VIDEO| ಕ್ರೇನ್​ನಿಂದ ಕಳಚಿ ಬಿದ್ದು ಸ್ಫೋಟಗೊಂಡ ಕ್ಲೋರಿನ್​ ಟ್ಯಾಂಕ್: 12 ಮಂದಿ ಸಾವು, ಭಯಾನಕ ದೃಶ್ಯ ಸೆರೆ

ಅಮ್ಮಾನ್​: ವಿಷಾನಿಲ ಸೋರಿಕೆಯಾಗಿ 12 ಮಂದಿ ದಾರುಣವಾಗಿರುವ ಸಾವಿಗೀಡಾಗಿರುವ ಘಟನೆ ಜಾರ್ಡನ್​ನಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಾನಿಲ ಸೋರಿಕೆಯ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸೋಮವಾರ ಜಾರ್ಡನ್​ನ ಅಖಾಬಾ ಬಂದರಿನಲ್ಲಿ ಕ್ರೇನ್​ ಒಂದು ಕ್ಲೋರಿನ್​ ಟ್ಯಾಂಕ್​ಗಳನ್ನು ಹಡಗಿಗೆ ಭರ್ತಿ ಮಾಡುತ್ತಿತ್ತು. ಈ ವೇಳೆ ಕ್ರೇನ್​ನಿಂದ ಆಕಸ್ಮಿಕ ಟ್ಯಾಂಕ್​ ಒಂದು ಕೆಳಗೆ ಬಿದ್ದಿದೆ. ಪರಿಣಾಮ ಹಳದಿ ಬಣ್ಣದ ವಿಷಾನಿಲ ಸ್ಫೋಟಗೊಂಡಿದ್ದು, ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, … Continue reading VIDEO| ಕ್ರೇನ್​ನಿಂದ ಕಳಚಿ ಬಿದ್ದು ಸ್ಫೋಟಗೊಂಡ ಕ್ಲೋರಿನ್​ ಟ್ಯಾಂಕ್: 12 ಮಂದಿ ಸಾವು, ಭಯಾನಕ ದೃಶ್ಯ ಸೆರೆ