More

    ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಮಧ್ಯಾಹ್ನ 1.30 ರವರೆಗೂ ನಡೆಯಲಿದೆ ಪೂಜಾ ವಿಧಿ-ವಿಧಾನಗಳು

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ.

    ಅರಮನೆಯಲ್ಲಿ ಮುಂಜಾನೆ 5.30 ರಿಂದಲೇ ಆಯುಧಪೂಜೆ ಕೈಂಕರ್ಯಗಳು ಆರಂಭವಾಗಿದ್ದು, ಮಧ್ಯಾಹ್ನ1.30 ರವರೆಗೆ ಪೂಜೆಗಳು ನಡೆಯಲಿವೆ. ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜಾ ವಿಧಾನಗಳನ್ನು ನಡೆಸುತ್ತಿದ್ದಾರೆ.

    ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ, ಪೂಜಾ ವಿಧಿ ವಿಧಾನ ಆರಂಭವಾಗಿದೆ. 07.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು ಹಾಗೂ ಪಟ್ಟದ ಕುದುರೆ ಆಗಮನವಾಗಲಿದೆ. 8.10ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆಯಾಗಲಿದೆ. 9 ಗಂಟೆಗೆ ಚಂಡಿ ಹೋಮ ಪೂರ್ಣಾಹುತಿ ನಡೆಯಲಿದೆ. 9.25ಕ್ಕೆ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ಆಯುಧಗಳನ್ನು ವಾಪಸ್​ ತರಲಾಗುತ್ತದೆ. ಬಳಿಕ 11.02 ರಿಂದ 11.25ರ ಶುಭ ಮುಹೂರ್ತದಲ್ಲಿ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಲಿದ್ದಾರೆ.

    ಸಿಂಹಾಸನ, ಪಟ್ಟದ ಆನೆ, ಫಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳಿಗೆ ಯದುವೀರ್​ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಈ ರಾಶಿಯವರಿಗಿಂದು ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ

    ವಿಜಯದಾಯಕ ದಶಮಿ: ಆಯುಧಪೂಜೆಯ ವೈಶಿಷ್ಟ್ಯ..

    ಸರ್ವರಿಗೂ ಒಳಿತು ತರುವ ದೇವಿ ಆರಾಧನೆ: ನವರಾತ್ರಿ ವೈಭವ 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts