More

    ಕಾಬೂಲ್​ನಲ್ಲಿ ಅಮೆರಿಕ ನಡೆಸಿದ ವಾಯುದಾಳಿಗೆ ಅಲ್​ಖೈದಾ ನಾಯಕ ಐಮನ್​ ಅಲ್-ಜವಾಹಿರಿ ಬಲಿ

    ವಾಷಿಂಗ್ಟನ್​​: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಐಮನ್ ಅಲ್-ಜವಾಹಿರಿನನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಸೋಮವಾರ ಘೋಷಿಸಿದ್ದಾರೆ.

    2011ರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ಅಲ್​ಖೈದಾ ಸಂಸ್ಥಾಪಕ ಒಸಮಾ ಬಿನ್​ಲಾಡೆನ್​ ಸಾವಿನ ಬಳಿಕ ಉಗ್ರ ಸಂಘಟನೆಗಾದ ಅತಿದೊಡ್ಡ ನಷ್ಟ ಇದಾಗಿದೆ. ಜವಾಹಿರಿ ಓರ್ವ ಈಜಿಪ್ತಿಯನ್​ ಸರ್ಜನ್​. 2001ರ ಸೆಪ್ಟೆಂಬರ್​ 11ರಂದು ಅಮೆರಿಕದ ಮೇಲೆ ದಾಳಿ ನಡೆದ ದಾಳಿಯಲ್ಲಿ 3000 ಮಂದಿ ಬಲಿಯಾಗಿದ್ದರು. ಈ ದಾಳಿಗೆ ಜವಾಹಿರಿ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಈತನ ತಲೆಗೆ 25 ಯುಎಸ್​ ಡಾಲರ್​ ಬಹುಮಾನ ಘೋಷಣೆ ಮಾಡಲಾಗಿತ್ತು.

    ಭಾನುವಾರ ಬೆಳಗ್ಗೆ (ಕಾಬೂಲ್​ ಸಮಯ) 6.18ರಲ್ಲಿ ಕಾಬೂಲ್​ನಲ್ಲಿ ನಡೆದ ಯುಎಸ್​ ಡ್ರೋನ್​ ದಾಳಿಗೆ ಜವಾಹಿರಿ ಹತನಾಗಿದ್ದಾನೆ.

    ಈ ಬಗ್ಗೆ ಟೆಲಿವೈಸ್ಡ್ ಮೂಲಕ ಸಂದೇಶ ರವಾನಿಸಿದ ಯುಎಸ್​ ಅಧ್ಯಕ್ಷ ಜೋ ಬೈಡೆನ್​, ಈ ಉಗ್ರ ನಾಯಕ ಇನ್ನಿಲ್ಲ ಮತ್ತು ನ್ಯಾಯವನ್ನು ನೀಡಲಾಗಿದೆ. ಎಷ್ಟು ಸಮಯ ತೆಗೆದುಕೊಂಡಿತು ಎಂಬುದು ಮುಖ್ಯವಲ್ಲ, ನೀನು ಎಲ್ಲಿ ಅಡಗಿದ್ದೆ ಎಂಬುದು ವಿಚಾರವಲ್ಲ, ನೀವು ನಮ್ಮ ಜನರಿಗೆ ಬೆದರಿಕೆಯಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ನಿಮ್ಮನ್ನು ಹುಡುಕುತ್ತದೆ ಮತ್ತು ನಿಮ್ಮನ್ನು ಹೊರಗೆಳೆದು ಹೊಡೆದು ಹಾಕುತ್ತದೆ ಎಂದು ಬೈಡೆನ್​ ಹೇಳಿದ್ದಾರೆ. (ಏಜೆನ್ಸೀಸ್​)

    ರಾಷ್ಟ್ರಪತಿಯೊ ರಾಷ್ಟ್ರಪತ್ನಿಯೊ?: ಜನಮತ

    ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..

    ಟೆಂಡರ್ ಅಕ್ರಮಕ್ಕೆ ಬ್ರೇಕ್: ನಕಲಿ ದಾಖಲೆಗಳ ಪತ್ತೆಗೆ ಡಿಬಾರ್​ಮೆಂಟ್​ ಸಮಿತಿ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts