More

    ಅಮೇಜಾನ್​, ಗೂಗಲ್​ ಬಿಟ್ಟು ಫೇಸ್​ಬುಕ್​ ಕೆಲ್ಸಕ್ಕೆ ಸೈ ಎಂದ ವಿದ್ಯಾರ್ಥಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

    ನವದಹಲಿ: ಯಾವುದಾದರೂ ಒಂದು ಒಳ್ಳೆ ಕೆಲಸ ಸಿಕ್ಕರೆ ಸಾಕು ಅಂದುಕೊಳ್ಳುತ್ತೇವೆ. ಅದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಕೂಡ ಮಾಡುತ್ತೇವೆ. ಹೀಗಿರುವಾಗ ಒಂದು ಕೆಲಸ ಸಿಗುವ ಬದಲು ಒಟ್ಟೊಟ್ಟಿಗೆ ಮೂರು ಕೆಲಸ ಸಿಕ್ಕಿಬಿಟ್ಟರೆ ಅದಕ್ಕಿಂತ ದೊಡ್ಡ ಅದೃಷ್ಟ ಬೇರೊಂದಿಲ್ಲ. ಇಂತಹ ಅದೃಷ್ಟ ಕೆಲವೇ ಮಂದಿಗೆ ಇರುತ್ತದೆ. ಏಕೆಂದರೆ, ಅವರು ಶ್ರಮವು ಕೂಡ ಹಾಗೇ ಇರುತ್ತದೆ. ಇಂಥದ್ದೆ ಅದೃಷ್ಟ ಇದೀಗ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗೆ ಒಲಿದು ಬಂದಿದೆ.

    ಹೌದು. ಕೋಲ್ಕತಾದ ಜಾದವ್​ಪುರ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಫೇಸ್​ಬುಕ್​ನಲ್ಲಿ ಕೆಲಸ ದೊರಕಿದೆ. ವಾರ್ಷಿಕವಾಗಿ 1.8 ಕೋಟಿ ರೂಪಾಯಿ ಸಂಬಳ. ಇದು ಈ ವರ್ಷದಲ್ಲೇ ವಿದ್ಯಾರ್ಥಿಯೊಬ್ಬನಿಗೆ ಆಫರ್​ ಮಾಡಿದ ಅತಿ ದೊಡ್ಡ ಸ್ಯಾಲರಿ ಪ್ಯಾಕೇಜ್​ ಆಗಿದೆ.

    ಅಂದಹಾಗೆ ಆ ಅದೃಷ್ಟವಂತ ವಿದ್ಯಾರ್ಥಿಯ ಹೆಸರು ಬಿಸಾಖ್​ ಮೊಂಡಲ್​. ಫೇಸ್​ಬುಕ್​ ಮಾತ್ರವಲ್ಲ, ಗೂಗಲ್​ ಮತ್ತು ಅಮೇಜಾನ್​ನಿಂದಲೂ ಬಿಸಾಖ್​​ಗೆ ಕೆಲಸದ ಆಫರ್​ ಬಂದಿತ್ತು. ಆದರೆ, ಅವೆರಡನ್ನು ಬದಿಗಿಟ್ಟು ಫೇಸ್​ಬುಕ್​ ಆಫರ್​ ಅನ್ನು ಬಿಸಾಕ್​ ಒಪ್ಪಿಕೊಂಡಿದ್ದಾರೆ. ಏಕೆಂದರೆ, ಗೂಗಲ್​ ಮತ್ತು ಅಮೇಜಾನ್​​ಗೆ ಹೋಲಿಸಿದರೆ ಫೇಸ್​ಬುಕ್​ ಸ್ಯಾಲರಿ ಪ್ಯಾಕೇಜ್​ ಹೆಚ್ಚಾಗಿದೆ ಎಂದು ಬಿಸಾಕ್​ ಹೇಳಿದ್ದಾರೆ.

    ನಾನು ಸೆಪ್ಟೆಂಬರ್​ ತಿಂಗಳಲ್ಲಿ ಫೇಸ್​ಬುಕ್​ಗೆ ಸೇರಲಿದ್ದೇನೆ. ಈ ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ನನಗೆ ಅಮೇಜಾನ್​ ಮತ್ತು ಗೂಗಲ್​ನಿಂದ ಕೆಲಸದ ಆಫರ್​ ಬಂದಿತ್ತು. ಆದರೆ, ಫೇಸ್​ಬುಕ್​ ಹೆಚ್ಚು ಸ್ಯಾಲರಿ ಆಫರ್​ ಮಾಡಿದ್ದಕ್ಕೆ ನಾನು ಅದನ್ನು ಒಪ್ಪಿಕೊಂಡೆ ಎಂದು ಬಿಸಾಕ್​ ತಿಳಿಸಿದ್ದಾರೆ. ಅಂದಹಾಗೆ ಬಿಸಾಕ್​, ಕಂಪ್ಯೂಟರ್​​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ವಿಭಾಗದ ನಾಲ್ಕನೇ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

    ಕೆಲಸಕ್ಕಾಗಿ ಸೆಪ್ಟೆಂಬರ್​ನಲ್ಲಿ ಬಿಸಾಕ್​, ಲಂಡನ್​ಗೆ ಹಾರಬೇಕಿದೆ. ಮಂಗಳವಾರ ರಾತ್ರಿ ನನಗೆ ಕೆಲಸದ ಆಫರ್​ ಸಿಕ್ಕಿತು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಮತ್ತು ನನ್ನ ಪಠ್ಯಕ್ರಮದ ಅಧ್ಯಯನದ ಹೊರತಾಗಿ ಜ್ಞಾನವನ್ನು ಸಂಪಾದಿಸಲು ನನಗೆ ಅವಕಾಶ ಸಿಕ್ಕಿತು. ಇದರ ನೆರವಿನಿಂದ ನಾನು ಅನೇಕ ಸಂದರ್ಶನಗಳನ್ನು ಸುಲಭವಾಗಿ ಎದುರಿಸಿದೆ ಎಂದು ಬಿಸಾಕ್​ ಹೇಳಿಕೊಂಡಿದ್ದಾರೆ.

    ಬಿಸಾಕ್​ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸಾಧಾರಣ ಕುಟುಂಬದಿಂದ ಬಂದವರು. ಅವರ ತಾಯಿ ಅಂಗನವಾಡಿ ಕಾರ್ಯಕರ್ತೆ. ಹೆಸರು ಶಿಬಾನಿ. ಮಗನ ಬಗ್ಗೆ ಮಾತನಾಡಿರುವ ಶಿಬಾನಿ, “ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ. ನನ್ನ ಮಗ ಯಾವಾಗಲೂ “ಪ್ರತಿಭಾನ್ವಿತ ವಿದ್ಯಾರ್ಥಿ” ಎಂದು ಹೆಮ್ಮೆಪಟ್ಟರು.

    ಜಾದವ್​ಪುರ್​ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಅಧಿಕಾರಿ ಸಮಿತಾ ಭಟ್ಟಾಚಾರ್ಯ ಅವರು ಮಾತನಾಡಿದ್ದು, ಸಾಂಕ್ರಾಮಿಕ ಸಮಯದ ನಂತರ ವಿದ್ಯಾರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಅವಕಾಶಗಳನ್ನು ಪಡೆದಿರುವುದು ಇದೇ ಮೊದಲು ಎಂದರು.

    ಮಾಧ್ಯಮ ವರದಿಗಳ ಪ್ರಕಾರ ಜಾದವ್​ಪುರ್​ ವಿಶ್ವವಿದ್ಯಾನಿಲಯದ ಸುಮಾರು ಒಂಬತ್ತು ವಿದ್ಯಾರ್ಥಿಗಳು ಕಳೆದ ವರ್ಷ ಸಾಗರೋತ್ತರ ಕಂಪನಿಗಳಿಂದ 1 ಕೋಟಿ ರೂಪಾಯಿಗೂ ಹೆಚ್ಚು ವಾರ್ಷಿಕ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಪಠ್ಯ ತಪ್ಪುಗಳ ಪರಿಷ್ಕರಣೆ: 83 ವಿಚಾರಗಳ ಮಾರ್ಪಾಡು, ರಾಜ್ಯ ಸರ್ಕಾರ ತಿದ್ದೋಲೆ ಆದೇಶ

    ಉಚಿತ ವಿದ್ಯುತ್ ಬದಲು ಡಿಬಿಟಿ ವ್ಯವಸ್ಥೆ: ಸರ್ಕಾರಕ್ಕೆ ಗುರುಚರಣ್ ಸಮಿತಿ ಶಿಫಾರಸು, ಎಸ್ಕಾಂಗಳ ಪುನಶ್ಚೇತನಕ್ಕೆ ಸಲಹೆ

    ಜಿಎಸ್​​ಟಿ ಇನ್ನಷ್ಟು ದುಬಾರಿ ಸಾಧ್ಯತೆ: ಇಂದು-ನಾಳೆ ಮಂಡಳಿಯ 47ನೇ ಸಭೆ; ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts