More

    ಬೆಂಗ್ಳೂರು ವಿವಿಯಲ್ಲಿ ಬಿಬಿಎಂಪಿಯಿಂದ ಅವೈಜ್ಞಾನಿಕ ಹಂಪ್ಸ್​ ನಿರ್ಮಾಣ: ಒಂದೇ ದಿನ 3 ಅಪಘಾತ, ಕೋಮಾಗೆ ಜಾರಿದ ಬೈಕ್​ ಸವಾರ

    ಬೆಂಗಳೂರು: ಬೆಂಗಳೂರು ವಿವಿ ಕ್ಯಾಂಪಸ್​ನ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್ ಹರಿದು ಎಂಎಸ್ಸಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೆನ್ನಲ್ಲೇ ಅದೇ ರಸ್ತೆಯಲ್ಲಿ ನಿರ್ವಿುಸಿರುವ ಅವೈಜ್ಞಾನಿಕ ಹಂಪ್ಸ್​ನಿಂದ ಒಂದೇ ದಿನ ಮೂರು ಅಪಘಾತಗಳು ಸಂಭವಿಸಿದ್ದು, ಓರ್ವ ಬೈಕ್​ ಸವಾರ ಸ್ಥಿತಿ ಗಂಭೀರವಾಗಿದೆ.

    ಬೈಕ್​ ಸವಾರನನ್ನು ರಾಮಾಂಜಿನಪ್ಪ ಜಿ. ಎಂಬುವರು ಕೋಮಾಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ. ರಾಮಾಂಜಿನಪ್ಪ ಅವರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಡಾ. ಮುನಿರಾಜಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್​ಡಿ ಅಧ್ಯಯನ ನಡೆಸುತ್ತಿದ್ದರು. ರಸಾಯನಿಕ ಶಾಸ್ತ್ರ ವಿಭಾಗದ ಪಕ್ಕದ ತಿರುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

    ನಿನ್ನೆ (ಅ.11) ಸಂಜೆ ಒಂದೇ ದಿನ ಮೂರು ಅಪಘಾತಗಳು ಬಿಬಿಎಂಪಿ ನಿರ್ಮಿಸಿದ ಅವೈಜ್ಞಾನಿಕ ಹಂಪ್ಸ್​ನಿಂದಲೇ ಸಂಭವಿಸಿದೆ. ನಾಯಂಡಹಳ್ಳಿಯ ಸಾದಿಕ್ (35) ಎಂಬುವರು ಸಹ ಗಾಯಗೊಂಡಿದ್ದಾರೆ.

    ಕ್ಯಾಂಪಸ್​ನೊಳಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿರುವುದರಿಂದ ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿನಿ ಗಾಯಗೊಂಡಿದ್ದ ಸ್ಥಳದ ಸಮೀಪವೇ ಬಿಬಿಎಂಪಿಯಿಂದ ಹಂಪ್ಸ್ ನಿರ್ವಿುಸಲಾಗಿದೆ. ಹಂಪ್ಸ್​ಗೆ ಪೇಯಿಂಟ್​ನಿಂದ ಗುರುತು ಮಾಡಿಲ್ಲ. ಹಂಪ್ಸ್ ಇರುವಿಕೆ ಬಗ್ಗೆ ಸೂಚನಾ ಫಲಕ ಅಳವಡಿಸಿಲ್ಲ. ಹೀಗಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು. ಬಿಎಂಟಿಸಿ ಬಸ್​ನ ಚಕ್ರ ಹರಿದು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್​ನೊಳಗೆ ಸಾರ್ವಜನಿಕ ವಾಹನಗಳ ಸಂಚಾರ ನಿಬಂಧಕ್ಕೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಬೋಧಕ ಮತ್ತು ಬೋಧಕೇತರ ನೌಕರರ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದರಿಂದ ಮಂಗಳವಾರ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದುಕೊಂಡಿತು.

    ಇಡೀ ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ, ಬೆಂಗಳೂರು ವಿವಿಯ ಕ್ಯಾಂಪಸ್​ನಲ್ಲಿ ಮಾತ್ರ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಹೆದ್ದಾರಿಯ ಸ್ವರೂಪ ಪಡೆದಿದೆ. ಇದರಿಂದ ಕ್ಯಾಂಪಸ್​ನಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.

    ಧರಣಿ ಕೈಬಿಡಲು ಸೋಮಣ್ಣ ಮನವಿ
    ವಿವಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕುಳಿತಿರುವ ವಿದ್ಯಾರ್ಥಿಗಳನ್ನು ಸಚಿವ ವಿ. ಸೋಮಣ್ಣ ಮಂಗಳವಾರ ಭೇಟಿಯಾಗಿ ಸಮಸ್ಯೆಯನ್ನು ಆಲಿಸಿದರು. ಕ್ಯಾಂಪಸ್​ನಲ್ಲಿ ವಾಹನಗಳು ಹೆಚ್ಚಾಗಿ ಓಡಾಡುತ್ತಿರುವ ವಿಚಾರ ಗೊತ್ತಿದ್ದು, ಸಮಸ್ಯೆ ಪರಿಹರಿಸಲಾಗುವುದು. ವಿಶ್ವವಿದ್ಯಾಲಯ ಅಂದರೆ ಜ್ಞಾನದೇಗುಲ, ಮಕ್ಕಳ ಜ್ಞಾನರ್ಜನೆ ಮುಖ್ಯ. ಹೀಗಾಗಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

    ಒಂದೇ ವೇದಿಕೆಯಲ್ಲಿ ರಮ್ಯಾ-ರಚಿತಾ; ಹೆಡ್ ಬುಷ್ ಪ್ರಿ-ರಿಲೀಸ್​ನಲ್ಲಿ ಸ್ಟಾರ್ ನಟಿಯರು

    ಪಿಡಿಒಗಳಿಗೆ ಸೂಪರ್ ಪವರ್!: ಪ್ರಸ್ತಾವನೆ ಒಪ್ಪದ ಸಿಎಂ; ಆಡಳಿತ ಪಕ್ಷದಲ್ಲೂ ಅಸಮಾಧಾನ

    ಉಕ್ಕುವ ಸಾಗರದ ಸೊಕ್ಕಿಗೆ ಸಿಕ್ಕಿಹೋದ ನಾಗರಿಕತೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts