್​ ಸ್ವಾಮಿ ಅವರನ್ನು ಭೇಟಿ ಮಾಡಿದ ವೇಳೆ ಇಬ್ಬರು ಉಭಯಕುಶಲೋಪರಿ ವಿಚಾರಿಸಿದರು.

    ಇನ್ನು ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಚೀನಾ ನಮ್ಮ ಪರಮಾಣು ಅಸ್ತ್ರಕ್ಕೆ ಹೆದರದಿದ್ದರೆ ನಾವು ಅವರ ಅಣ್ವಸ್ತ್ರಗಳಿಗೆ ಏಕೆ ಹೆದರಬೇಕು? ಎಂದು ನವೆಂಬರ್ 23 ರಂದು ಟ್ವೀಟ್ ಮಾಡಿದ್ದಾರೆ. ಅದಕ್ಕೂ ಒಂದು ದಿನದ ಮೊದಲು, ಬೆಲೆ ಏರಿಕೆಯ ಕುರಿತು ಟ್ವಿಟರ್ ಬಳಕೆದಾರರ ಕಾಮೆಂಟ್‌ಗೆ ಅವರು ಉತ್ತರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಅರ್ಥಶಾಸ್ತ್ರ ತಿಳಿದಿಲ್ಲ ಎಂದು ಕಾಲೆಳೆದಿದ್ದರು. (ಏಜೆನ್ಸೀಸ್​)

    ಮಾಜಿ ಪತಿ ನಾಗಚೈತನ್ಯ ಬರ್ತಡೇಯ ಮಾರನೇ ದಿನ ಸಮಂತಾ ಮಾಡಿದ್ದು ಸರಿನಾ? ಅಭಿಮಾನಿಗಳ ಆಕ್ರೋಶ!

    VIDEO| ಇಂತಹ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್‌ ನೀವು ನೋಡಿರಲಿಕ್ಕಿಲ್ಲ…

    ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹೆಸರೇಳಿ ರಾಜ್ಯದ ಜನತೆಗೆ ಸಚಿವರು ಕೊಟ್ಟ ಭರವಸೆ ಹೇಳಿಕೆ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts