More

    ಯದುವೀರ್, ಎಂ.ಲಕ್ಷ್ಮಣ್ ಸೇರಿ 24 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿರುವ 24 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ಧವಾಗಿದೆ.
    ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಕ್ರಮಬದ್ಧವಾಗಿವೆ. ನೋಂದಾಯಿತ ರಾಜಕೀಯ ಪಕ್ಷಗಳಲ್ಲಿ ಕರ್ನಾಟಕ ಜನತಾ ಪಕ್ಷದ ಕದಂಬ ನಾ. ಅಂಬರೀಶ್, ಕರುನಾಡು ಪಾರ್ಟಿಯ ಎಚ್.ಕೆ.ಕೃಷ್ಣ, ಸಮಾಜವಾದಿ ಜನತಾಪಕ್ಷ (ಕರ್ನಾಟಕ)ದ ಡಾ.ಎಚ್.ಎಂ.ನಂಜುಂಡಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿಯ ಮಾ.ಸ.ಪ್ರವೀಣ್, ಕಂಟ್ರಿ ಸಿಟಿಜನ್ ಪಾರ್ಟಿಯ ಆರ್.ಮಹೇಶ್, ಸೆಕ್ಯುಲರ್ ಡೆಮಾಕ್ರಟಿಕ್ ಕಾಂಗ್ರೆಸ್‌ನ ಎ.ಜಿ.ರಾಮಚಂದ್ರರಾವ್, ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಜಾಕೀಯ ಲೀಲಾ ಶಿವಕುಮಾರ್, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ನ ಕಾಮ್ರೇಡ್ ಟಿ.ಆರ್.ಸುನೀತ್, ಸೋಶಿಯಲಿಸ್ಟ್ ಪಾರ್ಟಿ (ಇಂಡಿಯಾ)ದ ಹರೀಶ್‌ಗೌಡ ಅವರ ನಾಮಪತ್ರ ಕ್ರಮಬದ್ಧವಾಗಿದೆ.
    ಸ್ವತಂತ್ರ ಅಭ್ಯರ್ಥಿಗಳಲ್ಲಿ ಸಿ.ಜೆ.ಅಂಬೇಡ್ಕರ್, ಕ್ರಿಸ್ಟೋಫರ್ ರಾಜ್‌ಕುಮಾರ್, ದರ್ಶನ್ ಕೆ. ಪೊನ್ನಟಿ, ಎಸ್.ದೊರೆಸ್ವಾಮಿ ನಾಯಕ, ಪಿ.ಎಸ್.ಯಡೂರಪ್ಪ, ರಾಜಣ್ಣ, ರಾಜು, ಎಂ.ರಾಮಮೂರ್ತಿ, ಎಂ.ರಂಗಸ್ವಾಮಿ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ, ಸಣ್ಣ ನಾಯಕ, ಎ.ಎಸ್.ಸತೀಶ್ ನಾಮಪತ್ರ ಕ್ರಮಬದ್ಧವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts