More

    ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಶಿವನ ದೇವಸ್ಥಾನದ ಅದ್ಭುತ ದೃಶ್ಯ: ನಿಮ್ಮ ಹುಬ್ಬೇರಿಸೋ ವಿಡಿಯೋ ಇದು

    ನವದೆಹಲಿ: ಭಾರತ ಹಲವು ಅಚ್ಚರಿಗಳ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಹೀಗಾಗಿಯೇ ಭಾರತಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಪ್ರತಿನಿತ್ಯ ಬಂದು ಹೋಗುತ್ತಿರುತ್ತಾರೆ. ಸೋಜಿಗದ ಭಾರತದಲ್ಲಿ ಕಣ್ಣು ಮೇಳೈಸುವ ಅನೇಕ ದೃಶ್ಯಗಳಿವೆ. ಇದೀಗ ನಾರ್ವೆ ದೇಶದ ರಾಜತಾಂತ್ರಿಕ ಎರಿಕ್​ ಸೋಲ್ಹೈಮ್ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋ ಅದಕ್ಕೆ ತಾಜಾ ಉದಾಹರಣೆಯಾಗಿದೆ.

    ಎರಿಕ್​ ಅವರು ಭಾರತದ ಹಿಮಾಲಯದ ಸರಣಿಯಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ಶಿವನ ದೇವಾಲಯವನ್ನು ಡ್ರೋನ್​ ಕ್ಯಾಮೆರಾ ಮೂಲಕ ಸೆರೆಹಿಡಿದಿರುವ ಅತ್ಯದ್ಭುತ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಎರಿಕ್​ ಅವರು ಭಾನುವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಈವರೆಗೆ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 50 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

    ವಿಡಿಯೋ ಶೇರ್​ ಮಾಡಿರುವ ಎರಿಕ್​, ವಿಸ್ಮಯಕಾರಿ ಭಾರತ! 5000 ವರ್ಷಗಳಷ್ಟು ಹಳೆಯದ್ದು ಎಂದು ನಂಬಲಾದ ಹಾಗೂ ವಿಶ್ವದ ಅತಿ ಎತ್ತರದಲ್ಲಿರುವ ಮಹಾದೇವನ ಮಂದಿರವಿದು. ಉತ್ತರಾಖಂಡದಲ್ಲಿದೆ ಎಂದು ಅಡಿಬರಹವನ್ನು ನೀಡಿದ್ದಾರೆ.

    ವಿಡಿಯೋದಲ್ಲಿ ಸಂಪೂರ್ಣ ಹಿಮದಿಂದಲೇ ಆವೃತವಾಗಿರುವ ಪರ್ವತಗಳ ನಡುವೆ ಇರುವ ಶಿವ ದೇವಸ್ಥಾನವನ್ನು 360 ಡಿಗ್ರಿಯಲ್ಲಿ ಸೆರೆಹಿಡಿದಿರುವ ಪಕ್ಷಿ ನೋಟವಿದೆ. ವಿಡಿಯೋದ ಹಿನ್ನೆಲೆಯಲ್ಲಿ ಕೇದಾರನಾಥ ಸಿನಿಮಾದ “ನಮೋ ನಮೋ” ಭಕ್ತಿಗೀತೆ ಕೇಳುತ್ತದೆ. ಈ ವಿಡಿಯೋ ತಕ್ಷಣವೇ ನೆಟ್ಟಿಗರ ಮನ ಸೆಳೆದಿದ್ದು, ಕೆಲ ನೆಟ್ಟಿಗರಂತೂ ವಿಡಿಯೋ ಸೌಂದರ್ಯವನ್ನು ನೋಡಿ ಕಳೆದುಹೋಗಿದ್ದಾರೆ. ಇನ್ನು ಕೆಲವರು ಎರಿಕ್​ ಅವರು ಮಾಡಿರುವ ತಪ್ಪೊಂದನ್ನು ಹುಡುಕಿದ್ದಾರೆ.

    ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದೆ. ಇದು ಹಿಮಪಾತಗಳು ಮತ್ತು ಭೂಕಂಪಗಳಾದರೂ ಸಹ ಉಳಿದುಕೊಂಡಿದೆ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದರೆ, ಇದು ತುಂಗನಾಥ ಮಹಾದೇವ ದೇವಾಲಯ. ಪಂಚ ಕೇದಾರಗಳಲ್ಲಿ ಇದು ಒಂದಾಗಿದೆ. ಈ ದೇವಾಲಯವು ಚಾರಣಕ್ಕೆ ಅದ್ಭುತವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದ್ದಾರೆ.

    ಎರಿಕ್​ ಅವರು ಮಾಡಿರುವ ತಪ್ಪನ್ನು ಗುರುತಿಸಿರುವ ಇನ್ನೊಬ್ಬ ನೆಟ್ಟಿಗ, ನೀವು ಹೇಳಿದಂತೆ ಈ ದೇವಸ್ಥಾನವು 5000 ವರ್ಷಗಳಷ್ಟು ಹಳೆಯದಲ್ಲ. ಇದೊಂದು ಸುಂದರವಾದ ದೇವಾಲಯವಾಗಿದೆ ಮತ್ತು ಈ ತಪ್ಪು ವಿಶೇಷಣಗಳ ಅಗತ್ಯವಿಲ್ಲ ಎಂದಿದ್ದಾರೆ. ಈ ದೇವಸ್ಥಾನ ಅಷ್ಟು ಹಳೆಯದಾಗಿರಲು ಸಾಧ್ಯವಿಲ್ಲ. ಈ ದೇವಾಲಯವನ್ನು ಸುಮಾರು ಕ್ರಿ.ಶ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ.

    ಇನ್ನು ಸರ್ಕಾರಿ ವೆಬ್​ಸೈಟ್ ಪ್ರಕಾರ, ತುಂಗನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು 3,680 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾಗಿದೆ. ದೇವಾಲಯವು 1,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. (ಏಜೆನ್ಸೀಸ್​)

    ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಮಧ್ಯಾಹ್ನ 1.30 ರವರೆಗೂ ನಡೆಯಲಿದೆ ಪೂಜಾ ವಿಧಿ-ವಿಧಾನಗಳು

    ಬೆಂಗ್ಳೂರೇತರ ನಗರಗಳಲ್ಲಿ ಐಟಿ-ಬಿಟಿ ವಿಸ್ತರಣೆಗೆ ಸರ್ಕಾರ ಬದ್ಧ: ಸಚಿವ ಡಾ. ಅಶ್ವತ್ಥನಾರಾಯಣ ವಿಶ್ವಾಸ

    30 ವರ್ಷದ ಕಟ್ಟಡಕ್ಕಿಲ್ಲ ಬೆಲೆ!: ಸವಕಳಿ ದರ ಪರಿಷ್ಕರಣೆಗೆ ನಿರ್ಧಾರ; ಹಳೇ ಬಿಲ್ಡಿಂಗ್ ಖರೀದಿದಾರರಿಗೆ ಸಿಹಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts