More

    ಭಕ್ತರ ದಾಹ ತೀರಿಸುವ ಕೊಡುಗೆ ಮಹತ್ವಪೂರ್ಣ

    ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ದಾಹ ತೀರಿಸಲು ನೀಡಿದ ನೀರಿನ ಘಟಕ ಹೆಚ್ಚು ಅನುಕೂಲಕರ. ಸೇವಾ ರೂಪದಲ್ಲಿ ನೀಡಿರುವುದು ಮಹತ್ವಪೂರ್ಣವಾದುದು ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.

    ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಗೆ ದಾನಿ ಉದ್ಯಮಿ ರಾಜಾ ಬೆಂಗಳೂರು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಸ್ವೀಕರಿಸಿ ಸೋಮವಾರ ಮಾತನಾಡಿದರು.

    ರಾಜಾ ಬೆಂಗಳೂರು ಅವರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ ಕೋಡಿಬೈಲು, ಪೂರ್ವಾಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ವಿಶ್ವನಾಥ ನಡುತೋಟ, ಶಿವರಾಮ ಯೇನೆಕಲ್ಲು, ಗಿರಿಧರ್ ಸ್ಕಂದ, ಲೋಕೇಶ್ ಬಿ.ಎನ್, ಗೋಪಾಲ್ ಎಣ್ಣೆಮಜಲು, ನಿಯೋಜಿತ ಅಧ್ಯಕ್ಷ ಚಂದ್ರಶೇಖರ ನಾಯರ್ ಎನ್.ಕೆ, ಕಾರ್ಯದರ್ಶಿ ಮೋಹನದಾಸ್ ಎಣ್ಣೆಮಜಲು, ಪೂರ್ವ ಕಾರ್ಯದರ್ಶಿ ಡಾ.ರವಿ ಕಕ್ಕೆಪದವು, ಸದಸ್ಯ ರೋಹಿತ್ ಬಿ.ಬಿ, ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್‌ಎಂ.ಡಿ, ಇನ್ನರ್‌ವ್ಹೀಲ್ ಸ್ಥಾಪಕಾಧ್ಯಕ್ಷೆ ಶೋಭಾ ಗಿರಿಧರ್, ಬೆಂಗಳೂರಿನ ಯೋಗೀಶ್ ಭಟ್, ನಾರಾಯಣ ಸ್ವಾಮಿ, ಅಜಿತ್, ಶಿವಪ್ರಸಾದ್ ಹುದ್ದೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts