More

    ಸೊಳ್ಳೆಮೀನಿನ ಮುಂದೊಂದು ಪ್ರಶ್ನಾರ್ಥಕ

    chowkaಕೆಲ ದಿನಗಳ ಹಿಂದೆಯಷ್ಟೇ ಎಲ್ಲೆಡೆ ವಿಶ್ವ ಸೊಳ್ಳೆದಿನ ಆಚರಿಸಲಾಯಿತು. ಉಡಛ್ಟಿಢ ಛಟಜ ಜಚಠ ಜಿಠಿಠ ಛಚಢ ಅನ್ನೋದು ಈ ದಿನದ ಆಚರಣೆಯಿಂದ ಸೊಳ್ಳೆಗೂ ಲಾಗೂ ಆಗಿದೆ. ಹೈದರಾಬಾದಿನ ಬೇಗಂ ಪೇಟ್​ನ ಪುಟ್ಟ ಲ್ಯಾಬ್ ನಲ್ಲಿ 1895 ರ ಆಗಸ್ಟ್ 20ರಂದು ಬ್ರಿಟಿಷ್ ಮೂಲದ ವಿಜ್ಞಾನಿ ರೋನಾಲ್ಡ್ ರಾಸ್ ಅವರು ಹೆಣ್ಣು ಅನಾಫೇಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ ಎಂದು ಕಂಡುಹಿಡಿದ ದಿನವದು. ಆ ದಿನಗಳಲ್ಲಿ ಮಲೇರಿಯಾ ಮಹಾಮಾರಿ ಎಲ್ಲೆಡೆ ತಲ್ಲಣವುಂಟುಮಾಡಿ ಅದಕ್ಕೆ ತುತ್ತಾದವರ ಸರಾಸರಿ ಹತ್ತು ಜನರಲ್ಲಿ ಒಬ್ಬರ ಆಪೋಶನ ಪಡೆಯುವ ಕುಖ್ಯಾತಿಗೊಳಗಾಗಿತ್ತು. ರೋನಾಲ್ಡ್ ರಾಸ್ ಅವರ ಸಂಶೋಧನೆಗಾಗಲೇ ನೂರಿಪ್ಪತ್ತೆಂಟು ವರ್ಷಗಳು ತುಂಬಿವೆ. ಆದರೆ ಸೊಳ್ಳೆಗಳಿಂದ ಹರಡುವ ರೋಗಗಳ ಪಟ್ಟಿಗೆ ಡೆಂಗ್ಯೂ , ಚಿಕುನ್ ಗುನ್ಯಾದಂತಹ ಹೊಸ ಹೊಸ ಕಾಯಿಲೆಗಳು ಸೇರ್ಪಡೆಯಾಗುತ್ತಲೇ ಇವೆ. ಮಾನವ ಇತಿಹಾಸದಲ್ಲಿ ಜರುಗಿದ ಎಲ್ಲ ಯುದ್ಧಗಳಲ್ಲಿ ಸತ್ತವರ ಸಂಖ್ಯೆಗಿಂತ ಸೊಳ್ಳೆಗಳ ಮೂಲಕ ಹರಡಿರುವ ರೋಗದಿಂದ ಸತ್ತವರ ಸಂಖ್ಯೆ ಹೆಚ್ಚು ಎಂದು ಹೇಳಲಾಗುತ್ತದೆ. ಭಾರತದಲ್ಲೇ ನೋಡುವುದಾದರೆ ಕಳೆದ ವರ್ಷ ಸುಮಾರು ಎರಡು ಲಕ್ಷದಷ್ಟು ಡೆಂಗ್ಯೂ, ನಲವತೆôದು ಸಾವಿರ ಮಲೇರಿಯಾ ಮತ್ತು ಒಂದೂವರೆ ಲಕ್ಷದಷ್ಟು ಚಿಕುನ್​ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷವೂ ಸಹ ಅದರಲ್ಲೂ ಪ್ರಮುಖವಾಗಿ ಉತ್ತರ ಭಾರತದಲ್ಲಿ ಉಂಟಾದ ನೆರೆಯ ನಂತರ ಸೊಳ್ಳೆಮೂಲಕ ಹರಡುವ ರೋಗಗಳ ಆರ್ಭಟ ತುಸು ಹೆಚ್ಚಾಗಿಯೇ ಇದೆ.

    ಸೊಳ್ಳೆದಿನದ ಆಸುಪಾಸಿನಲ್ಲಿಯೇ ಆ ದಿನಾಚರಣೆಗೆ ಕಾರಣೀಕರ್ತವಾದ ರಾಜ್ಯದಲ್ಲಿ ನಡೆದಿರುವ ವಿದ್ಯಮಾನವೊಂದು ಇದೀಗ ಚರ್ಚೆಯಲ್ಲಿದೆ. ಅದೇನಪಾ ಅಂದ್ರೆ ಪಕ್ಕದ ಆಂಧ್ರದಲ್ಲಿ ಅಲ್ಲಿನ ಸರ್ಕಾರ ಕೆಲದಿನಗಳ ಹಿಂದೆ ರಾಜ್ಯಾದ್ಯಂತ ಹೊಂಡ, ಕೆರೆಯಂತಹ ಜಲಮೂಲಗಳಲ್ಲಿ ಸುಮಾರು ಒಂದು ಕೋಟಿಯಷ್ಟು ಮೀನು ಮರಿಗಳನ್ನು ಬಿಡುಗಡೆ ಮಾಡಿತ್ತು. ಅಂದ ಹಾಗೇ ಸರ್ಕಾರ ಈ ಮೀನು ಮರಿಗಳನ್ನು ಬಿಟ್ಟಿರುವುದು ಯಾವುದೇ ಮೀನು ಕೃಷಿಯ ಕಾರಣಕ್ಕಲ್ಲ. ಬದಲಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬಂದು ವಕ್ಕರಿಸುವ ಡೆಂಗ್ಯೂ , ಮಲೇರಿಯಾದಂತಹ ಮಹಾಮಾರಿಗಳನ್ನು ಹರಡುವ ಸೊಳ್ಳೆಗಳನ್ನು ಹದ್ದುಬಸ್ತಿನಲ್ಲಿಡಲು. ಸೊಳ್ಳೆಮೀನು ಎಂದೇ ಕರೆಯಲ್ಪಡುವ ಗಾಂಬೂಸಿಯಾ ಎಂಬ ಈ ಪುಟ್ಟ ಮೀನಿನ ಮರಿಗಳನ್ನು ಬಿಟ್ಟಿರುವುದು ಇದೀಗ ಪರಿಣಿತರ ನಡುವೆ ವಾದಕ್ಕೆ ಕಾರಣವಾಗಿದೆ.

    ಸೊಳ್ಳೆಮೀನು ಉರ್ಫ್ ಗಾಂಬೂಸಿಯಾ ಉರ್ಫ್ ಎಚಞಚ್ಠಿಠಜಿಚ ಚ್ಛ್ಛ್ಞಠ ಉತ್ತರ ಅಮೇರಿಕ ಮೂಲದ ಸಿಹಿನೀರಿನಲ್ಲಿ ವಾಸಿಸುವ ಪುಟ್ಟ ಮೀನು. ಇವುಗಳಲ್ಲಿ ಗಾತ್ರದಲ್ಲಿ ಚಿಕ್ಕದಾಗಿರುವ ಗಂಡು ಮೀನು ನಾಲ್ಕು ಸೆಂ.ಮೀ.ಯಷ್ಟು ಉದ್ದವಿದ್ದರೆ ಹೆಣ್ಣು ಏಳು ಸೆಂಮೀ ಉದ್ದವಿರುತ್ತದೆ. ಸೊಳ್ಳೆಯೂ ಸೇರಿದಂತೆ ಹಲವು ಅಕಶೇರುಕಗಳ ಲಾರ್ವೆಗಳು ಇವುಗಳ ಪ್ರಮುಖ ಆಹಾರ. ಹೀಗಾಗಿ ಇವುಗಳನ್ನು ಸೊಳ್ಳೆಗಳ ನಿಯಂತ್ರಣದಲ್ಲಿ ಬಳಸಿಕೊಳ್ಳಲಾಗುತ್ತಿದ್ದು ಇದರಿಂದಲೇ ಸೊಳ್ಳೆಮೀನು ಎಂಬ ಹೆಸರನ್ನು ಇವುಗಳು ಪಡೆದುಕೊಂಡಿವೆ. ವಿಶ್ವಾದ್ಯಂತ ಹೆಚ್ಚುಕಮ್ಮಿ ಎಲ್ಲೆಡೆ ಇವುಗಳು ಕಾಣಸಿಗುವುದರ ಮುಖ್ಯ ಕಾರಣ ಅಲ್ಲಿನ ಆಡಳಿತಗಳು ಸೊಳ್ಳೆ ನಿಯಂತ್ರಣಕ್ಕೆ ಇವನ್ನು ಬಳಸಿರುವುದಲ್ಲದೇ ಮತ್ತೇನಿಲ್ಲ. ಆದರೆ ಇದೀಗ ವಿಶ್ವದ ಆರು ಖಂಡಗಳಲ್ಲಿ ತನ್ನ ಹಾಜರಿ ಹಾಕಿರುವ ಈ ಮೀನು ನಿಜಕ್ಕೂ ಸೊಳ್ಳೆ ನಿಯಂತ್ರಣದಲ್ಲಿ ಅಷ್ಟೊಂದು ಪರಿಣಾಮಕಾರಿಯೇ ಎಂಬುದಿನ್ನೂ ಪ್ರಶ್ಣಾರ್ಥಕವೇ.

    ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆಗಳನ್ನಿಟ್ಟ ಮೇಲೆ ಸುಮಾರು ಒಂದು ವಾರದಿಂದ ಹತ್ತುದಿನಗಳ ಸಮಯದೊಳಗೆ ಲಾರ್ವೆ ನಂತರ ಪ್ಯೂಪ ಹಂತವನ್ನು ದಾಟಿ ಸೊಳ್ಳೆಮರಿಗಳಾಗಿ ರೂಪಾಂತರಗೊಳ್ಳುತ್ತವೆ.ಈ ರೂಪಾಂತರದ ಪ್ರಕ್ರಿಯನ್ನು ತಡೆಗಟ್ಟಿ ಸೊಳ್ಳೆಗಳ ಉತ್ಪತ್ತಿಯನ್ನು ಮೊಗ್ಗಿನಲ್ಲೇ ಚಿವುಟಿ ತಡೆಗಟ್ಟುವುದು ಅವುಗಳ ನಿಯಂತ್ರಣದ ಸಿದ್ಧಸೂತ್ರ. ಅದರ ಪ್ರಕಾರವೇ ನೀರನ್ನು ನಿಲ್ಲಲು ಬಿಡದೇ ಹರಿದು ಹೋಗುವಂತೆ ಮಾಡುವುದು ಅದಾಗದಲ್ಲಿ ನೀರಿಗೆ ದ್ರಾವಣಗಳನ್ನು ಸಿಂಪಡಿಸಿ ಮೊಟ್ಟೆಗಳನ್ನು ಮರಿಗಳಾಗಿ ಬೆಳೆಯದಂತೇ ನೋಡಿಕೊಳ್ಳುವುದು ಇವೆಲ್ಲ ಹೆಚ್ಚು ಬಳಕೆಯಲ್ಲಿರುವ ವಿಧಾನಗಳು.ಅಂತಹುದ್ದೇ ಮತ್ತೊಂದು ವಿಧಾನ ಗಾಂಬೂಸಿಯಾ.

    ಲಾರ್ವೆಬಾಕ ಗಾಂಬೂಸಿಯಾ ದಿನಕ್ಕೆ ನೂರರಿಂದ ಮುನ್ನೂರು ಸೊಳ್ಳೆಗಳ ಲಾರ್ವೆಯನ್ನು ತಿನ್ನುತ್ತದೆ. ಬರಿ ಅಂಕಿ ಅಂಶಗಳನ್ನಷ್ಟೇ ನೋಡುವುದಾದರೆ ಇದು ನಿಜಕ್ಕೂ ಖುಷಿಕೊಡುವ ಸಂಗತಿ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಹೆಣ್ಣು ಗಾಂಬೂಸಿಯಾ ಒಂದು ಬಾರಿ ಅಜಮಾಸು ಇಪ್ಪತೆôದರಷ್ಟು ಮರಿಗಳನ್ನು ಬಿಡುಗಡೆಮಾಡುತ್ತದೆ. ವರ್ಷವೊಂದಕ್ಕೆ ಮೂರರಿಂದ ಆರುಬಾರಿ ತನ್ನ ಬಾಣಂತನವನ್ನು ಮಾಡಿಕೊಳ್ಳುವ ಈ ಮೀನು ಆ ಕಾರಣದಿಂದ ತಾನಿರುವ ಸ್ಥಳದಲ್ಲಿ ಅತಿವೇಗವಾಗಿ ತಮ್ಮ ಕುಲದ ಸಂಖ್ಯೆಯೆನ್ನು ಹೆಚ್ಚಿಸಿಕೊಳ್ಳುತ್ತದೆ. ಒಂದು ಅಂದಾಜಿನಂತೆಯೇ ಹೆಣ್ಣು ಗಾಂಬೂಸಿಯಾ ಮೀನೊಂದು ತನ್ನ ಜೀವಿತಾವಧಿಯಲ್ಲಿ ಸುಮಾರು ಒಂದು ಸಾವಿರ ಮರಿಗಳಿಗೆ ಜನ್ಮ ನೀಡುತ್ತದೆ. ಹೀಗೆ ತಾನಿರುವ ಜಾಗೆಯನ್ನು ಅತಿಕ್ರಮಣ ಮಾಡಿಕೊಳ್ಳುವ ಈ ವಲಸಿಗ ಮೀನು ಅಲ್ಲಿನ ಮೂಲನಿವಾಸಿ ಮೀನುಗಳ ಮೊಟ್ಟೆಗಳನ್ನು ತಿಂದು ಅವುಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತದೆ. ಇದು ಇಷ್ಟಕ್ಕೇ ಮುಗಿಯದೇ ಮೀನುಗಳ ಜೊತೆಗೆ ಕಪ್ಪೆಗಳ ಮೊಟ್ಟೆಗಳನ್ನೂ ತಿಂದು ಇವುಗಳು ತೇಗುವುದರಿಂದ ಆ ಪ್ರದೇಶದ ಕಪ್ಪೆಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಇದು ಆ ಪ್ರದೇಶದ ಜೈವಿಕ ಸಮತೋಲನವನ್ನು ಏರುಪೇರು ಮಾಡುವುದರ ಜೊತೆಗೆ ಸೊಳ್ಳೆಗಳ ಮೊಟ್ಟೆಗಳನ್ನು ತಿಂದು ಆ ಮೂಲಕ ಅವುಗಳ ಸಂಖ್ಯಾ ನಿಯಂತ್ರಣಕ್ಕೆ ಕಾರಣವಾಗುತ್ತಿದ್ದ ಈ ಕಪ್ಪೆಗಳು ಇಲ್ಲವಾಗಿ ಆ ಪ್ರದೇಶದಲ್ಲಿ ಸೊಳ್ಳೆಗಳ ಸಂಖ್ಯೆಯೂ ತಗ್ಗುವುದರ ಬದಲು ಹೆಚ್ಚುತ್ತದೆ. 1990 ರ ದಶಕದಲ್ಲಿ ಈ ಮೀನನ್ನು ನೈನಿತಾಲ್ ನ ಕೆರೆಯಲ್ಲಿ ಪರಿಚಯಿಸಿದ ನಂತರ ನಡೆದ ಪ್ರಕ್ರಿಯೆಗಳು ಈ ಮಾತಿಗೆ ಪುಷ್ಟಿ ನೀಡಿವೆ.

    ಇಲ್ಲಿ ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಗಾಂಬೂಸಿಯಾ ಮೀನುಗಳ ಕುಟುಂಬದಲ್ಲಿ ಒಟ್ಟು ನಲವತ್ತು ವಿವಿಧ ತಳಿಯ ಮೀನುಗಳಿದ್ದು ಅವುಗಳಲ್ಲಿ ಗಾಂಬೂಸಿಯಾ ಆಫೀನಿಸ್ (ಎಚಞಚ್ಠಿಠಜಿಚ ಚ್ಛ್ಛ್ಞಠ) ತಳಿಯದಷ್ಟೇ ಮುಖ್ಯ ಆಹಾರ ಸೊಳ್ಳೆಯ ಲಾರ್ವೆಯಾಗಿದೆ. ಅಂದರೆ ಉಳಿದವುಗಳ್ಯಾವುದೂ ಅಷ್ಟೊಂದು ಸೊಳ್ಳೆಬಾಕವಲ್ಲ. ಹೀಗಾಗಿ ನೈನಿತಾಲ್ ಕೆರೆಯೂ ಸೇರಿದಂತೆ ಹಲವೆಡೆ ಬಿಡುಗಡೆ ಮಾಡಿರುವ ಮೀನುಗಳು ಇದೇ ಗುಂಪಿನ ಮತ್ತೊಂದು ತಳಿಯಾಗಿರುವ ಹಾಗೂ ಸೊಳ್ಳೆಯು ಪ್ರಮುಖ ಆಹಾರವಾಗಿರದ ಗಾಂಬೂಸಿಯಾ ಹಾಲ್ಬೂ›ಕಿ (ಎಚಞಚ್ಠಿಠಜಿಚ ಜಟ್ಝಚ್ಟಿಟಟkಜಿ)ಯೇ ಅನ್ನುವ ಶಂಕೆಯೂ ಇದೆ. ಇವೆಲ್ಲವುದರ ಜೊತೆಗೆ ಈ ತಳಿಯ ಮೀನಿಗೆ ಸಮಯಸಾಧಕ ತಿನ್ನುಬಾಕವೆಂಬ ಅಪವಾದವೂ ಇದೆ. ಅಂದರೆ ಪಾಚಿಯೆಂದರೆ ಗಾಂಬೂಸಿಯಾ ಮೀನುಗಳಿಗೆ ಪಂಚಪ್ರಾಣ.ತಾನಿರುವ ಪ್ರದೇಶದಲ್ಲಿ ಪಾಚಿಯು ಕಂಡುಬಂದರೆ ಅದು ಸೊಳ್ಳೆಗಳನ್ನು ಬಿಟ್ಟು ಪಾಚಿಯ ಹಿಂದೋಡುತ್ತದೆ. ಅಂತಹ ಸನ್ನಿವೇಶದಲ್ಲಿ ಈ ಮೀನನ್ನು ಸಾಕುವ ಉದ್ದೇಶವೇ ಸೋತುಹೋಗುತ್ತದೆ. ಈ ಎಲ್ಲ ಕಾರಣಗಳಿಂದ ಕೆಲಪರಿಣಿತರು ಹೇಳುವಂತೆ ಮನೆಬಳಕೆಯ ನೀರಿನ ಟ್ಯಾಂಕು , ಹೊಂಡದಂತಹ ಈ ಮೀನಿಗೆ ಹೆಚ್ಚು ವೈವಿಧ್ಯಮಯ ಆಹಾರವಿರದಂತಹ ಸ್ಥಳಗಳಲ್ಲಿ ಗಾಂಬೂಸಿಯಾ ಹೆಚ್ಚು ಫಲಕಾರಿಯಾಗಬಹುದು ಆದರೆ ದೊಡ್ಡ ಕೆರೆಗಳಲ್ಲಿ ಈ ಮೀನಿನಿಂದ ಅಡ್ಡಪರಿಣಾಮಗಳೇ ಹೆಚ್ಚಾಗುವ ಸಾಧ್ಯತೆಯಿದೆ.

    ಗಾಂಬೂಸಿಯಾ ಮೀನುಗಳು ಭಾರತಕ್ಕೆ ಪರಿಚಯವಾಗಿದ್ದು 1920 ರ ಆಸುಪಾಸಿನಲ್ಲಿ. ಬೆಂಗಳೂರಿನ ಲಾಲ್ ಬಾಗ್​ನ ಕೆರೆಯ ಮೂಲಕ ಮೊದಲ ಬಾರಿ ಭಾರತೀಯ ಕೆರೆಯ ನೀರು ಕುಡಿದ ಈ ಮೀನು ನಂತರ ದೇಶದ ಎಲ್ಲೆಡೆ ಸೊಳ್ಳೆ ನಿಯಂತ್ರಣಕ್ಕೆಂದು ಪರಿಚಯಿಸಲ್ಪಟ್ಟಿತು. ಆದರೆ ಆಯಾ ಸ್ಥಳೀಯ ಪರಿಸರದ ಮೇಲೆ ತದನಂತರ ಉಂಟಾಗಿರುವ ಪರಿಣಾಮದ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯ ಬೇಕಿದೆ. ಇಲ್ಲವಾದಲ್ಲಿ ಸಂಪೂರ್ಣ ಗಾಂಬೂಸಿಯಾ ಕಾರ್ಯಾಚರಣೆಯು ಊದುವುದನ್ನು ಕೊಟ್ಟು ಬಾರಿಸೋದನ್ನು ತಂದ ರೀತಿಯಾಗಿ ಸೊಳ್ಳೆ ನಿಯಂತ್ರಣದ ಹೆಸರಿನಲ್ಲಿ ಇರುವ ಪರಿಸರವನ್ನು ಹಾಳುಗೆಡವಿದರೆ ಮುಂದಿನ ಜನಾಂಗ ನಮಗೆ ಸೋ ಮೀನ್ ಅಂತ ಹೇಳದೇ ಇರುವುದೇ.

    (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts