More

    1 ರಿಂದ 5ನೇ ತರಗತಿ ಪುನಾರಂಭ ಯಾವಾಗ? ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದು ಹೀಗೆ…​

    ಬೆಂಗಳೂರು: ಒಂದರಿಂದ ಐದನೇ ತರಗತಿವರೆಗೂ ಶಾಲೆ ಓಪನ್ ಮಾಡುವ ಬಗ್ಗೆ ನಾನು ಮತ್ತು ಸಿಎಂ ಉತ್ಸಾಹದಲ್ಲಿ ಇದ್ದೇವೆ. ಆದರೆ, ತಜ್ಞರ ಜತೆ ಚರ್ಚೆ ಮಾಡಿದ ಬಳಿಕ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ.

    ಮಕ್ಕಳ ಆರೋಗ್ಯ ಮತ್ತು ಜೀವವೂ ಮುಖ್ಯ
    ದಿಗ್ವಿಜಯ ನ್ಯೂಸ್​ ವರದಿಗಾರರ ಜತೆ ಮಾತನಾಡಿ ಶಿಕ್ಷಣ ಸಚಿವರು, ಶಾಲೆ ತೆರೆಯಲು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಒಪ್ಪಿಗೆ ಕಡ್ಡಾಯವಾಗಿ ಬೇಕು. ಶಿಕ್ಷಣ ಎಷ್ಟು ಮುಖ್ಯವೋ ಮಕ್ಕಳ ಆರೋಗ್ಯ ಮತ್ತು ಜೀವ ಸಹ ಅಷ್ಟೇ ಮುಖ್ಯವಾಗಿದೆ. ಒಂದರಿಂದ ಐದನೇ ತರಗತಿ ಅಥವಾ ಮೂರರಿಂದ ಐದನೇ ತರಗತಿ ತೆರೆಯಬೇಕಾ ಎಂದು ತಜ್ಞರ ಸಲಹೆಯಂತೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದರು.

    ಸಮಿತಿ ಒಪ್ಪಿಗೆ ಕೊಡಬಹುದು
    ನಮ್ಮ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸ್ವಲ್ಪ ಕಾಯಿರಿ ಎಂದು ಹೇಳ್ತಿದ್ದಾರೆ. ಕೆಲ ಕಡೆ ಮಕ್ಕಳಿಗೆ ಡೆಂಗ್ಯೂ ಜ್ವರು ಬರುತ್ತಿರುವುದರಿಂದ ಕಾಯಿರಿ ಎಂದಿದ್ದಾರೆ. ಕರ್ನಾಟಕದ ಮೂರನೇ ಅಲೆ ಪರಿಣಾಮ ಬೀರಿಲ್ಲ. ಕೇರಳದಲ್ಲೂ ಪ್ರಕರಣಗಳು ಕಡಿಮೆ ಆಗಿದೆ. ಮಕ್ಕಳು ಕರೊನಾ ನಿಯಮ ಪಾಲನೆ ಮಾಡುವ ಬಗ್ಗೆ ನಮಗೆ ಭಯ ಇದೆ. ತಜ್ಞರ ಜತೆ ಚರ್ಚೆ ಮಾಡಿ ಒಪ್ಪಿಗೆ ಪಡೆಯುತ್ತೇವೆ. ಸದ್ಯದ ವಾತಾವರಣ ನೋಡಿ ಸಮಿತಿ ಒಪ್ಪಿಗೆ ಕೊಡಬಹುದು. ಸದ್ಯ ಶಾಲೆಗಳು ತೆರೆದಿರುವ ಕಡೆ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಎಂದರು.

    ಧೈರ್ಯವಾಗಿ ಶಾಲೆಗೆ ಕಳುಹಿಸಿ
    ಒಂದನೇ ತಾರೀಖಿನಿಂದ 6 ರಿಂದ 12ನೇ ತರಗತಿವರೆಗೂ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲಾಗುವುದು. ಶಾಲೆ ತೆರದಾಗಿನಿಂದ ಹಾಜರಾತಿ ಚೆನ್ನಾಗಿದೆ. ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು ಧೈರ್ಯವಾಗಿ ಶಾಲೆಗೆ ಕಳುಹಿಸಿ ಎಂದು ಶಿಕ್ಷಣ ಸಚಿವರು ಕರೆ ನೀಡಿದರು. ವಿಧ್ಯಾರ್ಥಿಗಳು ಶಿಕ್ಷಕರ ಜತೆ ಇದ್ದು ವಿದ್ಯೆ ಕಲಿತ್ರೆ ಒಳ್ಳೆಯದು ಎಂದರು.

    ಸಲಹೆ ಪಡೆದು ಮುಂದುವರಿಯುತ್ತಿದ್ದೇವೆ
    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ವಿಚಾರವಾಗಿ ಗಾಂಧಿ ಅವರೇ ಮೆಕಾಲೆ ಶಿಕ್ಷಣ ಪದ್ದತಿ ಬದಲಿಸುವಂತೆ ಹೇಳಿದ್ದರು. ಅದರ ಮುಂದೂವರೆದ ಭಾಗವನ್ನೇ ನಾವು ಮಾಡುತ್ತಿದ್ದೇವೆ. ಎಲ್ಲರ ಸಲಹೆ ಪಡೆದು ನಾವು ಮುಂದುವರಿಯುತ್ತಿದ್ದೇವೆ. ಟಾಸ್ಕ್ ಫೋರ್ಸ್ ಕಮಿಟಿ ಎಲ್ಲವನ್ನೂ ನೋಡಿ ಅಂತಿಮ ಮಾಡುತ್ತದೆ.

    ಗಾಂಧಿ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಅವರು ಓದಲಿ
    ರಾಷ್ಟ್ರೀಯ ಶಿಕ್ಷಣ ನೀತಿ ಆರ್​ಎಸ್​ಎಸ್​ ನೀತಿ ಎನ್ನುವ ಕಾಂಗ್ರೆಸ್​ ಆರೋಪಕ್ಕೆ ಉತ್ತರಿಸಿದ ಸಚಿವರು ಇದು ರಾತ್ರೋರಾತ್ರಿ ತರುತ್ತಿರುವ ನೀತಿ ಅಲ್ಲ. ಗಾಂಧಿ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಅವರು ಓದಲಿ. ಮಕ್ಕಳ ನಿಜವಾದ ಶಕ್ತಿ ಹೊರಗಡೆ ತರಲು ಆಗ್ತಿಲ್ಲ. ಹೀಗಾಗಿ ನಾವು ಬದಲಾವಣೆಗೆ ಮುಂದಾಗಿದ್ದೇವೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಯಾಕೆ ಬದಲಾವಣೆ ತಂದರು ಎಂದು ಪ್ರಶ್ನಿಸಿದ ಶಿಕ್ಷಣ ಸಚಿವರು ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಇಪಿ ಜಾರಿ ಮಾಡಲಾಗುವುದು ಎಂದರು.

    ಕಾಂಗ್ರೆಸ್ ರಾಜಕೀಯ ಹತಾಶೆಯಲ್ಲಿ ಇದೆ
    ಆರ್​ಎಸ್​ಎಸ್​ ಮತ್ತು ಬಿಜೆಪಿ ತಾಲಿಬಾನಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರಾಜಕೀಯ ಹತಾಶೆಯಲ್ಲಿ ಇದೆ. ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಈ ರೀತಿ ಮಾತನಾಡಿಸುತ್ತಿದೆ. ಆರ್​ಎಸ್​ಎಸ್​ ವಿರುದ್ಧ ನೂರು ಸುಳ್ಳು ಹೇಳಿ ಸತ್ಯ ಮಾಡಲು ಕಾಂಗ್ರೆಸ್​ ಹೊರಟಿದೆ. ಕಾಂಗ್ರೆಸ್ ಅವರಿಗೆ ಶಿಕ್ಷಣ ಬೇಕಿಲ್ಲ. ಕೇರಳ ಸಂಸದರೊಬ್ಬರು ಹೇಳಿದಂತೆ ಶಿಕ್ಷಣ ಹೆಚ್ಚಾದಂತೆ ಕಾಂಗ್ರೆಸ್​ಗೆ ನಷ್ಟ ಎಂಬಂತೆ ಇವರ ಹೇಳಿಕೆಗಳು ಮತ್ತು ಇವರ ನಡೆಗಳು ಅದೇ ರೀತಿ ಇದೆ ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

    ಡಿವೋರ್ಸ್​ ವಿಚಾರವಾಗಿ ಕೊನೆಗೂ ಮೌನ ಮುರಿದ ಸಮಂತಾ: ಆದ್ರೆ ಸೌತ್​ ಬ್ಯೂಟಿ ಹೇಳಿಕೆಯಿಂದ ಫ್ಯಾನ್ಸ್​ ಕನ್ಫ್ಯೂಸ್​!

    ಒಂದೇ ಒಂದು ಜವಾನನ ಕೆಲಸಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಿ..!

    ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

    ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts