More

    ಆಸ್ಟ್ರೇಲಿಯಾದಲ್ಲಿ ಅಡುಗೆ ಮಾಡಿ 1.8 ಕೋಟಿ ರೂ. ಗೆದ್ದ ಭಾರತೀಯ ಯುವಕ!

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಅಡುಗೆ ಸ್ಪರ್ಧೆಯಲ್ಲಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ ಇದೀಗ ಜಾಲತಾಣದಲ್ಲಿ ಸಕತ್‌ ಫೇಮಸ್‌ ಆಗಿದ್ದಾರೆ.

    ಜಸ್ಟಿನ್ ನಾರಾಯಣ್ ಎನ್ನುವ 27 ವರ್ಷದ ಯುವಕ ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ಸೀಸನ್ 13ರ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ 2.5 ಲಕ್ಷ ಡಾಲರ್ (ಸುಮಾರು 1.8 ಕೋಟಿ ರೂಪಾಯಿ) ನಗದು ಗೆದ್ದಿದ್ದಾರೆ. ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ರಿಯಾಲಿಟಿ ಶೋನ ಫಿನಾಲೆಯಲ್ಲಿ ನಡೆದ ಭಾರಿ ಪೈಪೋಟಿಯಲ್ಲಿ ಇವರು ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

    ಆಸ್ಟ್ರೆಲಿಯಾದ ಪೇಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್ ಚೌಧರಿ ಅವರು ಜಸ್ಟಿನ್‌ ಅವರಿಗೆ ಕೊನೆಯವರೆಗೂ ಭಾರಿ ಸ್ಪರ್ಧೆ ನೀಡಿದ್ದರು. ನಂತರ ಅವರನ್ನು ಸೋಲಿಸಿ ಜಸ್ಟಿನ್‌ ಗೆದ್ದಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಪೇಟೆ ಗೆದ್ದಿದ್ದು, ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಕಿಶ್ವರ್ ಪಡೆದುಕೊಂಡಿದ್ದಾರೆ.

    ಭಾರತೀಯರಾಗಿರುವ ಜಸ್ಟಿಸ್ ನಾರಾಯಣ್ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. 13ನೇ ವಯಸ್ಸಿಗೆ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತೀಯ ಶೈಲಿಯ ಅಡುಗೆ ಹಾಗೂ ಪಾಶ್ಚಿಮಾತ್ಯ ಅಡುಗೆ ಎರಡರಲ್ಲೂ ಜಸ್ಟಿನ್ ಪಳಗಿದ್ದಾರೆ. ಇಂಡಿಯನ್ ಚಿಕನ್ ಟ್ಯಾಕೋಸ್, ಇಂಡಿಯನ್ ಚಿಕನ್ ಕರಿ ಸೇರಿ ಸಾಕಷ್ಟು ವಿಧದ ಅಡುಗೆಯನ್ನು ಜಸ್ಟಿನ್ ರಿಯಾಲಿಟಿ ಶೋನಲ್ಲಿ ಮಾಡಿದ್ದರು.

    ಅಂದಹಾಗೆ, 2017ರಲ್ಲಿ ಜಸ್ಟಿನ್ ಭಾರತಕ್ಕೆ ಬಂದಿದ್ದರು. ಇಲ್ಲಿಯ ಸಂಸ್ಕೃತಿ, ಇತಿಹಾಸ, ಜನರು ಹಾಗೂ ಆಹಾರ ಸಂಸ್ಕೃತಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆಯಂತೆ. ಆದ್ದರಿಂದ ಆಸ್ಟ್ರೇಲಿಯಾದಲ್ಲಿ ಫುಡ್ ಟ್ರಕ್ ಆರಂಭಿಸಿ ಇದರಲ್ಲಿ ಭಾರತೀಯ ಅಡುಗೆ ಪರಿಚಯಿಸುವ ಯೋಚನೆ ಅವರದ್ದು.

    ಸಿನಿಮಾದಲ್ಲಿ ಸೋನು ಸೂದ್‌ಗೆ ಹೊಡೆದರೆಂದು ಟಿವಿ ಕುಟ್ಟಿಪುಡಿ ಮಾಡಿದ ಬಾಲಕ! ನಟ ಏನೆಂದ ಕೇಳಿ…

    ನಟಿ ದಿಯಾ ಮಿರ್ಜಾಗೆ ಗಂಡುಮಗು- ಬದುಕುಳಿದಿದ್ದೇ ಪವಾಡ ಎಂದು ನೋವು ಹಂಚಿಕೊಂಡ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts