More

    ಸಿಎಂ ಕೆಸಿಆರ್​ ದತ್ತು ಪುತ್ರಿಯ ವಿವಾಹಕ್ಕೆ ಭರದ ಸಿದ್ಧತೆ: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ!

    ಹೈದರಾಬಾದ್​: ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ದತ್ತು ಪುತ್ರಿ ಪ್ರತ್ಯುಷಾರ ಮದುವೆಗೆ ಭಾರಿ ಸಿದ್ಧತೆ ನಡೆದಿದೆ. ಡಿ. 28ರಂದು ಪ್ರತ್ಯುಷಾರ ಮದುವೆ ಬಹಳ ವಿಜೃಂಭಣೆಯಿಂದ ಕರೊನಾ ನಿಯಮ ಅನುಸಾರದಂತೆಯೇ ನಡೆಯಲಿದೆ.

    ರಂಗಾರೆಡ್ಡಿ ಜಿಲ್ಲೆಯ ಕಾಶಂಪೇಟ್​ ಮಂಡಲದ ಅಲ್ವಾಲ್​ ಪಟಿಗಡ್ಡ ಗ್ರಾಮದ ಮಾತಾ ದೇವಸ್ಥಾನದಲ್ಲಿ ನಡೆಯಲಿದ್ದು, ಕ್ರಿಶ್ಚಿಯನ್​ ಸಂಪ್ರದಾಯದಂತೆ ವಿವಾಹ ಸಮಾರಂಭ ಜರುಗಲಿದೆ. ಮದುವೆ ಕಾರ್ಯ ಭರದಿಂದ ಸಾಗಿದ್ದು, ಇದರ ಉಸ್ತುವಾರಿಯನ್ನು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.

    ಇದನ್ನೂ ಓದಿ: ಮಹಿಳಾ ಸಚಿವೆಯ ಆನ್​ಲೈನ್​ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!

    ಚರಣ್​ ರೆಡ್ಡಿ ಮತ್ತು ಪ್ರತ್ಯುಷಾ ನಿಶ್ಚಿತಾರ್ಥ ಅಕ್ಟೋಬರ್​ನಲ್ಲಿ ಹೈದರಾಬಾದ್​ನ ವಿದ್ಯಾನಗರದಲ್ಲಿ ನೆರವೇರಿತ್ತು. ಸಚಿವೆ ಸತ್ಯವತಿ ರಾಥೋಡ್​, ಕಮಿಷನರ್​ ದಿವ್ಯ ದೇವರಾಜನ್​ ಮತ್ತು ಐಎಎಸ್​ ಅಧಿಕಾರಿ ರಘುನಂದನ್​ ರಾವ್​ ಸೇರಿದಂತೆ ಅನೇಕ ಗಣ್ಯರು ನಿಶ್ಚತಾರ್ಥ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.

    ಪ್ರತ್ಯುಷಾ ಮದುವೆ ಆಗಮಿಸುವಂತೆ ಸಿಎಂ ಕೆಸಿಆರ್​ಗೆ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ. ಅಲ್ಲದೆ, ಪ್ರತ್ಯುಷಾಗೆ ನಿಮ್ಸ್​ನಲ್ಲಿ ಕೆಲಸ ನೀಡುವ ಭರವಸೆಯನ್ನು ನೀಡಿದ್ದಾರಂತೆ.

    ರಂಗಾರೆಡ್ಡಿ ಜಿಲ್ಲೆಯಲ್ಲಿ ತಂದೆ ಹಾಗೂ ಮಲತಾಯಿಯಿಂದ ಚಿತ್ರಹಿಂಸೆಗೆ ಒಳಗಾಗಿದ್ದ ಪ್ರತ್ಯುಷಾಳನ್ನು ಐದು ವರ್ಷಗಳ ಹಿಂದೆ ಕೆಸಿಆರ್​ ದತ್ತು ಸ್ವೀಕರಿಸಿದ್ದರು. ಸಿಎಂ ಆದೇಶದ ಮೇರೆಗೆ ಆಕೆಯ ಜವಾಬ್ದಾರಿಯನ್ನು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿತ್ತು.

    ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ಅಂದಹಾಗೆ ಪ್ರತ್ಯುಷಾ ನರ್ಸಿಂಗ್​ ಕೋರ್ಸ್​ ಪೂರ್ಣಗೊಳಿಸಿದ್ದು, ಹೈದರಾಬಾದ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಕೆಸಿಆರ್​ ತನ್ನ ಮದುವೆಗೆ ಖಂಡಿತವಾಗಿ ಬರುತ್ತಾರೆ ಎಂದು ಪ್ರತ್ಯುಷಾ ಹೇಳಿದ್ದರು. (ಏಜೆನ್ಸೀಸ್​)

    ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

    ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

    2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts