More

    ಭಾರತ ನಮ್ಮ ನಿಜ ಸ್ನೇಹಿತ, ಈ ನಮ್ಮ ಸ್ಥಿತಿಗೆ ಪಾಕಿಸ್ತಾನವೇ​ ಕಾರಣವೆಂದ ಆಫ್ಘಾನ್​ ಪಾಪ್​ಸ್ಟಾರ್​

    ನವದೆಹಲಿ: ಅಫ್ಘಾನಿಸ್ತಾನದ ಸದ್ಯ ಪರಿಸ್ಥಿತಿಯಲ್ಲಿ ಭಾರತ ನೀಡುತ್ತಿರುವ ಸಹಾಯವನ್ನು ನೆನೆದು ಕೃತಜ್ಞತೆ ಸಲ್ಲಿಸಿರುವ ಆಫ್ಘಾನ್​ ಖ್ಯಾತ ಪಾಪ್​ ಸ್ಟಾರ್ ಆರ್ಯಾನ ಸಯೀದ್​, ರಕ್ತಪಿಪಾಸು ತಾಲಿಬಾನ್​ ಸಂಘಟನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ತಾಲಿಬಾನಿ ಉಗ್ರರು ಆಫ್ಘಾನ್​ ರಾಜಧಾನಿ​ ಕಾಬುಲ್​ ವಶಪಡಿಸಿಕೊಂಡ ಬೆನ್ನಲ್ಲೇ ಆರ್ಯಾನ ಸಯೀದ್​ ಅಫ್ಘಾನಿಸ್ತಾವನ್ನು ತೊರೆದಿದ್ದಾರೆ. ನಾನು ಖಡಾಖಂಡಿತವಾಗಿ ಪಾಕಿಸ್ತಾನವನ್ನು ದೂಷಿಸುತ್ತೇನೆ. ಹಲವು ವರ್ಷಗಳವರೆಗೆ ನಾವು ನೋಡಿಕೊಂಡು ಬಂದಿದ್ದೇವೆ. ಅನೇಕ ಸಾಕ್ಷಿಗಳನ್ನು ಸಹ ನೋಡಿದ್ದೇವೆ. ತಾಲಿಬಾನ್​ ಸಬಲೀಕರಣದ ಹಿಂದೆ ಪಾಕಿಸ್ತಾನವಿದೆ ಎಂದಿದ್ದಾರೆ.

    ಪ್ರತಿ ಬಾರಿಯೂ ನಮ್ಮ ಸರ್ಕಾರ ತಾಲಿಬಾನ್ ವಿರುದ್ಧ ನಿಂತಾಗ ಅವರು ಪಾಕಿಸ್ತಾನದ ಬೆಂಬಲವನ್ನು ನೋಡುತ್ತಾರೆ. ಹಾಗಾಗಿಯೇ ನಾನು ಅವರನ್ನು ದೂಷಿಸುತ್ತೇನೆ. ಪಾಕ್​ ಹಿಂದೆ ಸರಿಯುವ ಮತ್ತು ಅಫ್ಘಾನಿಸ್ತಾನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾನು ಭಾವಿಸಿದ್ದೇನೆಂದು ಆರ್ಯಾನ ಎನ್​ಎನ್​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಆದರೆ, ತಾವು ಇರುವ ಸ್ಥಳದ ಮಾಹಿತಿಯನ್ನು ತಿಳಿಸಲು ಆರ್ಯಾನ ಇಚ್ಚಿಸಲಿಲ್ಲ.

    ತಾಲಿಬಾನ್​ ಉಗ್ರರಿಗೆ ಸೂಚನೆ ನೀಡುತ್ತಿರುವುದು ಸಹ ಪಾಕಿಸ್ತಾನ ಸರ್ಕಾರವೇ ಮತ್ತು ಅವರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವು ಅವರಿಗೆ ನೀಡುವ ಹಣಕಾಸಿನ ನೆರವನ್ನು ಕಡಿತಗೊಳಿಸುತ್ತದೆ ಎಂಬ ಭರವಸೆ ಇದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹಣದ ನೆರವು ನೀಡಬೇಡಿ, ಅದನ್ನು ಉಗ್ರರ ತರಬೇತಿಗೆ ಬಳಸಿಕೊಳ್ಳುತ್ತಿದ್ದಾರೆಂದು ಹೇಳಿದರು.

    ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿಯನ್ನು ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯ ಒಟ್ಟಿಗೆ ಕುಳಿತು ಮಾತಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆರ್ಯಾನ ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತದೆ ಎಂಬ ಭರವಸೆ ಇದೆ. ಪಾಕಿಸ್ತಾನದಿಂದಾಗಿಯೇ ಆಫ್ಘಾನ್​ ನೆಲದಲ್ಲಿ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನನಗನಿಸಿದೆ ಎಂದು ತಿಳಿಸಿದರು.

    ಇದೇ ಭಾರತದ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ ಆರ್ಯಾನ್​, ಭಾರತ ಯಾವಾಗಲೂ ನಮ್ಮ ಒಳ್ಳೆಯ ಸ್ನೇಹಿತ. ನಮ್ಮ ಜನರ ಮೇಲೆ ಭಾರತ ದಯೆ ತೋರುತ್ತಿದ್ದರು. ಅವರು ಸಹಾಯ ಮನೋಭಾವದವರು. ಆಫ್ಘಾನ್​ ನಿರಾಶ್ರಿತರು ಕೂಡ ಭಾರತ ಬಗ್ಗೆ ಯಾವಾಗಲೂ ಮೆಚ್ಚುಗೆಯ ಮಾತಗಳನ್ನಾಡುತ್ತಿದ್ದರು. ನಾವು ಯಾವಾಗಲೂ ಭಾರತಕ್ಕೆ ಕೃತಜ್ಞರಾಗಿರುತ್ತೇವೆ. ಅಫ್ಘಾನಿಸ್ತಾನದ ಪರವಾಗಿ, ನಾನು ಭಾರತಕ್ಕೆ ನನ್ನ ಅತ್ಯಂತ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಹಲವು ವರ್ಷಗಳಿಂದ ನಾವು ನಮ್ಮ ನೆರೆಹೊರೆಯಲ್ಲಿರುವ ಏಕೈಕ ಉತ್ತಮ ಸ್ನೇಹಿತ ಭಾರತ ಎಂದು ಅರಿತುಕೊಂಡೆವು” ಎಂದು ಅವರು ಹೇಳಿದರು.

    2015ರಲ್ಲಿ ಆರ್ಯಾನ ಸಯೀದ್ ಅವರು ತಾಲಿಬಾನ್​ ಜಾರಿಗೆ ಮಾಡಬೇಕೆಂದಿರುವ ಮೂರು ನಿಷೇಧಗಳನ್ನು ಮುರಿದರು. ಓರ್ವ ಮಹಿಳೆಯಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದು, ಹಾಡಿದ್ದು, ಮತ್ತು ಹಿಜಾಬ್ ಧರಿಸದೇ ಕಾರ್ಯಕ್ರಮ ನೀಡಿದ್ದು ಆದರೆ, ಈ ನಿಯಮಗಳು ತಾಲಿಬಾನ್ ಅಡಿಯಲ್ಲಿ ಪಾಲಿಸಬೇಕಿದೆ. (ಏಜೆನ್ಸೀಸ್​)

    ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

    ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣ: ನಟಿ ರಾಗಿಣಿ, ಸಂಜನಾ ಸೇರಿ ಹಲವರ ಡ್ರಗ್ಸ್ ಸೇವನೆ ಖಚಿತ

    ಕೇವಲ 87 ರೂಪಾಯಿಗೆ ಮನೆ ಮಾರಾಟ! ಆದರೆ ಷರತ್ತು ಅನ್ವಯ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts