More

    ವಿಜೆ ಚಿತ್ರಾ ಪತಿ ಅರೆಸ್ಟ್​: ಗಂಡನ ವರ್ತನೆಗೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದರಾ ಕಲಾವಿದೆ?

    ಚೆನ್ನೈ: ಖ್ಯಾತ ಕಿರುತೆರೆ ಕಲಾವಿದೆ ಹಾಗೂ ವಿಡಿಯೋ ಜಾಕಿ ಚಿತ್ರಾ ಸಾವಿನ ಪ್ರಕರಣದಲ್ಲಿ ಚೆನ್ನೈನ ನಜರತ್​ಪೇಟೆ ಪೊಲೀಸರು ಚಿತ್ರಾ ಪತಿ ಹಾಗೂ ಉದ್ಯಮಿ ಹೇಮಂತ್​ರನ್ನು ಸೋಮವಾರ ಬಂಧಿಸಿದ್ದಾರೆ.

    ಡಿಸೆಂಬರ್​ 9ರ ನಸುಕಿನ ಜಾವ ಪೂನಮಲ್ಲಿಯಲ್ಲಿರುವ ಪಂಚತಾರಾ ಹೋಟೆಲ್​​ನಲ್ಲಿ ಚಿತ್ರಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ಸಮಯದಲ್ಲಿ ಪತಿ ಹೇಮಂತ್​ ಸಹ ಹೋಟೆಲ್​ನಲ್ಲಿದ್ದರು. ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಚಿತ್ರಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಹೇಮಂತ್​ರನ್ನು ಪೊಲೀಸರು ಬಂಧಿಸಲಾಗಿದೆ.

    ಹೇಮಂತ್​ ಮತ್ತು ಚಿತ್ರಾ ಕೆಲವು ತಿಂಗಳ ಹಿಂದಷ್ಟೇ ರಿಜಿಸ್ಟರ್​ ಮದುವೆಯಾಗಿದ್ದರು. ಮುಂದಿನ ಜನವರಿಯಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಡಿ.9ರಂದು ಚಿತ್ರಾರ ದಿಢೀರ್​ ಸಾವು ಪಾಲಕರು, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಆಘಾತ ಉಂಟುಮಾಡಿತ್ತು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯ ಸಾವಿನಲ್ಲಿ ಏನೋ ವಂಚನೆ ನಡೆದಿದೆ ಎಂದು ಪಾಲಕರು ಆರೋಪಿಸಿದ್ದರು. ಅಲ್ಲದೆ, ಪತಿ ಕಿರುಕುಳ ನೀಡಿದ್ದಾನೆಂದು ದೂರಿದ್ದರು.

    ಇದನ್ನೂ ಓದಿ: ಶ್ರೀರಾಮಚಂದ್ರ ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿಸಿದ ಮಾಜಿ ಸಿಎಂ ಅಖಿಲೇಶ್​!

    ಹೇಮಂತ್​ರನ್ನು ವಶಕ್ಕೆ ಪಡೆದಿದ್ದ ನಜರತ್​ಪೇಟೆ ಪೊಲೀಸರು ಸುಮಾರು 6 ದಿನಗಳ ವಿಚಾರಣೆಯ ಬಳಿಕ ಇದೀಗ ಹೇಮಂತ್​ರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಚಿತ್ರಾರ ಶವಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತವಾಗಿದ್ದು, ಕಳೆದ ಗುರುವಾರ ಸಂಜೆ ಅವರ ಅಂತ್ಯಕ್ರಿಯೆಯು ನೆರವೇರಿದೆ. ಗಂಡ ಹೇಮಂತ್​ ನಡತೆಯ ಮೇಲೆ ಚಿತ್ರಾರ ತಾಯಿಗೆ ಅನುಮಾನ ಬಂದಾಗಿನಿಂದ ಆತನಿಂದ ದೂರವಾಗವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಚಿತ್ರಾ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಮದ್ಯ ವ್ಯಸನಿಯಾಗಿದ್ದ ಹೇಮಂತ್​, ಚಿತ್ರಾ ವಿಚಾರದಲ್ಲಿ ಅತಿಯಾದ ಪೊಸೆಸಿವ್​ನೆಸ್​ ಇತ್ತಂತೆ. ಸೀರಿಯಲ್​ಗಳಲ್ಲಿ ರೊಮ್ಯಾಂಟಿಕ್​ ದೃಶ್ಯದಲ್ಲಿ ನಟನೆ ಮಾಡಿದರೆ ಶೂಟಿಂಗ್​ ಸೆಟ್​ನಲ್ಲಿ ಚಿತ್ರಾಳನ್ನು ಬೈಯುತ್ತಿದ್ದರು ಎಂದು ವರದಿಯಾಗಿದೆ.

    ತಮಿಳು ಕಿರುತೆರೆ ಲೋಕದಲ್ಲಿ ಚಿತ್ರಾ ಅವರು ತುಂಬಾ ಹೆಸರು ಮಾಡಿದ್ದಾರೆ. ಮಕ್ಕಳ್​ ಟಿವಿ, ಜಯ ಟಿವಿ ಮತ್ತು ಝೀ ತಮಿಳ್​​ ಸೇರಿದಂತೆ ಪ್ರಮುಖ ಟಿವಿ ಚಾನಲ್​ಗಳನ್ನು ಚಿತ್ರಾ ಹೋಸ್ಟ್​ ಮಾಡಿದ್ದಾರೆ. ಅನೇಕ ಸೀರಿಯಲ್​ಗಳಲ್ಲೂ ನಟನೆ ಮಾಡಿದ್ದಾರೆ.

    ಇದನ್ನೂ ಓದಿ: ನರ್ಸ್​ಗಳ ಬೆತ್ತಲೆ ಚಿತ್ರವನ್ನ ಕದ್ದುಮುಚ್ಚಿ ಸರೆಹಿಡಿಯುತ್ತಿದ್ದ ಯುವತಿ! ಅದನ್ನು ನೋಡುತ್ತಿದ್ದ ಪ್ರಿಯಕರನ ಕಥೆ ಏನಾಯ್ತು?

    2014-2018ರ ನಡುವೆ ಸನ್​ ಟಿವಿಯಲ್ಲಿ ಪ್ರಸಾರವಾಗ ಚಿನ್ನ ಪಾಪಾ ಪೆರಿಯಾ ಪಾಪಾ, ವಿಜಯ ಟಿವಿಯಲ್ಲಿ ಪ್ರಸಾರವಾದ ಸರವಣನ್​ ಮಿನಾಟ್ಚಿ ಸೀಸನ್​-2 ಮತ್ತು ಝೀ ತಮಿಳು ಚಾನಲ್​ನಲ್ಲಿ 2016 ಮತ್ತು 2017ರ ನಡುವೆ ಪ್ರಸಾರವಾದ ಡಾರ್ಲಿಂಗ್​ ಡಾರ್ಲಿಂಗ್​ ಸೀರಿಯಲ್​ಗಳ ಮೂಲಕ ಚಿತ್ರಾ ಮನೆ ಮಾತಾದರು. ಅನೇಕ ಟಿವಿ ಕಾರ್ಯಕ್ರಮದ ನಿರೂಪಣೆಯನ್ನು ಸಹ ಮಾಡಿದ್ದಾರೆ.

    ಚಿತ್ರಾ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು 2018 ಅಕ್ಟೋಬರ್​ನಲ್ಲಿ ವಿಜಯ ಟಿವಿಯಲ್ಲಿ ಆರಂಭವಾದ ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿ. ಈ ಸೀರಿಯಲ್​ 500 ಎಪಿಸೋಡ್​ಗಳನ್ನು ದಾಟಿತ್ತು. ಈ ಸೀರಿಯಲ್​ ತೆಲುಗಿನಲ್ಲಿ ವಂದಿನಮ್ಮ, ಕನ್ನಡದಲ್ಲಿ ವರಲಕ್ಷ್ಮೀ ಸ್ಟೋರ್ಸ್​, ಮರಾಠಿಯಲ್ಲಿ ಸಹಕುಟುಂಬ ಸಹಪರಿವಾರ್​, ಬೆಂಗಾಳಿಯಲ್ಲಿ ಭಾಗ್ಗೊಲೊಕ್ಕಿ, ಮಲಯಾಳಂನಲ್ಲಿ ಸಾಂತ್ವಾನಂ ಮತ್ತು ಹಿಂದಿಯಲ್ಲಿ ಗುಪ್ತಾ ಬ್ರದರ್ಸ್​ ಹೆಸರಿನಲ್ಲಿ ಅನೇಕ ಭಾಷೆಗಳಿಗೆ ರಿಮೇಕ್​ ಆಗುವ ಮೂಲಕ ಭಾರಿ ಸಂಚಲನ ಮೂಡಿಸಿತ್ತು. (ಏಜೆನ್ಸೀಸ್​)

    ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ! ಕಿಟಕಿಯೊಳಗೆ ಇಣುಕಿ ಬೆಚ್ಚಿಬಿದ್ದ ಸ್ಥಳೀಯರು

    ವಿಜೆ ಚಿತ್ರಾರ ದಿಢೀರ್​ ಸಾವಿನ ಬೆನ್ನಲ್ಲೇ ಪಾಲಕರ ಆರೋಪ: ಪೊಲೀಸರ ಮುಂದೆ ಭಾವಿ ಪತಿಯ ಶಾಕಿಂಗ್​ ಹೇಳಿಕೆ!

    ಚಿತ್ರಾ ಸಾವಿನ ಹಿಂದೆ ರಾಜಕಾರಣಿಯ ಹೆಸರು? ಹೋಟೆಲ್​ಗೂ ಭೇಟಿ ನೀಡಿದ್ದರಂತೆ ಸಚಿವರು!

    ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts