More

    ನೇಪಾಳದಲ್ಲಿ ಮೇಳೈಸಿದ ಕನ್ನಡ ರಾಜ್ಯೋತ್ಸವ

    ಬೆಂಗಳೂರು: ದೇಶದ ಪರಂಪರೆ ಮತ್ತು ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದ್ದಾರೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನೇಪಾಳದ ಕಂಠ್ಮಡುವಿನ ಆನಂದ ಪಶುಪತಿ ದೇವಾಲಯ ಬಳಿ ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾಡಿನ ಸಂಸ್ಕೃತಿ ಮತ್ತು ಭಾಷೆ ಉಳಿಸುವ ನಿಟ್ಟಿನಲ್ಲಿ 1915ರಲ್ಲಿ ನಾಲ್ಮಡಿ ಕೃಷ್ಣರಾಜ್ ಒಡೆಯರ್ ಮತ್ತು ದಿವಾನ ಎಚ್.ವಿ.ನಂಜುಡಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದರು. ಕನ್ನಡ ಮಾತನಾಡುವ ಪ್ರದೇಶಗಳಾದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಸೌಥ್ ಕೆನರಾ, ನಾಥ್ ಕೆನರಾ, ಕೊಡಗು ಪ್ರದೇಶವನ್ನು ಸೇರಿಸಲು ಬ್ರಿಟಿಷರು ಒಪ್ಪಲಿಲ್ಲ. ಸ್ವಾತಂತ್ರ್ಯ ಒಂದ ನಂತರ ಮಹಾರಾಜರ ಆಳ್ವಿಕೆ ಕೊನೆಗೊಂಡಿತು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನರ ಆಳ್ವಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

    ಐಪಿಎಸ್ ಅಧಿಕಾರಿ ರೂಪಾ ಡಿ.ಮೌದ್ಗಿಲ್ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷ ಇತಿಹಾಸ ಇದೆ. ದೂರದ ಕನ್ನಡ ನಾಡಿನಿಂದ ನೇಪಾಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮ ಮಾಡುತ್ತಿರುವ ಸಾಹಸದ ಕೆಲಸ. ಭಾಷೆ ಉಳಿಸಿ ಬೆಳೆಸಲು ಪ್ರತಿ ನಿತ್ಯ ಕನ್ನಡ ಬಳಸುವ ಅಂದೋಲನವಾಗಬೇಕು ಎಂದ ಸಲಹೆ ನೀಡಿದರು. ಗಾಯಕಿ ಅನುರಾಧ ಭಟ್ ತಂಡದಿಂದ ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಪ ಆರೋಗ್ಯಧಿಕಾರಿ ಡಾ.ಎ.ಎಲ್.ಕಲಾವತಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಡಾ.ಶೋಭಾ, ಡಿ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿ,ಕಾರ್ಯಾಧ್ಯಕ್ಷ ಬಿ.ರುದ್ರೇಶ್, ಉಪ ಆಯುಕ್ತ ಡಾ. ಮಂಜುನಾಥ್‌ಸ್ವಾಮಿ ಮತ್ತಿತರರಿದ್ದರು.

    ಇದನ್ನೂ ಓದಿ: ಕ್ಯಾಬಿನೆಟ್​ ಮೀಟಿಂಗ್​ ಬಗ್ಗೆ ಬಿಜೆಪಿ ಆರೋಪ; ಮಧು ಬಂಗಾರಪ್ಪ ಗರಂ

    ಭಾಷೆ ಉಳಿಸಲು ಕಟ್ಟಿಬದ್ಧ:
    ಕಳೆದ ವರ್ಷ ಕಾಶಿಯಲ್ಲಿ ರಾಜ್ಯೋತ್ಸವ ಅಚರಿಸಲಾಗಿತ್ತು. ಈ ಬಾರಿ ನೇಪಾಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮ ಅಚರಿಸಲಾಗುತ್ತಿದೆ. ಇದರಿಂದಾಗಿ ದೇಶ ವಿದೇಶಗಳಲ್ಲೂ ಕನ್ನಡವನ್ನು ಪಸರಿಸಲು ಅನುಕೂಲವಾಗುತ್ತದೆ. ಕನ್ನಡ ಹೃದಯ ಭಾಷೆ. ಕನ್ನಡಿಗರು ವಿಶಾಲ ಹೃದಯವುಳ್ಳವರು. ಪ್ರಪಂಚದ ಎಲ್ಲ ದೇಶಗಳಲ್ಲಿ ನೆಲಸಿದ್ದಾರೆ. ಎಲ್ಲರ ಮನಸ್ಸು ಗೆಲ್ಲುವ ಗುಣ ಕನ್ನಡಿಗರು ಹೊಂದಿದ್ದಾರೆ. ಭಾಷೆ ಉಳಿಸಲು ನಮ್ಮ ಸಂಘ ಕಟಿಬದ್ಧವಾಗಿದೆ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎ.ಅಮೃತ್ ರಾಜ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts