More

    ಯಾರ ಲೈಫಲ್ಲಿ ಏರಿಳಿತ ಇರಲ್ಲ ಹೇಳಿ? ಮತ್ತೆ ಗಂಡನ ಜತೆಯಾದ ಪೂನಂ

    ಮುಂಬೈ: ಎರಡ್ಮೂರು ದಿನಗಳ ಹಿಂದಷ್ಟೇ ತಮ್ಮ ಗಂಡ ಸ್ಯಾಮ್​ ಬಾಂಬೆ ವಿರುದ್ಧ ದೈಹಿಕ ಹಲ್ಲೆ ನಡೆಸಿದ್ದಿಕ್ಕೆ ದೂರು ಕೊಡುವುದುರ ಜತೆಗೆ ಡೈವೋರ್ಸ್​ ಕೊಡುವುದಕ್ಕೆ ಯೋಚಿಸಿದ್ದ ಪೂನಂ ಪಾಂಡೆ, ಇದೀಗ ಮತ್ತೆ ಗಂಡನ ಮನೆಗೆ ವಾಪಸ್ಸು ಹೋಗಲು ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ: ಕಾರಾವಾನ್​ನಲ್ಲಿ ಕುಳಿತು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಂತೆ ಸುಶಾಂತ್​

    ಇದಕ್ಕೂ ಮುನ್ನ ತನ್ನ ಗಂಡನ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಪ್ರಕರಣದಲ್ಲಿ ಸ್ಯಾಮ್​ ಬಂಧನವಾಗಿ, ಬೇಲ್​ ಮೇಲೆ ಹೊರಗೆ ಬಂದಿದ್ದರು. ಆ ನಂತರ ಸ್ಯಾಮ್​, ಪೂನಂ ಎದುರು ಸಿಕ್ಕಾಪಟ್ಟೆ ಅತ್ತರಂತೆ. ಹಾಗಾಗಿ ಅವರ ಮೇಲಿನ ಅನುಕಂಪದಿಂದ ದೂರು ಹಿಂದೆ ಪಡೆಯಲು ಪೂನಂ ಮುಂದಾಗಿದ್ದರು.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸ್ಯಾಮ್​ ಈ ವಿಷಯವಾಗಿ ತುಂಬಾ ನೊಂದಿದ್ದಾರೆ. ಸತತವಾಗಿ ಅಳುತ್ತಲೇ ಇದ್ದಾರೆ. ನನಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಪ್ರತೀ ಬಾರಿ ಅವರು ನನಗೆ ಹೊಡೆದ ಮೇಲೆ, ಸಾರಿ ಎಂದು ಅಳುತ್ತಾರೆ. ಈ ಬಾರಿ ಸಹ ಅವರು ಅದೇ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಾಮಿಸ್​ ಮಾಡಿದ್ದಾರೆ’ ಎಂದು ಹೇಳಿದ್ದರು.

    ಇದನ್ನೂ ಓದಿ: ವಿಚಾರಣೆ ವೇಳೆ ಮೂರು ಬಾರಿ ಅತ್ತರಂತೆ ದೀಪಿಕಾ!

    ಈಗ ದೂರು ವಾಪಸ್ಸು ಪಡೆಯುವುದಷ್ಟೇ ಅಲ್ಲ, ಸ್ಯಾಮ್​ ಜತೆಗೆ ವಾಸಿಸುವುದಕ್ಕೆ ಪೂನಂ ನಿರ್ಧರಿಸಿದ್ದಾರೆ. ಈ ಕುರಿತು ಇನ್ನೊಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಎಲ್ಲವೂ ಬಗೆಹರಿದಿದೆ. ನಾವಿಬ್ಬರೂ ಜತೆಯಾಗಿ ವಾಸಿಸುವುದಕ್ಕೆ ತೀರ್ಮಾನಿಸಿದ್ದೇವೆ. ನಾವಿಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತೇವೆ. ಏನೋ ಕೆಟ್ಟ ಘಳಿಗೆ, ಹೀಗಾಗಿ ಹೋಯಿತು. ಎಲ್ಲಾ ಮದುವೆಗಳಲ್ಲೂ ಈ ರೀತಿಯ ಏರಿಳಿತಗಳು ಇದ್ದೇ ಇರುತ್ತದೆ. ನಮ್ಮ ಲೈಫ್​ನಲ್ಲೂ ಹೀಗಾಗಿ ಹೋಯಿತು ಮತ್ತು ಸಿಕ್ಕಾಪಟ್ಟೆ ಸುದ್ದಿಯಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.

    ಎಸ್​ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts