More

    ನನ್ನ ಆಸೆ ಪೂರೈಸು ಇಲ್ದಿದ್ರೆ… ಕರೆ ಮಾಡಿದ ವಿವಾಹಿತನ ಮಾತು ಕೇಳಿ ಅಪ್ರಾಪ್ತೆ ನರ್ಸ್​ ದುರಂತ ಸಾವು

    ಖಮ್ಮಂ: ಪ್ರೀತಿಯ ಹೆಸರಲ್ಲಿ ವಿವಾಹಿತನೊಬ್ಬನ ಕಿರುಕುಳ ಸಹಿಸದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

    ಕುಸುಮರಾಜು ವರ್ಷಿತಾ (17) ಮೃತ ದುರ್ದೈವಿ. ಈಕೆ ಖಮ್ಮಂ ಜಿಲ್ಲೆಯ ತಲ್ಲಡಾ ಗ್ರಾಮದ ನಿವಾಸಿ. ತಂದೆಯ ಸಾವಿನ ಬಳಿಕ ಆಕೆಯ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡಿಕೊಂಡು ಕಾರ್ಯನಿರತ ಮಹಿಳಾ ಹಾಸ್ಟೆಲ್​ನಲ್ಲಿ ತಂಗಿದ್ದಳು.

    ತಾನು ಕೆಲಸ ಮಾಡುತ್ತಿದ್ದ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತಿರುವೂರ್​ ಮಂಡಲದ ಮುನುಕೋಲಾ ನಿವಾಸಿ ಮಲ್ಲವರಪು ಮಧುಕುಮಾರ್​ ಎಂಬಾತ ಪ್ರೀತಿ ಮಾಡುವಂತೆ ಸದಾ ಪೀಡಿಸುತ್ತಿದ್ದ. ಅಲ್ಲದೆ, ತನ್ನ ಆಸೆಗಳನ್ನು ಪೂರೈಸುವಂತೆಯೂ ಕಾಡುತ್ತಿದ್ದ. ಅಲ್ಲದೆ, ಸಮಸ್ಯೆಯಿದೆ ಎಂದು ಹೇಳಿ ಆಕೆಯಿಂದ ಹಣವನ್ನು ಪಡೆದುಕೊಂಡಿದ್ದ. ಆತನ ಕಿರುಕುಳ ಹೆಚ್ಚಾದ್ದರಿಂದ ವರ್ಷಿತಾ ಕೆಲಸ ಬಿಟ್ಟು ಬೇರೊಂದು ಆಸ್ಪತ್ರೆಗೆ ಸೇರಿದ್ದಳು.

    ಆರೋಪಿ ಮಧುಕುಮಾರ್​ಗೆ ಈಗಾಗಲೇ ಮದುವೆ ಆಗಿದ್ದರೂ ಕಿರುಕುಳ ಮಾತ್ರ ನಿಲ್ಲಿಸಿರಲಿಲ್ಲ. ವರ್ಷಿತಾಗೆ ಕರೆ ಮಾಡಿದ್ದ ಮಧುಕುಮಾರ್​​, ತನ್ನ ಆಸೆಗಳನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದ. ಇಲ್ಲವಾದಲ್ಲಿ ಕಾಲ್​ ರೆಕಾರ್ಡ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ತುಂಬಾ ಮನನೊಂದಿದ್ದ ವರ್ಷಿತಾ ಸೋಮವಾರ ಬೆಳಗ್ಗೆ ಆಕೆಯ ಗೆಳತಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಕರೆ ಮಾಡಿದ ಬೆನ್ನಲ್ಲೇ ಫ್ರೆಂಡ್​​ ತಕ್ಷಣ ವರ್ಷಿತಾ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣ ಮನೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ನೋಡಿ, ಆಘಾತಕ್ಕೆ ಒಳಗಾಗಿ ಕುಸಿದುಬಿದ್ದಿದ್ದಾಳೆ. ತಕ್ಷಣ ತಾಯಿ ಖಮ್ಮಂಗೆ ತೆರಳಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ವರ್ಷಿತಾ ಮೃತದೇಹದ ಪಕ್ಕದಲ್ಲಿ ವಿಷದ ಇಂಜಕ್ಷನ್​ ಬಿದ್ದಿರುವುದು ಕಂಡುಬಂದಿದ್ದು, ಆಕೆ ವಿಷದ ಇಂಜಕ್ಷನ್​ನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಂಬಲಾಗಿದೆ.

    ಸದ್ಯ ವರ್ಷಿತಾ ಮೃತದೇಹವನ್ನು ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರವಾನಿಸಲಾಗಿದ್ದು, ಆರೋಪಿ ಮಧುಕುಮಾರ್​ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಕೇಪ್​ ಆಗಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

    ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ್ದಕ್ಕೆ ಮಹಿಳೆಗೆ ಬೆಂಕಿಯಿಟ್ಟು ಕೊಂದ ಕಾಮುಕ

    ಮೋದಿಜೀ ನೀವು ಲಾಖಿಂಪುರ್​ ಖೇರಿಗೆ ಹೋಗುವಿರಾ? ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ಸವಾಲು

    ಸ್ವಹಿತಾಸಕ್ತಿ ಸುಳಿಯಲ್ಲಿ ಸಹಕಾರ | ಹೊಸ ಪ್ಯಾಕ್ಸ್ ಸ್ಥಾಪನೆಗೆ ಅತ್ಯುತ್ಸಾಹ; ಮಾರ್ಗಸೂಚಿ ಕಡೆಗಣಿಸಿ ಒತ್ತಡ ತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts