More

    ರಾಜ್ಯಾದ್ಯಂತ 9 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

    ಬೆಂಗಳೂರು: ರಾಜ್ಯದಾದ್ಯಂತ 9 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

    ಕೆಳಗಿನ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ
    1) ಜಿ. ಶ್ರೀಧರ್, ಇಇ ಜಿಲ್ಲಾ ನಗರಾಭಿವೃದ್ಧಿ ಕೋಶ ಡಿಸಿ ಕಚೇರಿ ಮಂಗಳೂರು
    2) ಕೃಷ್ಣ .ಎಸ್. ಹೆಬ್ಸರ್, ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್, ಉಡುಪಿ
    3) ಆರ್ ಪಿ ಕುಲಕರ್ಣಿ, ಸಿಇ ಕೆಆರ್‍ಡಿಸಿಎಲ್
    4) ಎಚ್ ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ ಮಲ್ಲೂರು ನಗರ ಯೋಜನಾ ಪ್ರಾಧಿಕಾರ, ಕೋಲಾರ
    5) ಸುರೇಶ್ ಮೊಹ್ರೆ, ಜೆಇ ಪಿಆರ್ಇ ಬೀದರ್
    6) ವೆಂಕಟೇಶ್ ಟಿ, ಡಿಸಿಎಫ್ ಸಾಮಾಜಿಕ ಅರಣ್ಯ ಮಂಡ್ಯ
    7) ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ, ಎಇಇ ಹೆಸ್ಕಾಮ್ ವಿಜಯಪುರ
    8) ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕ, ಕೋರಮಂಗಲ
    9) ಎ ಎನ್ ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್, ಬಳ್ಳಾರಿ

    ಏಕಕಾಲಕ್ಕೆ 40 ಕಡೆ ದಾಳಿ ಒಟ್ಟು 300 ಅಧಿಕಾರಿಗಳಿಂದ ದಾಳಿ ನಡೆದಿದೆ. 9 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಧಾಳಿ ಜಿಟಿಜಿಟಿ ಮಳೆಯ ನಡುವೆ ಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್​ ನೀಡಿದ್ದಾರೆ. ನಿವಾಸ ಮತ್ತ ಕಚೇರಿ ಎರಡರ ಮೇಲೆಯೂ ದಾಳಿ ನಡೆದಿದ್ದು, ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಬೆಂಗಳೂರಿನಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮನೆ ಮೇಲೆಯೂ ದಾಳಿ ನಡೆದಿದೆ. 6 ಎಸಿಪಿ, 20 ಇನ್ಸ್ ಪೆಕ್ಟರ್ ಮತ್ತು 100 ಮಂದಿ ಕಾನ್ಸ್​ಟೇಬಲ್​ಗಳಿಂದ ದಾಳಿ ನಡೆದಿದೆ. ದಾಳಿ ವೇಳೆ ದಾಖಲಾತಿಗಳು ಹಾಗೂ ಪಾಸ್​ಪೋರ್ಟ್​ಗಳ ಪರಿಶೀಲನೆ ನಡೆಸಲಾಗಿದೆ. ವೀಸಾ ಅವಧಿ ಮುಕ್ತಾಯವಾಗಿದ್ರು ಅಕ್ರಮವಾಗಿ ಕೆಲ ವಿದೇಶಿಗರು ನೆಲೆಸಿರುವ ಮಾಹಿತಿ ಹಿನ್ನಲೆ ದಾಳಿ ಮಾಡಲಾಗಿದೆ.

    ಪ್ರೀತಿಸಿ ಮದ್ವೆಯಾದ ಕೆಲವೇ ದಿನಗಳಲ್ಲಿ ಮಹಿಳೆ ಎಸ್ಕೇಪ್: ಆಕೆಯ ಆಧಾರ್​ ಕಾರ್ಡ್ ನೋಡಿ ಕುಸಿದುಬಿದ್ದ ಪತಿ!​

    ಜೀ ಕನ್ನಡ 15ನೇ ವರ್ಷದ ಮಹೋತ್ಸವ: ವೀಕ್ಷಕರಿಗೆ ಅದ್ಧೂರಿ ಕಾರ್ಯಕ್ರಮ ನೀಡಲು ಸಜ್ಜು

    ಆಸ್ಟ್ರೇಲಿಯಾದಲ್ಲಿ ಅಡುಗೆ ಮಾಡಿ 1.8 ಕೋಟಿ ರೂ. ಗೆದ್ದ ಭಾರತೀಯ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts