More

    ಟ್ರಕ್​ ಒಳಗೆ 46 ವಲಸೆ ಕಾರ್ಮಿಕ ಮೃತದೇಹ ಪತ್ತೆ: ಉಸಿರುಗಟ್ಟಿ, ಒದ್ದಾಡಿ ದುರಂತ ಸಾವು, ಮನಕಲಕುವ ಘಟನೆ

    ಮೆಕ್ಸಿಕೋ: ಟ್ರಕ್​ ಒಂದರ ಒಳಗೆ 46 ವಲಸೆ ಕಾರ್ಮಿಕರ ಮೃತದೇಹ ಪತ್ತೆಯಾಗಿರುವ ಆತಂಕಕಾರಿ ಘಟನೆ ಅಮೆರಿಕದ ಟೆಕ್ಸಾಸ್​ನಲ್ಲಿರುವ ಸ್ಯಾನ್​ ಆಂಟೋನಿಯೋ ನಗರದಲ್ಲಿ ನಡೆದಿದೆ. ಮಾನವ ಕಳ್ಳಸಾಗಾಟದ ಪರಿಣಾಮ ಎಂದು ಪರಿಗಣಿಸಿರುವ ಅಧಿಕಾರಿಗಳು, ಯುಎಸ್​-ಮೆಕ್ಸಿಕೋ ಗಡಿಯಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣೆಯ ಇತ್ತೀಚಿನ ಅತ್ಯಂತ ಭಯಾನಕ ಘಟನೆ ಇದು ಎಂದು ಸ್ಯಾನ್​ ಆಂಟೋನಿಯೋ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಟ್ರಕ್​ ಟ್ರೈಲರ್‌ನಲ್ಲಿ ಕಂಡುಬಂದ ನಾಲ್ವರು ಅಪ್ರಾಪ್ತರು ಸೇರಿದಂತೆ 46 ಜನರನ್ನು ಶಾಖದ ಹೊಡೆತ ಮತ್ತು ಬಳಲಿಕೆ ಕಾರಣದಿಂದ ಒಂದೇ ಟ್ರಕ್​ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಘಟನೆಯ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಟ್ರೈಲರ್​ ಟ್ರಕ್,​ ಸ್ಯಾನ್​ ಆಂಟೋನಿಯೋದ ದಕ್ಷಿಣ ಹೊರವಲಯದ ನಿರ್ಜನ ಪ್ರದೇಶದಲ್ಲಿರುವ ರೈಲ್ವೆ ಹಳಿಗಳ ಪಕ್ಕದಲ್ಲಿ ಪತ್ತೆಯಾಗಿದೆ.

    ಟ್ರಕ್​ ಒಳಗೆ ಉಸಿರುಗಟ್ಟಿ ವಲಸೆ ಕಾರ್ಮಿಕರು ಮೃತಪಟ್ಟಿರಬಹುದೆಂದು ಮೆಕ್ಸಿಕೋದ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಅವರು ತಿಳಿಸಿದ್ದಾರೆ. ಸ್ಥಳೀಯ ದೂತಾವಾಸ ಕಚೇರಿಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಆದರೆ, ಸಂತ್ರಸ್ತರ ಮೂಲ ದೇಶದ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.

    ಇತ್ತೀಚಿನ ತಿಂಗಳುಗಳಲ್ಲಿ ಯುಎಸ್-ಮೆಕ್ಸಿಕೋ ಗಡಿಯಲ್ಲಿ ದಾಖಲೆ ಸಂಖ್ಯೆಯ ವಲಸೆಗಾರರ ಗಡಿ ದಾಟುವಿಕೆ ನಡೆದಿದೆ. ಹಾಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ವಲಸೆ ನೀತಿಗಳ ಕಾರಣದಿಂದ ಅಕ್ರಮ ಗಡಿದಾಟುವಿಕ ಪ್ರಮಾಣ ಹೆಚ್ಚಾಗಿದ್ದು, ವಲಸೆ ನೀತಿಗಳ ಬಗ್ಗೆ ಭಾರೀ ಟೀಕೆಗಳು ಕೇಳಿಬರುತ್ತಿದೆ.

    ಮೆಕ್ಸಿಕನ್ ಗಡಿಯಿಂದ ಸುಮಾರು 160 ಮೈಲುಗಳು (250 ಕಿಮೀ) ದೂರದಲ್ಲಿರುವ ಸ್ಯಾನ್ ಆಂಟೋನಿಯೊ ನಗರದಲ್ಲಿ ತಾಪಮಾನವು ಸೋಮವಾರ ಹೆಚ್ಚಿನ ಆರ್ದ್ರತೆಯೊಂದಿಗೆ 103 ಡಿಗ್ರಿ ಫ್ಯಾರನ್‌ಹೀಟ್ (39.4 ಡಿಗ್ರಿ ಸೆಲ್ಸಿಯಸ್)ಗೆ ಏರಿತ್ತು.

    ಟ್ರಕ್​ ಒಳಗೆ ಮೃತಪಟ್ಟಿರುವ ಘಟನೆಗಳು ಅಮೆರಿಕದಲ್ಲಿ ಹೊಸದೇನಲ್ಲ.2017ರ ಜುಲೈ ತಿಂಗಳಲ್ಲಿ ವಾಲ್-ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಸ್ಯಾನ್ ಆಂಟೋನಿಯೊ ಪೊಲೀಸರು ಪತ್ತೆಹಚ್ಚಿದ ಟ್ರ್ಯಾಕ್ಟರ್-ಟ್ರೇಲರ್‌ನಲ್ಲಿ ಹತ್ತು ವಲಸಿಗರು ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಟ್ರ್ಯಾಕ್ಟರ್​ ಟ್ರೇಲರ್​ ಚಾಲಕ, ಜೇಮ್ಸ್ ಮ್ಯಾಥ್ಯೂ ಬ್ರಾಡ್ಲಿ ಎಂಬುವರನ್ನು ಬಂಧಿಸಲಾಗಿತ್ತು. ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿನ ತಮ್ಮ ಪಾತ್ರಕ್ಕಾಗಿ ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್​)

    ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

    VIDEO| ಕ್ರೇನ್​ನಿಂದ ಕಳಚಿ ಬಿದ್ದು ಸ್ಫೋಟಗೊಂಡ ಕ್ಲೋರಿನ್​ ಟ್ಯಾಂಕ್: 12 ಮಂದಿ ಸಾವು, ಭಯಾನಕ ದೃಶ್ಯ ಸೆರೆ

    ಅಮೇಜಾನ್​, ಗೂಗಲ್​ ಬಿಟ್ಟು ಫೇಸ್​ಬುಕ್​ ಕೆಲ್ಸಕ್ಕೆ ಸೈ ಎಂದ ವಿದ್ಯಾರ್ಥಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts