ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಪ್ರೇಮ್​; ರಚಿತಾ ಕೈಯಲ್ಲಿ ಬಾಟಲಿ, ರಕ್ಷಿತಾ ಸ್ಟೆಪ್ಸು; ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ರಚ್ಚು?

blank

ಬೆಂಗಳೂರು: ಬೆಂದಕಾಳೂರು ಥಂಡಿ ಆವರಿಸಿದ ವಾತಾವರಣದಿಂದ ಒಂದು ರೀತಿಯಲ್ಲಿ ನೆಂದಕಾಳೂರು ಎಂಬಂತಾಗಿದೆ. ಈ ನಡುವೆ ನಿರ್ದೇಶಕ ಪ್ರೇಮ್​ ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟಿದ್ದಾರೆ, ಜತೆಗೆ ಸುಂಟರಗಾಳಿಯನ್ನೂ ಬಿಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೆ ರಚಿತಾ ರಾಮ್​ ಕೈಯಿಂದ ಬಾಟಲಿ ಎತ್ತಿಸಿದ್ದಾರೆ. ಒಟ್ಟಿನಲ್ಲಿ ರಚ್ಚು ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮೂಡಿದೆ.

ನಟಿ ರಕ್ಷಿತಾ ನಿರ್ಮಾಣ, ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದಲ್ಲಿ ರಕ್ಷಿತಾ ಸೋದರ ರಾಣಾ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್​, ರೀಷ್ಮಾ ನಾಣಯ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ. ‘ಏಕ್ ಲವ್​ ಯಾ’ ಸಿನಿಮಾದ ‘ಯಾರೆ ಯಾರೇ..’, ‘ಹೇಳು ಯಾಕೆ..’ ಎಂಬ ಎರಡು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಿರುವ ಪ್ರೇಮ್​ ನಾಳೆ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

ನಾಳೆ ಸಂಜೆ 5ಕ್ಕೆ ಎ2 ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿರುವ ಮೂರನೇ ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ಹಾಡಿನ ಸಾಹಿತ್ಯ ರಚಿಸಿರುವ ಪ್ರೇಮ್​, ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟಿದ್ದಾರೆ. ಮಾತ್ರವಲ್ಲ ಅದಕ್ಕೆ ‘ಗರ್ಲ್ಸ್​ ಬ್ರೇಕಪ್ ಆ್ಯಂಥೆಮ್’​ ಎಂದೂ ಹೆಸರಿಟ್ಟು, ‘ಕೇಳ್ರಪ್ಪೋ ಕೇಳಿ’ ಎಂದು ಡಂಗುರ ಸಾರಿ ಹೇಳಿದ್ದಾರೆ. ಇದು ಪ್ರೇಮ ವೈಫಲ್ಯವಾಗುವ ಹುಡುಗಿಯರ ಸಾಂಗ್ ಎಂದಿರುವ ಅವರು ಇದರಲ್ಲಿ ಹೆಜ್ಜೆ ಹಾಕಿರುವ ರಚಿತಾ ರಾಮ್​ ಕೈಗೆ ಮದ್ಯದ ಬಾಟಲಿಯನ್ನೂ ಕೊಟ್ಟು ಕಿಕ್ಕೇರಿಸಿ​, ಸುಂಟರಗಾಳಿ ರಕ್ಷಿತಾ ಅವರಿಂದಲೂ ಹೆಜ್ಜೆ ಹಾಕಿಸಿದ್ದಾರೆ. ಹೀಗಾಗಿ ಈ ಗೀತೆ ಈಗಾಗಲೇ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಜನಮಾನಸದಲ್ಲಿ ಶಂಕರ್ ನಾಗ್ ಸದಾ ಜೀವಂತ; ಜನ್ಮದಿನದಂದು ಸ್ಮರಿಸಿಕೊಂಡ ಸ್ಯಾಂಡಲ್​ವುಡ್, ಅಭಿಮಾನಿ ವೃಂದ…

ಅದರಲ್ಲೂ ಈ ಹಿಂದೆ ‘ಐ ಲವ್​ ಯೂ’ ಸಿನಿಮಾದಲ್ಲಿ ಮಾದಕವಾಗಿ ಕಾಣಸಿಕೊಂಡಿದ್ದ ರಚಿತಾ ರಾಮ್​ ಮುಂದೆ ಅಂಥ ಹಾಡಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಣ್ಣೀರು ಹಾಕಿ ಹೇಳಿದ್ದರು. ಆದರೆ ಅವರ ಇನ್ನೂ ಬಿಡುಗಡೆಯಾಗದ ‘ಲವ್ ಯೂ ರಚ್ಚು’ ಸಿನಿಮಾದ ‘ಮುದ್ದು ನೀನು’ ಎಂಬ ಹಾಡು ಎರಡು ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ. ಅದರಲ್ಲೂ ಮತ್ತೆ ಮಾದಕವಾಗಿ ಕಾಣಿಸಿಕೊಂಡಿದ್ದಾರೆ ರಚಿತಾ ರಾಮ್​. ಅಷ್ಟೊಂದು ಮಾದಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿಯೂ ಮತ್ತೆ ಅಷ್ಟೇ ಮಾದಕವಾಗಿ ಕಾಣಿಸಿಕೊಂಡಿದ್ದೇಕೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಚಿತಾ, ‘ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಎಲ್ರೂ ಏನ್ ಮಾಡ್ತಾರೆ, ಅದ್ನೇ ನಾವೂ ಮಾಡಿದ್ದೀವಿ’ ಎಂದು ಕಿಚ್ಚು ಹೊತ್ತಿಸಿದ್ದರು.

ಇದನ್ನೂ ಓದಿ: ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…

ಇನ್ನು ‘ಏಕ್​ ಲವ್​ ಯಾ’ದಲ್ಲಿ ಬಾಟಲಿ ಕೈಗೆತ್ತಿಕೊಂಡು ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ?’ ಎಂದು ಹೆಜ್ಜೆ ಹಾಕಲಿರುವ ರಚಿತಾ ಅದು ಹೇಗೆ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ರಚ್ಚು ಕಿಚ್ಚು, ಸುಂಟರಗಾಳಿ ರಕ್ಷಿತಾ, ಪ್ರೇಮ್ ಲಿರಿಕ್ಕು ಎಲ್ಲ ಸೇರಿ ಈ ಹಾಡು ಕಿಕ್ಕೇರಿಸಲಿದೆಯೇ ಎಂಬ ಕುತೂಹಲ ಸ್ಯಾಂಡಲ್​ವುಡ್​​ನಲ್ಲಿ ಮೂಡಿದೆ.

ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…