More

  ದೇಶದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ

  ಗಂಗಾವತಿ: ದೇಶದ ಬೆಳವಣಿಗೆ ಮತ್ತು ಭವಿಷ್ಯದ ದಷ್ಟಿಯಲ್ಲಿ ಮತದಾರರ ಪಾತ್ರ ಮುಖ್ಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಮತದಾನ ಮಹತ್ವದ್ದಾಗಿದೆ ಎಂದು ಚುನಾವಣಾ ವಿಭಾಗದ ರಾಯಭಾರಿ ಡಾ.ಶಿವಕುಮಾರ್ ಮಾಲಿ ಪಾಟೀಲ್ ಹೇಳಿದರು.

  ಇದನ್ನು ಓದಿ:14 ಲೋಕಸಭಾ ಕ್ಷೇತ್ರಗಳಿಗೆ ಮತದಾನ; 2.88 ಕೋಟಿ ಮತದಾರರಿಗೆ ಮತದಾನದ ಹಕ್ಕು
  ನಗರದ ಎಸ್‌ಬಿಐ ಮುಖ್ಯಶಾಖೆ ಕಚೇರಿಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಗ್ರಾಹಕರ ಮತದಾನ ಜಾಗತಿ ಅಭಿಯಾನದಲ್ಲಿ ಮಾತನಾಡಿದರು.


  ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕಿದ್ದು, ಪೂರಕ ಅಭಿವೃದ್ಧಿಗೆ ಸಹಕರಿಸಬೇಕಿದೆ. ಮೇ 7ರಂದು ಜರುಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆ ಬಹು ಮುಖ್ಯ ಎಂದರು.
  ಎಸ್‌ಬಿಐ ವ್ಯವಸ್ಥಾಪಕ ಬ್ರಹ್ಮದೇವ ಸಿಂಗ್ ಮಾತನಾಡಿ, ಮತದಾನ ನಮ್ಮ ಹಕ್ಕು ಅಷ್ಟೆ ಅಲ್ಲದೆ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಿದರೆ ದೇಶದ ನಿರೀಕ್ಷಿತ ಅಭಿವದ್ಧಿ ಸಾಧ್ಯ ಎಂದರು.

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪಾತ್ರದ ಕುರಿತು ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ. ಆಂಜನೇಯ ಮಾತನಾಡಿದರು. ಗ್ರಾಹಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಖಾಧಿಕಾರಿಗಳಾದ ಶ್ರೀನಿವಾಸ, ಸುರೇಂದ್ರ ರೆಡ್ಡಿ, ಕೀರ್ತಿ, ಸತೀಶ, ರಾಮಣ್ಣ, ಅಬ್ದುಲ್ ರವ್ೂ, ಯಮನೂರ, ಗ್ರಾಹಕರಾದ ಹರನಾಯಕ, ಚಿದಾನಂದ ಕೀರ್ತಿ ಇತರರಿದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts