More

    ಈ ಬಾರಿಯ ಐಪಿಎಲ್​ ಟ್ರೋಫಿ ಯಾರ ಮುಡಿಗೆ? CSK vs KKR ಬಗ್ಗೆ ಜ್ಯೋತಿಷಿಗಳು ನುಡಿದ ಭವಿಷ್ಯ ಹೀಗಿದೆ..!

    ನವದೆಹಲಿ: ಅಕ್ಟೋಬರ್​ 15 ರ ಶುಕ್ರವಾರದಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕೋಲ್ಕತ ನೈಟ್​ ರೈಡರ್ಸ್​ ನಡುವೆ ನಡೆಯುವ ಫೈನಲ್ ಪಂದ್ಯದ ಬಳಿಕ 14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ವಿದ್ಯುಕ್ತ ತೆರೆ ಬೀಳಲಿದೆ.

    ಥ್ರಿಲ್ಲಿಂಗ್​ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕಾದು ಕುಳಿತಿದ್ದಾರೆ. ದಸರಾ (ಅ.15) ಸಂಭ್ರಮದ ನಡುವೆಯೇ ಐಪಿಎಲ್​ ಫೈನಲ್​ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಡಬಲ್​ ಧಮಾಕ ಆಗಿದೆ.

    ಇನ್ನು ಐಪಿಎಲ್​ ಇತಿಹಾಸದಲ್ಲೇ ಸಿಎಸ್​ಕೆ ಮೂರು ಟ್ರೋಫಿ ಗೆದ್ದಿದೆ. 9 ಬಾರಿ ಪ್ಲೇ ಆಫ್​ ಸುತ್ತಿಗೇರಿದ್ದು, 8 ಬಾರಿ ಫೈನಲ್​ ಪ್ರವೇಶಿಸಿದೆ. ಕೊಲ್ಕತ ಕೇವಲ ಒಂದು ಬಾರಿ ಮಾತ್ರ ಐಪಿಎಲ್​ ಟ್ರೋಫಿ ಎತ್ತಿಹಿಡಿದಿದೆ ಮತ್ತು 6 ಬಾರಿ ಪ್ಲೇ ಆಫ್​ ಪ್ರವೇಶಿಸಿದೆ.

    ಇದೀಗ ಅಭಿಮಾನಿಗಳಲ್ಲಿ ಈಗಾಗಲೇ ಚರ್ಚೆಯಾಗುತ್ತಿರುವಂತೆ ನಾಳಿನ ಫೈನಲ್​ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ? ಎಂಬ ಪ್ರಶ್ನೆ ಮೂಡಿದೆ. ಜ್ಯೋತಿಷಿಗಳ ಪ್ರಕಾರ ಕೆಲವು ವರ್ಷಗಳಲ್ಲಿ ನೈಟ್ ರೈಡರ್ಸ್ ಐಪಿಎಲ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಆದರೆ, ಈ ವರ್ಷ ಆರಂಭದಲ್ಲಿ ಕೆಕೆಆರ್​ ತಂಡ ಹಿಂದೆ ಉಳಿದಿತ್ತು. ಇದೀಗ ಒಳ್ಳೆಯ ಟ್ರ್ಯಾಕ್​ ಮರಳಿರುವ ತಂಡ ಫೈನಲ್​ ಪ್ರವೇಶಿಸಿದೆ. ಆದಾಗ್ಯೂ, ತಂಡವು ಐಪಿಎಲ್ ಅನ್ನು ಗೆಲ್ಲುವುದಿಲ್ಲ. ಏಕೆಂದರೆ ಅದೃಷ್ಟದ ಮನೆಯಾದ 9ನೇ ಮನೆ ಕೆಕೆಆರ್​ ಪರವಾಗಿಲ್ಲ ಎಂಬುದು ಜ್ಯೋತಿಷಿಗಳು ಭವಿಷ್ಯವಾಗಿದೆ.

    ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ಜ್ಯೋತಿಷಿಗಳ ಗೆಲ್ಲುವ ತಂಡವಾಗಿದೆ. ಈ ಬಾರಿಯು ಸಿಎಸ್​ಕೆ ಫೈನಲ್​ ತಲುಪಲಿದೆ ಎಂದು ಬಹುತೇಕ ಜ್ಯೋತಿಷಿಗಳು ಮೊದಲೇ ಭವಿಷ್ಯ ನುಡಿದಿದ್ದರು. ಅದರಂತೆಯೇ ಸಿಎಸ್​ಕೆ ಫೈನಲ್​ ತಲುಪಿದೆ. ಜಾತಕಫಲದಲ್ಲಿ ಗುರು ಗ್ರಹದ ಪ್ರಭಾವ ಸಿಎಸ್​ಕೆ ತಂಡದ ಮೇಲಿದೆ. ಇನ್ನೊಂದೆಡೆ ನಾಳಿನ ಪಂದ್ಯದಲ್ಲಿ ಧೋನಿ ಆಟ ಹೇಗಿರಲಿದೆ ಎಂಬ ಕುತೂಹಲ ಹೊಂದಿರುವ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಬಹುದು. ಏಕೆಂದರೆ, ಧೋನಿ ಅವರ ಗುರು ಸ್ಥಾನವೂ ಅವರಿಗೆ ಅನುಕೂಲಕರವಾಗಿಲ್ಲ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

    ಆದರೆ, ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬುದನ್ನು ತಿಳಿಯಲು ನಾಳೆ ರಾತ್ರಿಯವರೆಗೆ ಕಾಯಬೇಕಾಗಿದೆ. ನಾಳೆ ಐಪಿಎಲ್​ ಸೀಸನ್​ 14ರ ಟ್ರೋಫಿಗಾಗಿ ಸಿಎಸ್​ಕೆ ಮತ್ತು ಕೆಕೆಆರ್​ ಮೈದಾನಕ್ಕಿಳಿದು ಕಾದಾಡಲಿದ್ದು, ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. (ಏಜೆನ್ಸೀಸ್​)

    ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್: ಈ ವರ್ಷದ ಕಾರ್ಣಿಕದ ಒಳಾರ್ಥ ಹೀಗಿದೆ…

    ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುವವರು ಓದಲೇಬೇಕಾದ ಸ್ಟೋರಿ ಇದು..!

    ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts