More

    ಮತದಾನ ಹೆಚ್ಚಳಕ್ಕೆ ಮನವೊಲಿಸಬೇಕು

    ಕಲಬುರಗಿ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಮತದಾರರ ಮನವೋಲಿಸಲು ಇನ್ನಷ್ಟು ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತçದ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸ್ವೀಪ್ ಚಟುವಟಿಕೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮತದಾರರ ಮನೆಗಳಿಗೆ ಭೇಟಿ ನೀಡಿ ೧೯೫೦ ಸಹಾಯವಾಣಿ ಬಗ್ಗೆ ಮಾಹಿತಿ ನೀಡಬೇಕು. ಮತದಾನ ಚೀಟಿಯನ್ನು ಮನೆ-ಮನೆಗೆ ತಲುಪಿಸುವುದಲ್ಲದೆ, ಮದುವೆ ಕಾರ್ಯಕ್ರಮಗಳಿಗೆ ಆಹ್ವಾನಿಸುವ ರೀತಿ ಮತದಾರರನ್ನು ಮತದಾನಕ್ಕೆ ಕರೆಯಬೇಕು ಎಂದು ಸಲಹೆ ನೀಡಿದರು.

    ನಾ ಭಾರತ್ ಚುನಾವಣಾ ದೃಶ್ಯ ಸಾಂಗ್ ಪ್ರದರ್ಶಿಸಲಾಯಿತು. ಪಿ.ಎಸ್.ವಸ್ತçದ್ ಅಧಿಕಾರಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮಾತನಾಡಿದರು.

    ಜಿಪಂ ಆವರಣದಲ್ಲಿದ್ದ ಸೆಲ್ಫಿ ಸ್ಟಾö್ಯಂಡ್, ಸೈನೇಜ್ ಬೋರ್ಡ್ ಹಾಗೂ ಸ್ವೀಪ್ ವಾಹಿನಿಗಳನ್ನು ವೀಕ್ಷಣೆ ಮಾಡಲಾಯಿತು. ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ಸ್ವಾಗತಿಸಿದರು. ಮಧುಮತಿ ವಂದಿಸಿದರು. ಗುಲ್ಬರ್ಗ ದಕ್ಷಿಣ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಾಧವರಾವ ಗಿತ್ತೆ ಇದ್ದರು.

    ವಾಡಿಗೆ ಭೇಟಿ: ಕಡಿಮೆ ಮತದಾನವಾಗಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವಾಡಿಯ ಕೆಲ ಪ್ರದೇಶಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತçದ್ ಭೇಟಿ ನೀಡಿ ಮಾಹಿತಿ ಪಡೆದರು. ಮತದಾನ ಹೆಚ್ಚಳ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts