More

    VIDEO| ಕ್ರೇನ್​ನಿಂದ ಕಳಚಿ ಬಿದ್ದು ಸ್ಫೋಟಗೊಂಡ ಕ್ಲೋರಿನ್​ ಟ್ಯಾಂಕ್: 12 ಮಂದಿ ಸಾವು, ಭಯಾನಕ ದೃಶ್ಯ ಸೆರೆ

    ಅಮ್ಮಾನ್​: ವಿಷಾನಿಲ ಸೋರಿಕೆಯಾಗಿ 12 ಮಂದಿ ದಾರುಣವಾಗಿರುವ ಸಾವಿಗೀಡಾಗಿರುವ ಘಟನೆ ಜಾರ್ಡನ್​ನಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಾನಿಲ ಸೋರಿಕೆಯ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸೋಮವಾರ ಜಾರ್ಡನ್​ನ ಅಖಾಬಾ ಬಂದರಿನಲ್ಲಿ ಕ್ರೇನ್​ ಒಂದು ಕ್ಲೋರಿನ್​ ಟ್ಯಾಂಕ್​ಗಳನ್ನು ಹಡಗಿಗೆ ಭರ್ತಿ ಮಾಡುತ್ತಿತ್ತು. ಈ ವೇಳೆ ಕ್ರೇನ್​ನಿಂದ ಆಕಸ್ಮಿಕ ಟ್ಯಾಂಕ್​ ಒಂದು ಕೆಳಗೆ ಬಿದ್ದಿದೆ. ಪರಿಣಾಮ ಹಳದಿ ಬಣ್ಣದ ವಿಷಾನಿಲ ಸ್ಫೋಟಗೊಂಡಿದ್ದು, ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 250ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

    ಕ್ರೇನ್​​ ಅಸಮರ್ಪಕ ಕಾರ್ಯದ ಪರಿಣಾಮವಾಗಿ ಸಾಗಿಸುವ ಸಂದರ್ಭದಲ್ಲಿ ರಾಸಾಯನಿಕ ಸಂಗ್ರಹಣೆಯ ಕಂಟೇನರ್ ಕೆಳಗೆ ಬಿದ್ದು, ದುರ್ಘಟನೆ ಘಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ವೈರಲ್​ ಆಗಿದೆ.

    ವಿಡಿಯೋದಲ್ಲಿ ಕ್ಲೋರಿನ್​ ಟ್ಯಾಂಕ್​ ಹೊತ್ತ ಕ್ರೇನ್​ ಅದನ್ನು ಹಡಗಿನ ಮೇಲೆ ಇರಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೇಲಿಂದ ಹಡಗಿನ ಮೇಲೆಯೇ ಟ್ಯಾಂಕ್​ ಬೀಳುತ್ತದೆ. ಪರಿಣಾಮ ತಕ್ಷಣ ಸ್ಫೋಟಗೊಂಡು ಮೋಡದ ರೀತಿಯಲ್ಲಿ ಭಾರೀ ಪ್ರಮಾಣದ ಹಳದಿ ಬಣ್ಣ ಸುತ್ತಮುತ್ತ ಹರಡಿಕೊಳ್ಳುತ್ತದೆ. ಡಕ್‌ವರ್ಕರ್​ಗಳು ವಿಷಕಾರಿ ಹೊಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

    ಘಟನೆಯಲ್ಲಿ ಗಾಯಗೊಂಡಿರುವ 250ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಬಂದರಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಅಕಾಬಾ ನಗರದ ನಿವಾಸಿಗಳು ಮನೆಯ ಒಳಗೆ ಉಳಿಯಲು ಮತ್ತು ಕಿಟಕಿ, ಬಾಗಿಲುಗಳನ್ನು ಮುಚ್ಚಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸ್ಫೋಟ ಸಂಭವಿಸಿರುವ ಸ್ಥಳವನ್ನು ಶುಚಿಗೊಳಿಸಲು ಜಾರ್ಡನ್​ನ ನಾಗರಿಕ ರಕ್ಷಣಾ ಇಲಾಖೆಯು ವಿಶೇಷ ತಂಡಗಳನ್ನು ಬಂದರಿಗೆ ಕಳುಹಿಸಿದೆ.

    ಜಾರ್ಡಾನ್‌ನ ಪ್ರಧಾನಿ ಬಿಷರ್ ಅಲ್-ಖಾಸಾವ್ನೆ ಕೂಡ ಅಕಾಬಾಗೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಅವರು ಸಚಿವ ಮಜೆನ್ ಫರಾಯಾ ಅವರಿಗೆ ಆದೇಶಿಸಿದ್ದಾರೆ.

    ಅಂದಹಾಗೆ ಕ್ಲೋರಿನ್ ಎಂಬುದು ಉದ್ಯಮದಲ್ಲಿ ಮತ್ತು ಮನೆಯ ಶುಚಿಗೊಳಿಸುವ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕವಾಗಿದೆ. ಇದು ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಹಳದಿ-ಹಸಿರು ಅನಿಲವಾಗಿದೆ. ಕ್ಲೋರಿನ್ ಅನ್ನು ಉಸಿರಾಡಿದಾಗ, ನುಂಗಿದಾಗ ಅಥವಾ ಚರ್ಮದ ಸಂಪರ್ಕಕ್ಕೆ ಬಂದಾಗ, ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಮಾಡುವ ಆಮ್ಲಗಳನ್ನು ಉತ್ಪಾದಿಸಲು ಕ್ಲೋರಿನ್​ ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ. (ಏಜೆನ್ಸೀಸ್​)

    ಉಚಿತ ವಿದ್ಯುತ್ ಬದಲು ಡಿಬಿಟಿ ವ್ಯವಸ್ಥೆ: ಸರ್ಕಾರಕ್ಕೆ ಗುರುಚರಣ್ ಸಮಿತಿ ಶಿಫಾರಸು, ಎಸ್ಕಾಂಗಳ ಪುನಶ್ಚೇತನಕ್ಕೆ ಸಲಹೆ

    ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

    ಅಮೇಜಾನ್​, ಗೂಗಲ್​ ಬಿಟ್ಟು ಫೇಸ್​ಬುಕ್​ ಕೆಲ್ಸಕ್ಕೆ ಸೈ ಎಂದ ವಿದ್ಯಾರ್ಥಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts