More

    ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಆದ್ಯತೆ

    ರಿಪ್ಪನ್‌ಪೇಟೆ: ಪಟ್ಟಣವನ್ನು ಸಮಗ್ರ ಅಭಿವೃದ್ಧಿ ಪಡಿಸುವುದರ ಜತೆಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಹಾಗೂ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸುವುದು ಪ್ರಥಮ ಆದ್ಯತೆ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
    ಪಟ್ಟಣದ ವಿನಾಯಕ ವೃತ್ತದಲ್ಲಿ 9.50 ಕೋಟಿ ರೂ. ವೆಚ್ಚದ ಜೆಜೆಎಂ ಯೋಜನೆಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇಶವಾಸಿಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ನಳಗಳಲ್ಲಿ ನೀರು ಹರಿಯಲಿದೆ. ಪ್ರಸಕ್ತ ಸಾಲಿನಲ್ಲಿ ನೀರಿನ ಕೊರತೆ ಇರುವುದರಿಂದ ಜನರು ನೀರಿನ ಮಿತ ಬಳಕೆ ಮಾಡುವ ಅಗತ್ಯವಿದೆ. ಮುಂದಿನ ವರ್ಷದಲ್ಲಿ 417 ಕೋಟಿ ರೂ. ವೆಚ್ಚದಲ್ಲಿ ಚಕ್ರಾ ಡ್ಯಾಂನಿAದ ಹೊಸನಗರ ತಾಲೂಕಿನ ಪ್ರತಿ ಗ್ರಾಮಗಳಿಗೂ ನೀರು ಹರಿಸಲಾಗುವುದು. ನೀರು ಕೊಡುವ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ನೀರು ಹಂಚಿಕೆ ಮಾಡಲೇಬೇಕು. ಈ ಯೋಜನೆಯನ್ನು ಅಽಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಽಗಳು ಸಮಗ್ರ ಅನುಷ್ಠಾನದಲ್ಲಿ ಆಸಕ್ತಿವಹಿಸಿ ಎಂದರು.
    ಗ್ಯಾರಂಟಿ ಯೋಜನೆಯಿಂದ ನಮ್ಮ ಸರ್ಕಾರ ಜನರಿಗೆ ನೆಮ್ಮದಿಯ ಜೀವನ ಅವಕಾಶ ಮಾಡಿಕೊಟ್ಟಿದೆ. ಒಂದು ಕುಟುಂಬದ ಅಭಿವೃದ್ಧಿಗೆ ಹೆಣ್ಣು ಪ್ರಮುಖ ಕಾರಣಕರ್ತಳಾಗಿದ್ದಾಳೆ. ಆದ್ದರಿಂದಲೇ ಅಕ್ಕ-ತಂಗಿಯರಿಗೆ ಅವರ ದಿನನಿತ್ಯದ ಖರ್ಚಿಗಾಗಿ ಪ್ರತಿ ತಿಂಗಳು ೨ ಸಾವಿರ ರೂ. ಸರ್ಕಾರ ನೀಡುತ್ತಿದೆ ಎಂದರು.
    ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್, ಗ್ರಾಪಂ ಅಧ್ಯಕ್ಷೆ ಧನಲಕ್ಷಿ÷್ಮÃ, ಉಪಾಧ್ಯಕ್ಷ ಸುಽÃಂದ್ರ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts