More

    ಸಾಂಸ್ಕೃತಿಕ ಉತ್ಸವದಿಂದ ಪ್ರತಿಭೆ ಅನಾವರಣ -ಪ್ರಶಾಂತ್ ಶೆಟ್ಟಿ



    ಮಂಗಳೂರು : ನಗರದ ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಎ.ಜೆ.ಐ.ಟಿ. ಆಕಾರ್
    -2024 ರಾಜ್ಯ ಮಟ್ಟದ ಎರಡು ದಿನಗಳ ತಾಂತ್ರಿಕ ಸಾಂಸ್ಕೃತಿಕ ಸ್ಪರ್ಧೆ ಜರಗಿತು.
    ಕಾರ್ಯಕ್ರಮ ಉದ್ಘಾಟಿಸಿದ ಲಕ್ಷ್ಮಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಪ್ರತೀ ವರ್ಷ ರಾಜ್ಯಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವವನ್ನು ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ ಶುಭ ಹಾರೈಸಿದರು. ಕಾಲೇಜಿನ ಡೀನ್ ಡಾ.ಮಹಾಬಲೇಶ್ವರಪ್ಪ ಪಿ, ಉಪ
    ಪ್ರಾಂಶುಪಾಲ ಆ್ಯಂಟನಿ ಪಿ.ಜೆ., ವಿದ್ಯಾರ್ಥಿ ಸಂಯೋಜಕರಾದ ಪ್ರಕೃತಿ ಎಸ್ ಶೆಟ್ಟಿ, ರಾಹುಲ್ ಡಿ ಶೆಟ್ಟಿ, ಅಕ್ಷ ಶೆಟ್ಟಿ, ಗ್ರೀಷ್ಮ ಸಿ ಪೂಜಾರಿ, ಎಸ್ ಅಥ್ರೇಯ ಶಂಕರ್, ವೈಶಿಷ್ಟ್ಯ ಪಿ, ಅನ್ವಿತ ವಸುದೇವ್, ಭುವನ್ ಶೆಟ್ಟಿ, ಹಾರ್ದಿಕ್ ರೈ ಮತ್ತು ನಮ್ರತಾ ಶೆಟ್ಟಿ ಉಪಸ್ಥಿತರಿದ್ದರು.
    ಡಾ. ರಿತಿನ್ ಕುಮಾರ್ ವಿವಿಧ ಸ್ಪರ್ಧೆಗಳ ಕುರಿತು ವಿವರ ನೀಡಿದರು. ಕಾರ್ಯಕ್ರಮದ ಸಂಘಟಕ ಡಾ.ಅಮರನಾಥ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ತೃಪ್ತಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ದ್ರುವ್ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts