More

    ಊಟಿಯಲ್ಲಿ ಪ್ರೇಮ್​ ‘ಏಕ್​ ಲವ್​ ಯಾ’

    ಬೆಂಗಳೂರು: ಈಗಾಗಲೇ ‘ಏಕ್​ ಲವ್​ ಯಾ’ ಚಿತ್ರದ ಅರ್ಧ ಭಾಗದ ಸಿನಿಮಾ ಶೂಟಿಂಗ್​ ಮುಗಿಸಿಕೊಂಡಿರುವ ನಿರ್ದೇಶಕ ಪ್ರೇಮ್​, ಈಗ ಮತ್ತೆ ಆ್ಯಕ್ಷನ್​ ಕಟ್​ ಹೇಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಂತೆ ಇಡೀ ತಂಡದೊಟ್ಟಿಗೆ ಊಟಿಯಲ್ಲಿ ಬೀಡು ಬಿಟ್ಟಿದ್ದಾರೆ.

    ಇದನ್ನೂ ಓದಿ: ಹೊಸ ಮನ್ವಂತರದತ್ತ ಚಿತ್ರಮಂದಿರಗಳು

    ಸದ್ಯ ಊಟಿಯಲ್ಲಿ ಲೊಕೇಷನ್​ ಹುಡುಕುವುದರಲ್ಲಿ ಬಿಜಿಯಾಗಿರುವ ಪ್ರೇಮ್​, ಚಿತ್ರದ ಒಂದಷ್ಟು ಪ್ಯಾಚ್​ವರ್ಕ್​ ಕೆಲಸಗಳನ್ನು ಮುಗಿಸಿಕೊಳ್ಳಲಿದ್ದಾರೆ. ಆ ಬಳಿಕ ಕಾಶ್ಮೀರ ಮತ್ತು ರಾಜಸ್ತಾನದಲ್ಲಿಯೂ ಶೂಟಿಂಗ್​ ನಡೆಯಲಿದೆ.

    ಈ ಸಂಬಂಧ ಕಿರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿರುವ ಪ್ರೇಮ್​, ಥಿಯೇಟರ್ ಓಪನ್​ ಆದರೆ ಅನ್ನ. ನಾವು ಹೇಗೆ ಭರವಸೆಯಿಂದ ಶೂಟಿಂಗ್​ ಹೋಗುತ್ತಿದ್ದೇವೋ, ಅದೇ ರೀತಿ ಇಡೀ ಕರ್ನಾಟಕದ ಜನ ಥಿಯೇಟರ್​ಗೆ ಬಂದು ಸಿನಿಮಾ ನೋಡಲಿ. ಎಲ್ಲವೂ ಮೊದಲಿನಂತಾಗಲಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: PHOTOS| ಮನಾಲಿಯಲ್ಲಿ ಪ್ರಣೀತಾ ಹಂಗಾಮಾ

    ಪ್ರೇಮ್​ ನಿರ್ದೇಶನದ ಈ ಸಿನಿಮಾದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡುತ್ತಿದ್ದಾರೆ. ರಚಿತಾ ರಾಮ್​ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

    ಬಂಧನವಾಗಿ ತಿಂಗಳ ಬಳಿಕ ರಿಯಾ ಚಕ್ರವರ್ತಿಗೆ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts