More

    ಬೆಂಗ್ಳೂರೇತರ ನಗರಗಳಲ್ಲಿ ಐಟಿ-ಬಿಟಿ ವಿಸ್ತರಣೆಗೆ ಸರ್ಕಾರ ಬದ್ಧ: ಸಚಿವ ಡಾ. ಅಶ್ವತ್ಥನಾರಾಯಣ ವಿಶ್ವಾಸ

    ಹುಬ್ಬಳ್ಳಿ: ‘ಐಟಿ-ಬಿಟಿ ಕೈಗಾರಿಕೆಗಳು ಪ್ರತಿಭೆ ಆಧಾರಿತವಾಗಿ ಬೆಳೆಯುವಂಥವು. ಹುಬ್ಬಳ್ಳಿ-ಧಾರವಾಡ ಸೇರಿ ರಾಜ್ಯದ ವಿವಿಧೆಡೆ ಸಾಕಷ್ಟು ಪ್ರತಿಭೆಗಳಿದ್ದು, ಅವಕಾಶ ಒದಗಿಸುವ ದೃಷ್ಟಿಯಿಂದ ಸರ್ಕಾರ ಬಿಯಾಂಡ್ ಬೆಂಗಳೂರು ಘೊಷಣೆ ಮಾಡಿ, ಪ್ರೋತ್ಸಾಹ ನೀಡುತ್ತಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಬೆಂಗಳೂರು ಹೊರತುಪಡಿಸಿದ ನಗರಗಳಲ್ಲಿ ಅನೇಕ ಐಟಿ-ಬಿಟಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

    ಕನ್ನಡದ ನಂ.1 ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247ನ್ಯೂಸ್’ನ ಹುಬ್ಬಳ್ಳಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ‘ಬಿಯಾಂಡ್ ದಿ ಬೆಂಗಳೂರು ಘೋಷಣೆ ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಕೆಡಿಇಎಂ) ಸ್ಥಾಪನೆ ಸೇರಿ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಐಟಿ-ಬಿಟಿ ಕ್ಷೇತ್ರದ ಉದ್ಯಮಿಗಳಲ್ಲಿ ಬೆಂಗಳೂರೇತರ ನಗರಗಳ ಬಗ್ಗೆ ವಿಶ್ವಾಸ ಹೆಚ್ಚಿಸಲು ಮುಂದಾಗಿದೆ ಎಂದರು.

    ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಮುಂದಿನ 10 ತಿಂಗಳಲ್ಲಿ 8 ಹೊಸ ಸ್ಟಾರ್ಟಪ್ ಕಾರ್ಯಾರಂಭ ಮಾಡಲಿವೆ. ಸ್ಟಾರ್ಟಪ್​ಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಇಲ್ಲಿ ಐಐಟಿ, ಐಐಐಟಿ ಸೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತೀರ್ಣರಾದವರಲ್ಲಿ ಕೆಲವರು ಇಲ್ಲಿಯೇ ಉದ್ಯೋಗ ಮಾಡಲು ಪೂರಕ ಕೈಗಾರಿಕೆ ಸ್ಥಾಪನೆಯಾಗುವಂತೆ ಮಾಡುವುದು ಸರ್ಕಾರದ ಧ್ಯೇಯವಾಗಿದೆ. ಪ್ರಧಾನಿಯವರ ಘೊಷಣೆಯ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಕಾರಕ್ಕೆ ಜ್ಞಾನ ಆಧಾರಿತ ಕೈಗಾರಿಕೆಗಳನ್ನು ಹೆಚ್ಚಿಸುವುದು ಪೂರಕವಾಗಿದೆ ಎಂದರು. ಐಟಿ, ಬಿಟಿ ಕಂಪನಿಗಳಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ರಾಜ್ಯದ ಶೇ. 90 ಭಾಗದಲ್ಲಿ 4ಜಿ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ 5ಜಿಯನ್ನೂ ಅನುಷ್ಠಾನಗೊಳಿಸುತ್ತೇವೆ. ಇಂಟರ್​ನೆಟ್ ಗುಣ ಮಟ್ಟ ಹೆಚ್ಚಿಸುತ್ತೇವೆ. ಇಂದಿನ ದಿನಗಳಲ್ಲಿ ಇಂಟರ್​ನೆಟ್ ನೀರಿನಷ್ಟೇ ಅಗತ್ಯವಾಗಿದೆ. ಟೆಲಿಕಾಂ ಪಾಲಿಸಿ ತಂದಿರುವ ಮೊದಲ ರಾಜ್ಯ ನಮ್ಮದು ಎಂದು ವಿವರಿಸಿದರು.

    ಸಂಸ್ಥೆಗಳೇ ವಿವಿಗಳಾಗಬೇಕು: ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ಸಿಗಬೇಕು. ಒಟ್ಟಾರೆ ನೇಮಕಾತಿ ಅನುಪಾತ ಶೇ.28 ಇತ್ತು. ನಮ್ಮ ಸರ್ಕಾರ ಬಂದ ಮೇಲೆ 34.50ಕ್ಕೆ ತಲುಪಿದೆ. ಶೇ. 50ಕ್ಕೆ ತಲುಪಿಸಬೇಕಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು. ಪ್ರತಿಯೊಂದು ಸಂಸ್ಥೆ ವಿಶ್ವವಿದ್ಯಾಲಯ ಆಗಬೇಕು. ಇದೊಂದು ಸವಾಲು. ವಿವಿಗಳಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ನೀಡಿದರೆ ಪ್ರತಿಯೊಬ್ಬರೂ ಹೆಚ್ಚಿನ ಜ್ಞಾನ ಪಡೆದುಕೊಳ್ಳಬಹುದು ಎಂದರು.

    ಎನ್​ಇಪಿ ಗೇಮ್ ಚೇಂಜರ್: ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಗೇಮ್ ಚೇಂಜರ್ ಆಗಲಿದೆ. ಶಿಕ್ಷಣ ಕಲಿಯುವ ಹಾಗೂ ಕಲಿಸುವಿಕೆಯಲ್ಲಿ ಎನ್​ಇಪಿಯಿಂದ ಸಾಕಷ್ಟು ಸುಧಾರಣೆಯಾಗುತ್ತಿದೆ. ಈ ಶಿಕ್ಷಣದ ಮೂಲಕ ಪ್ರತಿಯೊಬ್ಬರಿಗೂ ಗುಣಮಟ್ಟದ ಜೀವನ ದೊರಕಲಿದೆ. ಜಾಗತೀಕರಣದಿಂದಾಗಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಲಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ವಿಶ್ವವಿದ್ಯಾಲಯಗಳ ಆರ್ಥಿಕ ಸಮಸ್ಯೆ ನಿವಾರಿಸಲು ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ವಿವಿಗಳಲ್ಲಿನ ಆಡಳಿತ ಮತ್ತು ನಾಯಕತ್ವ ಉತ್ತಮಗೊಳಿಸುವುದಕ್ಕಾಗಿ ನೂತನ ಕಾಯ್ದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ಅಲ್ಲಿನ ಸಂಪೂರ್ಣ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ, ಪಾರದರ್ಶಕತೆ ತರಲಾಗುವುದು. ಆ ಮೂಲಕ ವಿವಿಗಳಲ್ಲಿನ ಆಡಳಿತವನ್ನು ಮಾದರಿಗೊಳಿಸಲಾಗುವುದು ಎಂದರು.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಎಲ್ಲೆಂದರಲ್ಲಿ ಮೊಬೈಲ್​ಫೋನ್​ ಚಾರ್ಜ್​ಗೆ ಹಾಕ್ತೀರಾ?; ಹಾಗಿದ್ರೆ ಇದನ್ನು ತಪ್ಪದೇ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts