ಪಠ್ಯ ತಪ್ಪುಗಳ ಪರಿಷ್ಕರಣೆ: 83 ವಿಚಾರಗಳ ಮಾರ್ಪಾಡು, ರಾಜ್ಯ ಸರ್ಕಾರ ತಿದ್ದೋಲೆ ಆದೇಶ

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪರಿಷ್ಕೃತ ಪಠ್ಯಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಸರ್ಕಾರ ಮುಂದಾಗಿದೆ. ಪರಿಷ್ಕೃತ ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ತಿದ್ದೋಲೆ ಆದೇಶ ಹೊರಡಿಸಿದೆ. ಪ್ರಮುಖವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬ ಪದ ಕೈಬಿಟ್ಟಿದ್ದು, ಕುವೆಂಪು, ಬಸವಣ್ಣ ನವರ ವಿಚಾರಗಳಲ್ಲಿ ಆಗಿರುವ ತಪ್ಪುಗಳು, ಮಠ-ಮಾನ್ಯಗಳ ವಿಚಾರಗಳನ್ನು ಸರಿಪಡಿಸಲಾಗುತ್ತದೆ. ಮತ್ತೊಮ್ಮೆ ಪರಿಷ್ಕರಣೆಗೆ ಒಳಪಡಿಸುವ ವಿಚಾರಗಳ ಪುಸ್ತಕವನ್ನು ಬುಕ್​ಲೆಟ್ ಮಾದರಿಯಲ್ಲಿ ಮುದ್ರಿಸಿ ಎಲ್ಲ ಶಾಲೆಗಳಿಗೂ ವಿತರಣೆ ಮಾಡುವಂತೆ ಪ್ರಾಥಮಿಕ ಶಿಕ್ಷಣ … Continue reading ಪಠ್ಯ ತಪ್ಪುಗಳ ಪರಿಷ್ಕರಣೆ: 83 ವಿಚಾರಗಳ ಮಾರ್ಪಾಡು, ರಾಜ್ಯ ಸರ್ಕಾರ ತಿದ್ದೋಲೆ ಆದೇಶ